• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೌರ ಮಂಡಲಕ್ಕೆ ಬಂದ ವಿಚಿತ್ರ ಕ್ಷುದ್ರಗ್ರಹದ ಹಿಂದೆ ಏಲಿಯನ್ ಕೈವಾಡ

By Sachhidananda Acharya
|
   ಪ್ರತ್ಯೇಕ್ ಸೌರ ಮಂಡಲದಿಂದ ಏಲಿಯನ್ಸ್ ಬಂದಿರೋದು ಪಕ್ಕಾನಾ ? | Oneindia Kannada

   ವಾಷಿಂಗ್ಟನ್, ನವೆಂಬರ್ 25: ಸೌರ ಮಂಡಲದೊಳಗೆ ವಿಚಿತ್ರ ಕ್ಷುದ್ರ ಗ್ರಹ ಬಂದಿರುವ ವಿಚಾರ ಹಳೆಯದು. ಇದೀಗ ಈ ಕ್ಷುದ್ರಗ್ರಹ ಏಲಿಯನ್ ಗ್ರಹದಿಂದ ಬಂದಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

   ಸೌರ ಮಂಡಲಕ್ಕೆ ಬಂದ 'ಹೊಸ ಅತಿಥಿ'ಯ ಕುತೂಹಲಕಾರಿ ಕಥೆ

   ಸೌರ ಮಂಡಲದೊಳಕ್ಕೆ ಬಂದಿರುವ ಈ ಕ್ಷುದ್ರ ಗ್ರಹಕ್ಕೆ ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- 'ನಾಸಾ'ದ ವಿಜ್ಞಾನಿಗಳು ಕ್ಷುದ್ರಗ್ರಹ 1I/2017 U1 ಅಥವಾ 'Oumuamua (ಒಮುಮಾಮುವಾ) ಎಂದು ಹೆಸರಿಟ್ಟಿದ್ದಾರೆ. 'ಒಮುಮಾಮುವಾ' ಅಂದರೆ ಹವಾಯಿ ಭಾಷೆಯಲ್ಲಿ 'ಬಲು ದೂರದಿಂದ ಬಂದ ಚೊಚ್ಚಲ ಸಂದೇಶ' ಎಂದರ್ಥ.

   ಇದು ನಮ್ಮ ಸೌರ ಮಂಡಲದೊಳಕ್ಕೆ ಬೇರೆ ಸೌರ ಮಂಡಲದಿಂದ ಬಂದ ಮೊದಲ ಕ್ಷುದ್ರಗ್ರಹವಾಗಿದೆ. ಅಕ್ಟೋಬರ್ 19ರಂದು ಹವಾಯಿಯಲ್ಲಿರುವ PAN STARRS1 ದೂರದರ್ಶಕದ ಮೂಲಕ ಇದನ್ನು ಪತ್ತೆ ಹಚ್ಚಲಾಗಿದೆ.

   ಖಗ್ರಾಸ ಸೂರ್ಯಗ್ರಹಣ ವೀಕ್ಷಿಸಿ ಕುಣಿದು ಕುಪ್ಪಳಿಸಿದ ಜನತೆ

   ಇದು ನಡೆದು ಬಂದ ದಾರಿ, ವೇಗ ನೋಡಿ ವಿಜ್ಞಾನಿಗಳು ಹೊರಗಿನ ಸೌರ ಮಂಡಲದಿಂದ ಇದು ನಮ್ಮ ಸೌರ ಮಂಡಲದೊಳಕ್ಕೆ ಗಡಿ ದಾಟಿ ಬಂದಿದೆ ಎಂದು ವಿಶ್ಲೇಷಿಸಿದ್ದಾರೆ. ಬೇರೆ ಸೌರ ಮಂಡಲದಿಂದ ಪ್ರತ್ಯೇಕಗೊಂಡು, ಸಾವಿರಾರು ವರ್ಷ ಕ್ರಮಿಸಿ ಇದು ನಮ್ಮ ಸೌರ ಮಂಡಲದೊಳಗೆ ಬಂದಿದೆ. 400 ಮೀಟರ್ ಉದ್ದ, 40 ಮೀಟರ್ ನಷ್ಟು ಅಗಲವಾಗಿರುವ ಈ ಕ್ಷುದ್ರಗ್ರಹ ವಿಚಿತ್ರ ಆಕಾರದಲ್ಲಿದೆ.

   ಇದರ ಆಕಾರ ನೋಡಿ ವಿಜ್ಞಾನಿಗಳು ಆರಂಭದಲ್ಲಿ ಇದನ್ನು ಕ್ಷುದ್ರಗ್ರಹ ಎಂದು ಅಂದಾಜಿಸಿದ್ದರಾದರೂ ಇದು ಬೇಕೆಂದೇ ರಚನೆ ಮಾಡಲಾದ ಕಲಾಕೃತಿ ಆಗಿರಬಹುದು ಎಂದು ಅಂದಾಜಿಸಿದ್ದಾರೆ. ಏಲಿಯನ್ ನಾಗರೀಕತೆಯ ಕಲಾಕೃತಿ ಇದಾಗಿರಬಹುದು ಎಂಬುದು ವಿಜ್ಞಾನಿಗಳ ಊಹೆಯಾಗಿದೆ.

   ಸಾಮಾನ್ಯವಾಗಿ ಕ್ಷುದ್ರಗ್ರಹಗಳು ಈ ರೀತಿ ಉದ್ದದ ಆಕಾರದಲ್ಲಿ ಇರುವುದಿಲ್ಲ. ಜತೆಗೆ ಉದ್ದ ಇದ್ದಲ್ಲಿ ಧೂಳಿನ ಕಣಗಳು, ವಾಯು ಪ್ರದೇಶವನ್ನು ದಾಟಿ ಸಾಗುವುದು ಸುಲಭವಾಗಲಿದೆ. ಹೀಗಾಗಿ ಇದನ್ನು ಏಲಿಯನ್ ಗಳು ರಚನೆ ಮಾಡಿ ಕಳುಹಿಸರಬಹುದು ಎಂದು ಕೆಲವು ಸಂಶೋಧಕರು ಹೇಳಿದ್ದಾರೆ.

   ಸ್ಪಿಟ್ಜರ್, ಹಬಲ್ ಸ್ಪೇಸ್ ಟೆಲಿಸ್ಪೋಪ್ ಮೊದಲಾದುವನ್ನು ಈ ಕ್ಷುದ್ರಗ್ರಹದ ಮೇಲೆ ತಿರುಗಿಸಿ ಗಾತ್ರ, ರಚನೆಯ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸುತ್ತಿದ್ದಾರೆ. ಜತೆಗೆ ಇದು ಎಲ್ಲಿಂದ ಬಂದಿರಬಹುದು ಎಂಬ ಬಗ್ಗೆ ಭಾರೀ ಸಂಶೋಧನೆಗಳನ್ನು ನಡೆಯುತ್ತಿವೆ.

   ನಮ್ಮ ಸೌರ ಮಂಡಲದಲ್ಲಿರುವ ಕ್ಷುದ್ರ ಗ್ರಹಗಳಿಗಿಂತ ಇದು ಭಿನ್ನವಾಗಿದ್ದು, ಇದರಿಂದ ಭೂಮಿಗೆ ಯಾವುದೇ ಸಮಸ್ಯೆ ಇಲ್ಲ. ಇದು ಕೆಂಪು ಬಣ್ಣದಲ್ಲಿದೆ. ದೀರ್ಘ ಕಾಲ ಸೌರ ಮಂಡಲದಲ್ಲಿದ್ದು, ಬಹುಶಃ ನಮ್ಮ ಸೂರ್ಯ ಮತ್ತು ಬೇರೆ ಸೌರ ಮಂಡಲದ ಸೂರ್ಯನ ಬೆಳಕಿನಿಂದ ಹಾಗಾಗಿರಬಹುದು ಎನ್ನುವುದು ವಿಜ್ಞಾನಿಗಳ ಅಂಬೋಣ. ಆದರೆ ಇದರ ಗಾತ್ರದ ಬಗ್ಗೆ ವಿಜ್ಞಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದು ಈ ಗಾತ್ರ ಹೇಗೆ ಬಂತು ಎಂದು ಅಧ್ಯಯನ ನಡೆಸುತ್ತಲೇ ಇದ್ದಾರೆ.

   English summary
   Astronomers recently scrambled to observe an intriguing asteroid that zipped through the solar system on a steep trajectory from interstellar space—the first confirmed object from another star. It might be an alien spacecraft, scientists have said.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more