ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಪಾಕಿಸ್ತಾನದ ನೂತನ ಹೈ ಕಮೀಷನರ್

ಇತ್ತೀಚೆಗೆ, ಭಾರತದ ಯೋಧರ ಶಿರಚ್ಛೇದ ಪ್ರಕರಣದ ನಂತರ ಉಭಯ ದೇಶಗಳ ನಡುವಿನ ಬಾಂಧವ್ಯ ತೀರಾ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಲು ಹೊಸ ಮುಖವೊಂದನ್ನು ಭಾರತಕ್ಕೆ ನಿಯೋಜಿಸಲು ಪಾಕಿಸ್ತಾನ ಚಿಂತನೆ ನಡೆಸಿತ್ತು.

|
Google Oneindia Kannada News

ಇಸ್ಲಾಮಾದಾಬಾದ್, ಮೇ 8: ಭಾರತದಲ್ಲಿರುವ ಪಾಕಿಸ್ತಾನ ಹೈ ಕಮೀಷನರ್ ಅಬ್ದುಲ್ ಬಾಸಿತ್ ಅವರ ಬದಲಿಗೆ ಸೊಹೈಲ್ ಮಸೂದ್ ಅವರನ್ನು ನೇಮಿಸಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ.

ಮಸೂದ್ ಅವರು ಸದ್ಯಕ್ಕೆ ಟರ್ಕಿಯಲ್ಲಿ ಪಾಕಿಸ್ತಾನದ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು ಭಾರತದಲ್ಲಿ ಪಾಕಿಸ್ತಾನದ ಹೈ ಕಮೀಷನರ್ ಆಗಿ ನೇಮಿಸಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದ್ದು, ಈಗಾಗಲೇ ಅವರ ನೇಮಕವೂ ಆಗಿದೆ. ಇದೇ ತಿಂಗಳಲ್ಲಿ ಅವರು ನೂತನ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಪಾಕಿಸ್ತಾನ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

Sohail Mahmood all set to replace Abdul Basit as Pakistan's new High Commissioner to India: Report

ಇತ್ತೀಚೆಗೆ, ಭಾರತದ ಯೋಧರ ಶಿರಚ್ಛೇದ ಪ್ರಕರಣದ ನಂತರ ಉಭಯ ದೇಶಗಳ ನಡುವಿನ ಬಾಂಧವ್ಯ ತೀರಾ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಲು ಹೊಸ ಮುಖವೊಂದನ್ನು ಭಾರತಕ್ಕೆ ಹೈಕಮೀಷನರ್ ಸ್ಥಾನಕ್ಕೆ ನಿಯೋಜಿಸಲು ಪಾಕಿಸ್ತಾನ ನಿರ್ಧರಿಸಿತ್ತು.

ಹಾಗಾಗಿಯೇ, ಈವರೆಗೆ ಭಾರತದಲ್ಲಿ ಆ ಸೇವೆಯಲ್ಲಿದ್ದ ಅಬ್ದುಲ್ ಬಾಸಿತ್ ಅವರನ್ನು ವಾಪಸ್ ಕರೆಸಿಕೊಂಡು ಅವರ ಸ್ಥಾನಕ್ಕೆ ಹೊಸಬರನ್ನು ನೇಮಿಸುವ ನಿರ್ಧಾರಕ್ಕೆ ಅಲ್ಲಿನ ಸರ್ಕಾರ ನಿರ್ಧರಿಸಿದೆ. ಇಲ್ಲಿಂದ ಸ್ವದೇಶಕ್ಕೆ ವಾಪಸ್ ತೆರಳಲಿರುವ ಬಾಸಿತ್ ಅವರಿಗೆ ಪಾಕಿಸ್ತಾನ ವಿದೇಶಾಂಗ ಸೇವೆ ಅಕಾಡೆಮಿಯ (ಎಫ್ ಎಸ್ ಎ) ಮುಖ್ಯಸ್ಥರನ್ನಾಗಿ ನೇಮಿಸಲಾಗುತ್ತದೆ.

ನೂತನ ಹೈ ಕಮೀಷನರ್ ಆಗಿ ಬರಲಿರುವ ಮಸೂದ್, 1985ರಲ್ಲಿ ಪಾಕಿಸ್ತಾನ ವಿದೇಶಾಂಗ ಸೇವೆಗೆ ಸೇರ್ಪಡೆಗೊಂಡಿದ್ದರು.

English summary
Sohail Mahmood, a career diplomat, is reportedly all set to replace Abdul Basit as the new Pakistan High Commissioner to India. Mahmood is presently Pakistan's ambassador to Turkey and is likely to replace Basit this month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X