ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಲಿಬಾನಿಗಳಿಂದ ರಕ್ಷಿಸಲು ಮುಳ್ಳಿನ ತಂತಿ ಮೇಲೆ ಮಕ್ಕಳನ್ನು ಎಸೆದ ತಾಯಂದಿರು!

|
Google Oneindia Kannada News

ಕಾಬೂಲ್, ಆಗಸ್ಟ್ 19: "ತಾಲಿಬಾನ್ ಸಂಘಟನೆಯ ಕ್ರೌರ್ಯದ ನಡುವೆ ಅಫ್ಘಾನಿಸ್ತಾನದಲ್ಲಿ ನಾವು ಅನುಭವಿಸುವ ನರಕಯಾತನೆ ನಮಗಷ್ಟೇ ಸೀಮಿತವಾಗಿರಲಿ. ಭವಿಷ್ಯದಲ್ಲಿ ನಮ್ಮ ಮಕ್ಕಳಾದರೂ ಚೆನ್ನಾಗಿ ಬಾಳಿ ಬದುಕಲಿ," ಇಂಥದೊಂದು ಸಣ್ಣ ಆಲೋಚನೆ ಅಫ್ಘಾನಿಸ್ತಾನದ ಗಡಿಯಲ್ಲಿ ಘೋರ ವರ್ತನೆಗೆ ಕಾರಣವಾಗಿ ಬಿಟ್ಟಿದೆ.

ಒಂದು ದಿಕ್ಕಿನಲ್ಲಿ ಅಫ್ಘಾನಿಸ್ತಾನದಿಂದ ಸಾವಿರಾರು ಮಂದಿ ದೇಶ ತೊರೆದು ಹೋಗುತ್ತಿದ್ದಾರೆ. ಇನ್ನೊಂದು ದಿಕ್ಕಿನಲ್ಲಿ ದಾಖಲೆಗಳು ಮತ್ತು ಅನುಮತಿ ಕೊರತೆ ಎದುರಿಸುತ್ತಿರುವ ಜನರು ತಮ್ಮ ಮಕ್ಕಳನ್ನು ದೇಶದಿಂದ ಹೊರಗಟ್ಟಲು ಮನಸ್ಸು ಗಟ್ಟಿ ಮಾಡಿಕೊಂಡಿದ್ದಾರೆ. ನೀವೇ ನಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿ ಎನ್ನುತ್ತಾ ಮುಳ್ಳಿನ ತಂತಿಗಳ ಮೇಲೆ ತಮ್ಮ ಮಕ್ಕಳನ್ನು ಎಸೆಯುತ್ತಿದ್ದಾರೆ.

ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿಗೆ ಆಶ್ರಯ ನೀಡಿದ್ದೇಕೆ ಯುಎಇ!?ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿಗೆ ಆಶ್ರಯ ನೀಡಿದ್ದೇಕೆ ಯುಎಇ!?

ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಇಂಥ ಘಟನೆ ನಡೆಯುತ್ತಿದ್ದು, ಪೋಷಕರೇ ತಮ್ಮ ಮಕ್ಕಳನ್ನು ಎಸೆದು ಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಪೋಷಕರಿಲ್ಲದೇ ಮಕ್ಕಳನ್ನು ಕರೆದುಕೊಂಡು ಹೋಗಬೇಕೇ ಬೇಡವೇ ಎಂಬುದು ಅಮೆರಿಕಾ ಮತ್ತು ಇಂಗ್ಲೆಂಡ್ ಸೇನಾ ಯೋಧರಿಗೆ ತಲೆನೋವು ತಂದಿದೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

Recommended Video

Afghanistanದಲ್ಲಿ ಈಗ ಪರಿಸ್ಥಿತಿ ಹೇಗಿದೆ , Taliban ಸುಧಾರಿಕೊಳ್ತಾ? | Oneindia Kannada

ಮಕ್ಕಳನ್ನು ತಾಲಿಬಾನ್ ಮುಷ್ಠಿಯಿಂದ ರಕ್ಷಿಸಲು ಪ್ರಯತ್ನ

ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿರುವ ತಾಲಿಬಾನ್ ಉಗ್ರರು ದೇಶದಲ್ಲಿ ಯಾವುದೇ ಕಾರಣಕ್ಕೂ ಪ್ರಜಾಪ್ರಭುತ್ವ ಜಾರಿಗೊಳಿಸುವುದಕ್ಕೆ ಬಿಡುವುದಿಲ್ಲ. ಪ್ರಜಾಪ್ರಭುತ್ವದ ಬದಲಿಗೆ ಮೊದಲಿನಂತೆ ಷರಿಯಾ ಕಾನೂನುಗಳನ್ನು ಜಾರಿಗೊಳಿಸಲಾಗುವುದು ಎಂದು ಈಗಾಗಲೇ ಸ್ಪಷ್ಟಪಡಿಸಿದೆ. ಷರಿಯಾ ಕಾನೂನುಗಳ ಭಯದಲ್ಲಿರುವ ಸಾವಿರಾರು ಮಹಿಳೆಯರು ದೇಶವನ್ನೇ ತೊರೆದು ಹೋಗುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ವಿದೇಶಗಳಿಗೆ ತೆರಳಲು ದಾಖಲೆಗಳ ಕೊರತೆ ಮತ್ತು ಸಮಸ್ಯೆ ಎದುರಾದ ಹಿನ್ನೆಲೆ ತಮ್ಮ ಮಕ್ಕಳಾದರೂ ವಿದೇಶಗಳಲ್ಲಿ ಸುರಕ್ಷಿತವಾಗಿರಲಿ ಎಂದು ವಿದೇಶಿ ಸೇನಾ ಯೋಧರ ಕೈಗೆ ತಮ್ಮ ಮಕ್ಕಳನ್ನು ನೀಡುತ್ತಿರುವ ಘಟನೆ ಮನ ಕಲಕುವಂತಿದೆ.

ಗಡಿಯಲ್ಲಿನ ಮುಳ್ಳಿನ ತಂತಿ ಮೇಲೆ ಮಕ್ಕಳನ್ನು ಎಸೆದರು

ಗಡಿಯಲ್ಲಿನ ಮುಳ್ಳಿನ ತಂತಿ ಮೇಲೆ ಮಕ್ಕಳನ್ನು ಎಸೆದರು

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕಾ ಮತ್ತು ಇಂಗ್ಲೆಂಡ್ ಸೇನಾ ಪಡೆಯು ಸ್ಥಳಾಂತರ ಕಾರ್ಯಾಚರಣೆಯಲ್ಲಿ ತೊಡಗಿದ್ದವು. ಅಫ್ಘಾನ್ ಪ್ರಜೆಗಳನ್ನು ಕರೆದುಕೊಂಡು ಹೋಗುವುದಕ್ಕೆ ವಿದೇಶಿ ಸೇನಾ ಪಡೆಗಳು ನಿರಾಕರಿಸುತ್ತಿದ್ದಂತೆ ತಾಯಂದಿರು ತಮ್ಮ ಮಕ್ಕಳನ್ನು ಮುಳ್ಳಿನ ತಂತಿ ಬೇಲಿಗಳ ಮೇಲೆ ಎಸೆದರು. ನಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿ ಎಂದು ಸೇನಾ ಯೋಧರಿಗೆ ಪರಿಪರಿಯಾಗಿ ಅಂಗಲಾಚಿ ಬೇಡಿಕೊಳ್ಳುತ್ತಿದ್ದರು.

"ರಾತ್ರಿಯ ವೇಳೆ ಮಹಿಳೆಯರು ತಮ್ಮ ಮಕ್ಕಳನ್ನು ಮುಳ್ಳುತಂತಿಗಳ ಮೇಲೆ ಎಸೆಯುವುದನ್ನು ನೋಡಿ, ಸೈನಿಕರನ್ನು ಇನ್ನೊಂದು ಬದಿಯಲ್ಲಿ ಹಿಡಿಯುವಂತೆ ಕೇಳಿದರು. ಇದು ಭಯಾನಕವಾಗಿದೆ, ಮಹಿಳೆಯರು ತಮ್ಮ ಶಿಶುಗಳನ್ನು ರೇಜರ್ ತಂತಿಯ ಮೇಲೆ ಎಸೆಯುತ್ತಿದ್ದರು, ಸೈನಿಕರನ್ನು ಕರೆದುಕೊಂಡು ಹೋಗುವಂತೆ ಕೇಳಿದರು, ಕೆಲವರು ತಂತಿಯಲ್ಲಿ ಸಿಲುಕಿಕೊಂಡರು", ಎಂದು ಹಿರಿಯ ಬ್ರಿಟಿಷ್ ಸೇನಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಾಬೂಲ್ ತೊರೆದು ಗುಳೆ ಹೊರಟ ಸಾವಿರಾರು ಪ್ರಜೆಗಳು

ಕಾಬೂಲ್ ತೊರೆದು ಗುಳೆ ಹೊರಟ ಸಾವಿರಾರು ಪ್ರಜೆಗಳು

ಅಫ್ಘಾನಿಸ್ತಾನದ ರಾಜಧಾನಿಯನ್ನು ತಾಲಿಬಾನ್ ಉಗ್ರ ಸಂಘಟನೆಯು ವಶಪಡಿಸಿಕೊಂಡ ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಿತ್ಯ ಜನಜಾತ್ರೆಯಂತಾಗಿ ಬಿಟ್ಟಿದೆ. ಅಧ್ಯಕ್ಷ ಅಶ್ರಫ್ ಘನಿ ದೇಶದಿಂದ ಪಲಾಯನ ಮಾಡಿದ ಹತಾಶೆಯಲ್ಲೇ ಸಾವಿರಾರು ಸಾವಿರಾರು ಪುರುಷರು, ಮಹಿಳೆಯರು ಮತ್ತು ಮಕ್ಕಳು ಕಾಬೂಲ್ ವಿಮಾನ ನಿಲ್ದಾಣದತ್ತ ಧಾವಿಸುತ್ತಿದ್ದಾರೆ. ಇದನ್ನು ಕಂಡ ಅಮೆರಿಕದ ಸೈನಿಕರು ಅಫ್ಘಾನ್ ಪ್ರಜೆಗಳು ಗುಳೆ ಹೋಗುವುದನ್ನು ನಿಯಂತ್ರಿಸಿದರು. ರನ್‌ವೇಯಿಂದ ಹೊರಟ ನೂರಾರು ವಾಯುಪಡೆಯ ಜೆಟ್‌ಗಳು ನೂರಾರು ವಿಮಾನಗಳಲ್ಲಿ ಸೇರಿದ್ದವು, ಕೆಲವರು ವಿಮಾನದ ಚಕ್ರಗಳಿಗೆ ನೇತಾಡಿಕೊಂಡು ಅಥವಾ ರೆಕ್ಕೆಗಳ ಮೇಲೆ ಕುಳಿತುಕೊಂಡು ದೇಶದಿಂದ ಹಾರಿದ್ದಾರೆ. ಇತ್ತೀಚಿಗಷ್ಟೇ ವಿಮಾನದ ಚಕ್ರದಲ್ಲಿ ನೇತಾಡಿಕೊಂಡು ಹೋಗಲು ಯತ್ನಿಸಿದ ಇಬ್ಬರು ಆಕಾಶದಿಂದ ಬಿದ್ದು ಪ್ರಾಣ ಬಿಟ್ಟಿರುವ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಾಗಿತ್ತು.

"ತಾಲಿಬಾನಿಗಳು ಬರುತ್ತಿದ್ದಾರೆ, ದಯವಿಟ್ಟು ನೆರವು ನೀಡಿ"

ಕಾಬೂಲ್ ವಿಮಾನ ನಿಲ್ದಾಣದ ಸುತ್ತಮುತ್ತಲೂ ನಡೆಯುತ್ತಿರುವ ಘಟನೆಗಳಿಗೆ ಆಧಾರಿತವಾಗಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಒಂದು ವಿಡಿಯೋದಲ್ಲಿ ಏರ್ ಪೋರ್ಟ್ ಗೇಟ್ ಬಳಿ ನಿಂತ ಅಫ್ಘಾನ್ ಮಹಿಳೆಯರು ಸೈನಿಕರ ಎದುರು ಅಳಲು ತೋಡಿಕೊಳ್ಳುತ್ತಿರುವುದು ಮನ ಮಿಡಿಯುವಂತಿದೆ. "ಅಯ್ಯೋ ಅವರು ಬರುತ್ತಿದ್ದಾರೆ, ತಾಲಿಬಾನಿಗಳು ಬಂದರೆ ನಮ್ಮನ್ನು ಬಿಡುವುದಿಲ್ಲ, ಅವರಿಂದ ನಮ್ಮನ್ನು ರಕ್ಷಿಸಿ, ದಯವಿಟ್ಟು ನಮಗೆ ಸಹಾಯ ಮಾಡಿ", ಎಂದು ಮಹಿಳೆಯರು ಕೂಗುತ್ತಿರುವುದು ಸ್ಪಷ್ಟವಾಗುತ್ತಿದೆ.

ತಾಲಿಬಾನಿಗಳ ಬಗ್ಗೆ ಅಫ್ಘಾನ್ ಪ್ರಜೆಗಳಲ್ಲಿ ನಡುಕ

ತಾಲಿಬಾನಿಗಳ ಬಗ್ಗೆ ಅಫ್ಘಾನ್ ಪ್ರಜೆಗಳಲ್ಲಿ ನಡುಕ

ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಳ್ಳುತ್ತಿದ್ದಂತೆ ದೇಶದ ಲಕ್ಷಾಂತರ ಜನರ ಎದೆಯಲ್ಲಿ ಢವಢವ ಜೋರಾಗಿದೆ. ಭವಿಷ್ಯದ ಭೀತಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ದೇಶವನ್ನೇ ತೊರೆದು ಹೋಗುವುದಕ್ಕೆ ಶುರು ಮಾಡಿದ್ದಾರೆ. 1996 ರಿಂದ 2001ರ ಅವಧಿಯಲ್ಲಿ ಆಡಳಿತ ನಡೆಸಿದ ಇದೇ ತಾಲಿಬಾನ್ ಉಗ್ರರು ಕ್ರೂರಾತೀಕ್ರೂರ ಶಿಕ್ಷೆಗಳನ್ನು ನೀಡುವ ಮೂಲಕ ಜನರ ಎದೆಯಲ್ಲಿ ನಡುಕ ಹುಟ್ಟಿಸಿದ್ದರು. 1990ರ ದಶಕದ ತಾಲಿಬಾನ್ ಉಗ್ರರ ಆಳ್ವಿಕೆಯಲ್ಲಿ ಜಾರಿಗೊಳಿಸಿದ ಷರಿಯಾ ಕಾನೂನಿನ ಕ್ರೌರ್ಯತೆ ಬಗ್ಗೆ ಅರಿತಿರುವ ಜನರು ಉಗ್ರರ ಮುಷ್ಠಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಹಾತೊರೆಯುತ್ತಿದ್ದಾರೆ.

ತಾಲಿಬಾನ್ ಆಡಳಿತದ ಬಗ್ಗೆ ಅಫ್ಘಾನ್ ಪ್ರಜೆಗಳಲ್ಲಿ ಏಕೆ ಭಯ

ತಾಲಿಬಾನ್ ಆಡಳಿತದ ಬಗ್ಗೆ ಅಫ್ಘಾನ್ ಪ್ರಜೆಗಳಲ್ಲಿ ಏಕೆ ಭಯ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಈ ಹಿಂದೆ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಇದೇ ಷರಿಯಾ ಕಾನೂನುಗಳನ್ನು ಪಾಲನೆ ಮಾಡಲಾಗುತ್ತಿತ್ತು. ಈ ಕಾನೂನುಗಳ ಪ್ರಕಾರ, ಸಾರ್ವಜನಿಕರ ಮರಣ ದಂಡನೆ, ಕೋಲುಗಳಿಂದ ಬಲವಾಗಿ ಹೊಡೆಯುವುದು, ಕೈ-ಕಾಲುಗಳನ್ನು ಛಿದ್ರಗೊಳಿಸುವುದು, ಹೀಗೆ ಒಂದಕ್ಕಿಂತ ಒಂದು ಶಿಕ್ಷೆಯ ವಿಧಾನ ಘೋರವಾಗಿತ್ತು. ಜನರನ್ನು ತಿದ್ದುವುದಕ್ಕಾಗಿ ಇರುವ ಇಸ್ಲಾಮಿಕ್ ಕಾನೂನುಗಳನ್ನು ಉಲ್ಲಂಘಿಸಿ ಅತಿರೇಕದ ಶಿಕ್ಷೆಯನ್ನು ನೀಡಲಾಗುತ್ತಿತ್ತು. ಚಿಕ್ಕದಾಗಿ ಗಡ್ಡ ಬಿಟ್ಟ ಪುರುಷರಿಗೆ ಶಿಕ್ಷೆ ನೀಡುವುದು ಒಂದು ವಿಧಾನವಾಗಿತ್ತು. ಆದರೆ ಮಹಿಳೆಯರಿಗೆ ತೀರಾ ಮುಜುಗರ ಉಂಟು ಮಾಡುವಂತಾ ಶಿಕ್ಷೆಗಳನ್ನು ಈ ಕಾನೂನುಗಳಡಿಯಲ್ಲಿ ನೀಡಲಾಗುತ್ತಿತ್ತು. ಮಹಿಳೆಯರು ಧರಿಸುವ ಬಟ್ಟೆಯಿಂದ ಹಿಡಿದು ನಡವಳಿಕೆವರೆಗೂ ಪ್ರತಿಯೊಂದಕ್ಕೂ ನಿಯಮಗಳ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದ್ದು, ಉಲ್ಲಂಘಿಸಿದವರಿಗೆ ಸಾರ್ವಜನಿಕವಾಗಿ ಹಿಂಸೆ ನೀಡಲಾಗುತ್ತಿತ್ತು.

* ಕಲೆ ಮತ್ತು ಮನೋರಂಜನೆ ನಿಷೇಧ:

ಫೋಟೋಗ್ರಫಿ, ಸಿನಿಮಾ, ಮಹಿಳೆಯರ ಚಿತ್ರ ಪ್ರದರ್ಶನ ಸೇರಿದಂತೆ ಕಲೆ ಹಾಗೂ ಮನೋರಂಜನೆಯನ್ನು ನಿಷೇಧಿಸಲಾಗುವುದರ ಜೊತೆಗೆ ಪಾದ್ರಿಗಳಿಗೆ ಆಡಳಿತದ ಹೊಣೆ ವಹಿಸಲಾಗುತ್ತದೆ. ತಾಲಿಬಾನ್ ವಿದ್ಯಾರ್ಥಿಗಳಿಗೆ ಪಾಷ್ಟೋ ಮತ್ತು ಗುಂಪಿನ ಹೆಚ್ಚಿನ ನಾಯಕತ್ವ ವಹಿಸಿದವರಿಗೆ ಧಾರ್ಮಿಕ ವಿದ್ವಾಂಸರೆಂದು ಹೇಳಿಕೊಳ್ಳಲಾಗುತ್ತಿದೆ.

* ಮಹಿಳೆಯರಿಗೆ ಕಟ್ಟುನಿಟ್ಟಿನ ನಿಯಮಗಳು:

ಬಾಲಕಿಯರ ಹೊರತಾಗಿ ವಯಸ್ಸಿಗೆ ಬಂದ ಯುವತಿಯರ ಶಿಕ್ಷಣಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಮಹಿಳೆಯರ ಚಟುವಟಿಕೆಗಳಿಗೆ ಕಠಿಣ ಷರತ್ತುಗಳನ್ನು ವಿಧಿಸಿರುವುದರಿಂದ ಅವರು ಗೃಹಬಂಧನಕ್ಕೆ ಒಳಗಾದರು. ಸಾರ್ವಜನಿಕವಾಗಿ ಮಹಿಳೆಯರು ಒಬ್ಬರೇ ಓಡಾಡುವಂತಿಲ್ಲ ಹಾಗೂ ಕಡ್ಡಾಯವಾಗಿ ಒಬ್ಬ ಪುರುಷನ ನೆರಳಿನಲ್ಲಿರಬೇಕು. ಬುರ್ಖಾದ ಮೂಲಕ ಮಹಿಳೆಯರು ಕಡ್ಡಾಯವಾಗಿ ತಲೆಯಿಂದ ಪಾದದವರೆಗೂ ಮುಚ್ಚಿಕೊಂಡಿರಬೇಕು ಎಂಬ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಜಾರಿಗೊಳಿಸಲಾಗಿತ್ತು.

* ಕಳ್ಳತನ, ವ್ಯಭಿಚಾರಕ್ಕೆ ಕಠಿಣ ಶಿಕ್ಷೆ:

ವ್ಯಭಿಚಾರ ನಡೆಸುವವರಿಗೆ ಕಲ್ಲಿನಲ್ಲಿ ಹೊಡೆಯುವುದು. ಕಳ್ಳತನ ಮತ್ತು ಲೂಟಿ ಮಾಡುವ ಅಪರಾಧಕ್ಕೆ ಶಸ್ತ್ರಾಸ್ತ್ರಗಳಿಂದ ಅಪರಾಧಿಗಳ ಕೈಗಳನ್ನೇ ಕತ್ತರಿಸುವಂತಾ ಕ್ರೌರ್ಯ ನಿಯಮಗಳನ್ನು ಪಾಲನೆ ಮಾಡಲಾಗುತ್ತಿತ್ತು.

ಅಫ್ಘಾನ್ ಚಿತ್ರಣ ಬದಲಿಸಿದ ತಾಲಿಬಾನ್ ಉಗ್ರರು

ಅಫ್ಘಾನ್ ಚಿತ್ರಣ ಬದಲಿಸಿದ ತಾಲಿಬಾನ್ ಉಗ್ರರು

ಎರಡು ದಶಕಗಳ ಕಾಲ ಯುನೈಟೆಡ್ ಸ್ಟೇಟ್ಸ್ ಸೇನೆ ಭದ್ರತೆ ನಡುವೆ ಸುಭದ್ರವಾಗಿದ್ದ ಅಫ್ಘಾನಿಸ್ತಾನವನ್ನು ತಾಲಿಬಾನ್ ಕೇವಲ 10 ದಿನಗಳಲ್ಲೇ ಸಂಪೂರ್ಣ ಕೈವಶ ಮಾಡಿಕೊಂಡಿದೆ. ಯುಎಸ್ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಾಗಿ ಘೋಷಿಸುತ್ತಿದ್ದಂತೆ ತಾಲಿಬಾನ್ ಉಗ್ರ ಸಂಘಟನೆ ಅಲರ್ಟ್ ಆಗಿದೆ. ಮೊದಲಿಗೆ ದೇಶದ ಒಂದೊಂದೇ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡ ತಾಲಿಬಾನ್ ಉಗ್ರರು ಕಳೆದ ಆಗಸ್ಟ್ 15ರಂದು ರಾಜಧಾನಿ ಕಾಬೂಲ್‌ಗೆ ಲಗ್ಗೆ ಇಡುವ ಮೂಲಕ ಇಡೀ ದೇಶವನ್ನು ಹಿಡಿತಕ್ಕೆ ತೆಗೆದುಕೊಂಡಿದೆ.

ಅಫ್ಘಾನ್ ಮೇಲೆ ಅಮೆರಿಕಾ ಹಿಡಿತ ಸಾಧಿಸಿದ ಕಾಲ:

ಕಳೆದ 1996 ರಿಂದ 2001ರವರೆಗೂ ಅಫ್ಘಾನಿಸ್ತಾನದಲ್ಲಿ ಇದೇ ತಾಲಿಬಾನ್ ಉಗ್ರ ಸಂಘಟನೆಯ ಹಿಡಿತದಲ್ಲಿತ್ತು. 2001ರ ಸಪ್ಟೆಂಬರ್ 11ರಂದು ಯುನೈಟೆಡ್ ಸ್ಟೇಟ್ಸ್ ಮೇಲೆ ಅಲ್ ಖೈದಾ ಉಗ್ರರು ದಾಳಿ ನಡೆಸಿದ್ದರು. ಅಲ್ ಖೈದಾ ಜೊತೆ ಆತ್ಮೀಯವಾಗಿ ಗುರುತಿಸಿಕೊಂಡಿದ್ದ ಕಾರಣಕ್ಕಾಗಿ ತಾಲಿಬಾನ್ ಮೇಲೂ ಯುಎಸ್ ಸೇನಾಪಡೆಗಳು ಕಾರ್ಯಾಚರಣೆಗೆ ಇಳಿದವು. ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಅಫ್ಘಾನ್ ಮೇಲೆ ದಾಳಿ ನಡೆಸಿದ ಯುಎಸ್ ಸೇನೆಯು ಅಫ್ಘಾನಿಸ್ತಾನವನ್ನು 2001ರಲ್ಲಿ ತಾಲಿಬಾನ್ ಹಿಡಿತದಿಂದ ಬಿಡುಗಡೆಗೊಳಿಸಿತು. ಅದರ ಪರಿಣಾಮವಾಗಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ಕಳೆದುಕೊಂಡಿತು. ಯುಎಸ್ ಬೆಂಬಲಿತ ಸರ್ಕಾರವು ಅಸ್ತಿತ್ವಕ್ಕೆ ಬಂದಿತ್ತು.

English summary
Soldiers Haunted By Women Throw Their Babies Over Barbed wire separating the US and UK troops from the thousands of desperate Afghans At Kabul Airport In Desperate Bid To Escape. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X