• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೊಲೆಮನಿ ಹತ್ಯೆಗೆ ಡೊನಾಲ್ಡ್ ಟ್ರಂಪ್ ವಿರುದ್ಧ ಪ್ರತೀಕಾರ: ಇರಾನ್ ಎಚ್ಚರಿಕೆ

|
Google Oneindia Kannada News

ಟೆಹರಾನ್, ಜನವರಿ 22: ತಮ್ಮ ಅಧಿಕಾರಾವಧಿಯುದ್ದಕ್ಕೂ ಇರಾನ್ ಜತೆ ಸಂಘರ್ಷ ನಡೆಸುತ್ತಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಇರಾನ್ ಎಚ್ಚರಿಕೆ ನೀಡಿದೆ.

ಡೊನಾಲ್ಡ್ ಟ್ರಂಪ್ ಅವರು ಯುದ್ಧ ವಿಮಾನದ ನೆರಳಿನ ಅಡಿ ಗಾಲ್ಫ್ ಆಡುತ್ತಿರುವ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಇರಾನ್ ಸರ್ವೋಚ್ಚ ಅಧಿಕಾರಿಯ ಕಚೇರಿ, 2020ರಲ್ಲಿ ನಡೆದ ಮಾರಕ ಡ್ರೋನ್ ದಾಳಿಗೆ ಆದೇಶ ನೀಡಿದ್ದಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದೆ.

ಸೇಡಿಗೆ ಸೇಡು, ರಕ್ತಕ್ಕೆ ರಕ್ತ..! ಇದು ಇರಾನ್ ಸರ್ವಾಧಿಕಾರಿ ಶಪಥ..!ಸೇಡಿಗೆ ಸೇಡು, ರಕ್ತಕ್ಕೆ ರಕ್ತ..! ಇದು ಇರಾನ್ ಸರ್ವಾಧಿಕಾರಿ ಶಪಥ..!

ಆಯತೊಲ್ಲ ಅಲಿ ಖಮೆನಿಯ ಟ್ವಿಟ್ಟರ್ ಖಾತೆಯ ಮೂಲಕ ಗುರುವಾರ ಈ ಟ್ವೀಟ್ ಮಾಡಲಾಗಿದ್ದು, ಇರಾನ್‌ನ ವಿದೇಶಿ ಕಾರ್ಯಾಚರಣೆಯ ಮುಖ್ಯಸ್ಥರಾಗಿದ್ದ ಜನರಲ್ ಖಾಸಿಂ ಸೊಲೆಮನಿ ಮತ್ತು ಅವರ ಲೆಫ್ಟಿನೆಂಟ್ ಅವರನ್ನು ಬಾಗ್ದಾದ್ ವಿಮಾನ ನಿಲ್ದಾಣದ ಹೊರಭಾಗದಲ್ಲಿ ವೈಮಾನಿಕ ದಾಳಿ ನಡೆಸಿ ಹತ್ಯೆ ಮಾಡಿದ ಘಟನೆಗೆ ತಕ್ಕ ಪ್ರತಿಫಲ ಎದುರಿಸುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಎಚ್ಚರಿಸಿದೆ.

'ಪ್ರತೀಕಾರ ತಪ್ಪಿಸಿಕೊಳ್ಳಲಾಗದು. ಸೊಲೆಮನಿ ಅವರ ಕೊಲೆಗಡುಕರು ಮತ್ತು ಅದಕ್ಕೆ ಆದೇಶ ನೀಡಿದ ವ್ಯಕ್ತಿ ಇಬ್ಬರೂ ಅದಕ್ಕೆ ತಕ್ಕ ಸೇಡು ಎದುರಿಸಲೇಬೇಕಾಗುತ್ತದೆ. ಪ್ರತೀಕಾರವನ್ನು ಯಾವ ಸಮಯದಲ್ಲಿ ಬೇಕಾದರೂ ತೀರಿಸಿಕೊಳ್ಳಬಹುದು' ಎಂದು ಅದು ತಿಳಿಸಿದೆ. ಈ ಟ್ವೀಟ್ ಅನ್ನು ಟ್ವಿಟ್ಟರ್ ಅಳಿಸಿ ಹಾಕಿದೆ.

ಟ್ರಂಪ್ 70 ದಿನದಲ್ಲಿ ನಿರ್ಗಮಿಸುತ್ತಾರೆ, ಆದರೆ ನಾವಿಲ್ಲಿ ಕೊನೆವರೆಗೂ ಉಳಿಯುತ್ತೇವೆ: ಇರಾನ್ಟ್ರಂಪ್ 70 ದಿನದಲ್ಲಿ ನಿರ್ಗಮಿಸುತ್ತಾರೆ, ಆದರೆ ನಾವಿಲ್ಲಿ ಕೊನೆವರೆಗೂ ಉಳಿಯುತ್ತೇವೆ: ಇರಾನ್

2020ರ ಜನವರಿ 3ರಂದು ಡೊನಾಲ್ಡ್ ಟ್ರಂಪ್ ಆದೇಶದಂತೆ ಇರಾಕ್‌ನ ಬಾಗ್ದಾದ್ ವಿಮಾನ ನಿಲ್ದಾಣದ ಹೊರವಲಯದಲ್ಲಿ ವೈಮಾನಿಕ ದಾಳಿ ನಡೆಸಿದ್ದ ಅಮೆರಿಕದ ಪಡೆಗಳು, ಇರಾನ್‌ನ ಎರಡನೆಯ ಉನ್ನತ ದರ್ಕೆಯ ವ್ಯಕ್ತಿ ಎಂದೇ ಗೌರವಿಸಲ್ಪಡುತ್ತಿದ್ದ ಖಾಸಿಂ ಸೊಲೆಮನಿ ಅವರನ್ನು ಹತ್ಯೆ ಮಾಡಿದ್ದವು. ಅಮೆರಿಕದ ರಾಜತಾಂತ್ರಿಕರು ಹಾಗೂ ಇರಾಕ್‌ನಲ್ಲಿನ ಸೇನಾ ಪಡೆಗಳ ಮೇಲೆ ದಾಳಿ ನಡೆಸಲು ಸೊಲೆಮನಿ ಯೋಜನೆಗಳನ್ನು ರೂಪಿಸುತ್ತಿದ್ದರು ಎಂದು ಅಮೆರಿಕ ಆರೋಪಿಸಿತ್ತು.

English summary
Iran warned Donal Trump as revenge is inevitable for killing of its general Qasem Soleimani on 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X