ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಕ್ಷಣಗಳು ಕೇವಲ 2 ವಾರಗಳಲ್ಲಿ ಕಾಣಿಸಿಕೊಳ್ಳಬೇಕೆಂದೇನಿಲ್ಲ

|
Google Oneindia Kannada News

ಬೆಂಗಳೂರು, ಮಾರ್ಚ್ 22: ಕೊರೊನಾ ಲಕ್ಷಣಗಳು ಕೇವಲ 14 ದಿನಗಳಲ್ಲೇ ಕಾಣಿಸಿಕೊಳ್ಳಬೇಕೆಂದೇನಿಲ್ಲ ಎರಡು ವಾರಗಳ ಬಳಿಕವೂ ಕಾಣಿಸಿಕೊಳ್ಳಬಹುದು ಎಂದು ವರದಿಯೊಂದು ಹೇಳಿದೆ.

Recommended Video

2 people disobeying home quarentine in Chitradurga | Oneindia Kannada

ಕೊರೊನಾ ಸೋಂಕಿನ ಲಕ್ಷಣಗಳು ಎಲ್ಲರಲ್ಲಿ ಒಂದೇ ರೀತಿಯಾಗಿ ಕಾಣಿಸಿಕೊಳ್ಳುವುದಿಲ್ಲ, ಕೆಲವರಲ್ಲಿ ಎರಡೇ ದಿನಕ್ಕೆ ಕಾಣಿಸಿಕೊಳ್ಳಬಹುದು, ಇನ್ನೂ ಕೆಲವರಲ್ಲಿ ಒಂದು ವಾರದ ಬಳಿಕ ಕಾಣಿಸಿಕೊಳ್ಳಬಹುದು.

ಇಸ್ರೇಲ್ ಕಂಡು ಹಿಡಿದ ಹೊಸ ಕೊರೊನಾ ವೈರಸ್ ಟೆಸ್ಟ್‌ ಕಿಟ್ ವಿಶೇಷವೇನು?ಇಸ್ರೇಲ್ ಕಂಡು ಹಿಡಿದ ಹೊಸ ಕೊರೊನಾ ವೈರಸ್ ಟೆಸ್ಟ್‌ ಕಿಟ್ ವಿಶೇಷವೇನು?

ಇನ್ನೂ ಕೆಲವಷ್ಟು ಮಂದಿಯಲ್ಲಿಎರಡು ವಾರ ಇನ್ನೂ ಕೆಲವು ಮಂದಿಯಲ್ಲಿ ಎರಡು ವಾರಗಳು ಮುಗಿದ ಮೇಲೂ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಅದಕ್ಕೆ ನಿರ್ದಿಷ್ಟವಾಗಿ ಇಂತಿಷ್ಟೇ ದಿನಗಳು ಎಂದು ಇರುವುದಿಲ್ಲ.

ಅವರ ಸಂಪರ್ಕಕ್ಕೆ ಹೋದವರಿಗೆ 14 ದಿನಗಳ ಕಾಲ ಪ್ರತ್ಯೇಕವಾಗಿ ಎಂದು ಸೂಚಿಸಲಾಗುತ್ತದೆ. ಅಂದರೆ ಕೊರೊನಾ ಸೋಂಕು ತಗುಲಿದ್ದರೆ ಆ ಎರಡು ವಾರಗಳ ಒಳಗೆ ಲಕ್ಷಣ ಕಾಣಿಸಿಕೊಳ್ಳುತ್ತದೆ ಎಂಬುದು ವೈದ್ಯರ ಅಭಿಪ್ರಾಯವಾಗಿತ್ತು.

ಎಲ್ಲರಿಗೂ 14 ದಿನಗಳಲ್ಲೇ ರೋಗದ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ

ಎಲ್ಲರಿಗೂ 14 ದಿನಗಳಲ್ಲೇ ರೋಗದ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ

ಅಧ್ಯಯನವೊಂದರ ಪ್ರಕಾರ ಕೇವಲ ಎರಡು ವಾರಗಳಲ್ಲೇ ರೋಗದ ಲಕ್ಷಣಗಳು ಕಾಣಿಸುವುದಿಲ್ಲ. ಅವರಿಗೆ ಕೊರೊನಾ ತಗುಲಿದೆಯೇ ಇಲ್ಲೋ ಎಂದು ಗೊತ್ತಾಗಲು 14 ದಿನಗಳಿಗಿಂತಲೂ ಹೆಚ್ಚು ಸಮಯ ಕಾಯಬೇಕು.

ಅಧ್ಯಯನದಲ್ಲಿ ಮಧ್ಯವಯಸ್ಕರ ತಪಾಸಣೆ

ಅಧ್ಯಯನದಲ್ಲಿ ಮಧ್ಯವಯಸ್ಕರ ತಪಾಸಣೆ

ಈ ಅಧ್ಯಯನದ ಸಂದರ್ಭದಲ್ಲಿ ಮಧ್ಯವಯಸ್ಕರನ್ನೇ ಹೆಚ್ಚಾಗಿ ತಪಾಸಣೆ ಮಾಡಲಾಗಿತ್ತು. ಅವರಲ್ಲಿ ಸುಮಾರು ಶೇ.59.8 ಮಂದಿ ಕೊರೊನಾ ವೈರಸ್ ಉಗಮ ಸ್ಥಾನವಾದ ಚೀನಾದ ಹ್ಯುಬೆ ಪ್ರಾಂತ್ಯಕ್ಕೆ ಪ್ರಯಾಣ ಮಾಡಿದ್ದವರಾಗಿದ್ದರು. ಉಳಿದವರು ಹೀಗೆ ಸೋಂಕು ಪೀಡಿತರ ಸಂಪರ್ಕಕ್ಕೆ ಹೋಗಿ ವೈರಸ್ ತಗುಲಿದವರಾಗಿದ್ದರು.

ಡೆಡ್ಲಿ ಕೊರೊನಾಕ್ಕೆ ಅಮೆರಿಕದಲ್ಲಿಯೂ ನಿಲ್ಲುತ್ತಿಲ್ಲ ಸಾವಿನ ಸರಣಿಡೆಡ್ಲಿ ಕೊರೊನಾಕ್ಕೆ ಅಮೆರಿಕದಲ್ಲಿಯೂ ನಿಲ್ಲುತ್ತಿಲ್ಲ ಸಾವಿನ ಸರಣಿ

 ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಈ ವರದಿ ನೀಡಿದೆ

ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಈ ವರದಿ ನೀಡಿದೆ

ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸೋಂಕು ನಿಯಂತ್ರಣ ಮತ್ತು ಆಸ್ಪತ್ರೆ ಸಾಂಕ್ರಾಮಿಕ ರೋಗ ಶಾಸ್ತ್ರದ ಜರ್ನಲ್ ನಲ್ಲಿ ಈ ಅಧ್ಯಯನದ ವರದಿಯನ್ನು ಪ್ರಕಟಿಸಲಾಗಿದೆ. ಜನವರಿ 20 ರಿಂದ ಫೆಬ್ರವರಿ 12ವರೆಗೆ ಒಟ್ಟು 175 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ ಕೆಲವರಿಗೆ 14 ದಿನಗಳ ಗೃಹ ಬಂಧನದಲ್ಲಿಡಲಾಗಿತ್ತು. ಅಷ್ಟರಲ್ಲೇ ಲಕ್ಷಣಗಳು ಕಂಡು ಬಂದಿತ್ತು. ಆದರೆ ಇನ್ನೂ ಕೆಲವರಿಗೆ ಈ ಅವಧಿಯಲ್ಲಿ ಲಕ್ಷಣಗಳು ಪತ್ತೆಯಾಗಿರಲಿಲ್ಲ.

ಚೀನಾಕ್ಕೆ ಹೋಗಿ ಬಂದಿದ್ದ ಶೇ.95 ರಷ್ಟು ಮಂದಿಗೆ ಕೊರೊನಾ

ಚೀನಾಕ್ಕೆ ಹೋಗಿ ಬಂದಿದ್ದ ಶೇ.95 ರಷ್ಟು ಮಂದಿಗೆ ಕೊರೊನಾ

ಹ್ಯುಬೆಗೆ ಹೋಗಿಬಂದಿದ್ದ ಬಹುತೇಕ ಮಂದಿಯಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ. ಈ ಮಂದಿಯಲ್ಲಿ ಕೊರೊನಾ ಪತ್ತೆಯಾಗಲು 12-17 ದಿನಗಳ ಕಾಲಾವಾಶ ಬೇಕಾಯಿತು. ಹಾಗಾಗಿ ಹದಿನಾಲ್ಕು ದಿನ ಈ ಕೊರೊನಾ ವೈರಸ್ ಪತ್ತೆಗೆ ಸಾಕಾಗುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

English summary
Some coronavirus (Covid-19) patients might need a quarantine period longer than the currently mandated two weeks to become completely un-contagious, a new study has suggested.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X