ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳನ ಅಂಗಳದಿ ಮಂಜಿನ ರಂಗವಲ್ಲಿ: ನಾಸಾ ಕ್ಲಿಕ್ಕಿಸಿದ ಅಪರೂಪದ ಚಿತ್ರ

By ವಿಕಾಸ್ ನಂಜಪ್ಪ
|
Google Oneindia Kannada News

ಭೂಮಿಯಾಚೆಯೂ ಒಂದೆಡೆ ಜೀವಸ್ನೇಹಿ ವಾತಾವರಣವಿದ್ದಿರಬಹುದು ಎಂಬ ನಮ್ಮೆಲ್ಲರ ಊಹೆಗೆ, ನಿರೀಕ್ಷೆಗೆ, ಕುತೂಹಲಕ್ಕೆ ಭರವಸೆಯಾಗಿ ಉಳಿದಿರುವುದು ಮಂಗಳ ಗ್ರಹ ಎಂಬ ಕೌತುಕದ ಕಣಜ.

ಮಂಗಳನಲ್ಲಿ ಪತ್ತೆಯಾದ ಹಿಮಚ್ಛಾದಿತ ಪ್ರದೇಶ!ಮಂಗಳನಲ್ಲಿ ಪತ್ತೆಯಾದ ಹಿಮಚ್ಛಾದಿತ ಪ್ರದೇಶ!

ಜೀವಸ್ನೇಹಿ ವಾತಾವರಣದಿಂದಾಗಿ ಖಗೋಳ ತಜ್ಞರ, ಬಾಹ್ಯಾಕಾಶ ಪ್ರೇಮಿಗಳ ನೆಚ್ಚಿನ ಅಧ್ಯಯನ ವಿಷಯವಾಗಿರುವ ಮಂಗಳ ಮತ್ತೊಮ್ಮೆ ಸುದ್ದಿಯಾಗಿರುವುದು ನಾಸಾದ ಉಪಗ್ರಹವೊಂದು ಕ್ಲಿಕ್ಕಿಸಿದ ಅಪರೂಪದ ಚಿತ್ರದಿಂದ!

Snow cover on Mars: Nasa's stunning image!

ಮಂಗಳ ಗ್ರಹದ ಮೇಲಿನ ಮರಳ ಮೇಲೆ ಬಿದ್ದ ಮಂಜಿನ ಹನಿಗಳ ಈ ಅತ್ಯಪರೂಪದ ಚಿತ್ರ, ಸೃಷ್ಟಿ ಸೌಂದರ್ಯದ ಪ್ರತೀಕವೆಂಬಂತಿದೆ. ಕಂದು ಬಣ್ಣದ ಹಿನ್ನೆಲೆಯ ಮೇಲೆ ಇಬ್ಬನಿ ಎಂಬ ಕುಂಚ, ಮರಳ ಮೇಲೆ ಬರೆದ ಸುಂದರ ಮುತ್ತಿನ ರಂಗವಲ್ಲಿ ನೋಡುವುದಕ್ಕೆ ಎರಡು ಕಣ್ಣು ಸಾಲದು. ಈ ಚಿತ್ರ ಕ್ಲಿಕ್ಕಿಸಿದ್ದು ಈ ವರ್ಷದ ಮೇ 21 ರಂದೇ ಆಗಿದ್ದರೂ, ಭೂಮಿಯನ್ನು ತಲುಪಿದ್ದು ಮಾತ್ರ ಈಗ!

ವರ್ಷದ ನಂತರ ಭೂಮಿಗೆ ಬಂದವನ ಮೊದಲ ದಿನದ ಅನುಭವವರ್ಷದ ನಂತರ ಭೂಮಿಗೆ ಬಂದವನ ಮೊದಲ ದಿನದ ಅನುಭವ

ಮರಳ ಮೇಲೆ ಬಿದ್ದ ಮಂಜುಗಡ್ಡೆಯ ತುಂಡುಗಳು ಸೂರ್ಯ ಕಿರಣಗಳು ತಾಕುತ್ತಿದ್ದಂತೆಯೇ ಸ್ವಲ್ಪ ಸ್ವಲ್ಪವೇ ಕರಗಿ, ಮರಳಿಗೆ ಬೇರೆಯದೇ ಬಣ್ಣ ಕೊಟ್ಟಿವೆ. ಈ ಪ್ರಕ್ರಿಯೆಯೇ ಮಂಗಳನ ಅಂಗಳದಲ್ಲಿ ಇಂಥದೊಂದು ಅಪೂರ್ವ ರಂಗೋಲಿಯನ್ನು ಬಿಡಿಸಿಟ್ಟಿದೆ.

English summary
A stunning image of snow on mars has been beamed back by NASA's Mars orbiter. A beautiful image of snow covered dunes creating beautiful patterns over the rust coloured background was captured by the orbiter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X