ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನದೊಳಗೆ ನೀಡಿದ ಆಹಾರದಲ್ಲಿತ್ತು ಕತ್ತರಿಸಿದ ಹಾವಿನ ತಲೆ!

|
Google Oneindia Kannada News

ಆಹಾರದೊಳಗೆ ಕೀಟಗಳು, ನೊಣಗಳು ಹೆಚ್ಚಾಗಿ ಕಂಡು ಬರುತ್ತವೆ. ಆದರೆ ವಿಮಾನದಲ್ಲಿ ಗಗನಸಖಿಯೊಬ್ಬಳಿಗೆ ಆಹಾರದಲ್ಲಿ ಏನೋ ಕಂಡು ಬಂದಿದ್ದು ಅದನ್ನು ನೋಡಿ ಜೋರಾಗಿ ಕಿರುಚಿದ್ದಾರೆ. ಯಾಕೆಂದರೆ ಆಹಾರದಲ್ಲಿ ಕಂಡಿದ್ದು ಹಾವಿನ ಕತ್ತರಿಸಿದ ತಲೆ.

Recommended Video

ಅಯ್ಯಯ್ಯೋ!!ಊಟದ ತಟ್ಟೆಯಲ್ಲಿ ಹಾವಿನ ತಲೆ ನೋಡಿ ವಿಮಾನ ಸಿಬ್ಬಂದಿಗಳು ಶಾಕ್.. *Viral | OneIndia Kannada

ಹೌದು..ಫ್ಲೈಟ್ ಅಟೆಂಡೆಂಟ್ ತನ್ನ ಆಹಾರದ ಪ್ಯಾಕೆಟ್‌ನಲ್ಲಿ ಹಾವಿನ ಕತ್ತರಿಸಿದ ತಲೆಯನ್ನು ಕಂಡು ಗಾಬರಿಗೊಂಡಿದ್ದಾಳೆ. ಈ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಅಂದಹಾಗೆ ಹಾವುಗಳನ್ನು ಸಹ ಬಹಳ ಉತ್ಸಾಹದಿಂದ ಆಹಾರವಾಗಿ ಸೇವಿಸುವವರಿದ್ದಾರೆ. ಆದರೆ ಅದನ್ನು ನೋಡಲು ಭಯ ಬೀಳುವವರಿಗೆ ಅದನ್ನು ಆಹಾರದಲ್ಲಿ ನೀಡಿದರೆ ಪರಿಸ್ಥಿತಿ ಏನಾಗಬೇಡ?. ಈ ದೃಶ್ಯ ನಿಮ್ಮನ್ನು ಅಳುವಂತೆ ಮಾಡದಿರದು. ವಿಮಾನದ ಕ್ಯಾಬಿನ್ ಸಿಬ್ಬಂದಿಗೂ ಇದೇ ಪರಿಸ್ಥಿತಿ ಎದುರಾಗಿದೆ. ಅವರು ತಮ್ಮ ಆಹಾರದ ಪ್ಯಾಕೆಟ್‌ನಲ್ಲಿ ಹಾವಿನ ಕತ್ತರಿಸಿದ ತಲೆಯನ್ನು ಕಂಡು ಭಯಭೀತರಾಗಿದ್ದಾರೆ.

ಭಯಭೀತರಾದ ಸನ್‌ಎಕ್ಸ್‌ಪ್ರೆಸ್ ಅಟೆಂಡೆಂಟ್

ಭಯಭೀತರಾದ ಸನ್‌ಎಕ್ಸ್‌ಪ್ರೆಸ್ ಅಟೆಂಡೆಂಟ್

ಟರ್ಕಿಯ ರಾಜಧಾನಿ ಅಂಕಾರಾದಿಂದ ಜರ್ಮನಿಯ ಡಸೆಲ್ಡಾರ್ಫ್‌ಗೆ ಹಾರುತ್ತಿದ್ದ ಸನ್ ಎಕ್ಸ್‌ಪ್ರೆಸ್ ಏರ್‌ಲೈನ್ಸ್ ವಿಮಾನದದಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸನ್‌ಎಕ್ಸ್‌ಪ್ರೆಸ್ ಅಟೆಂಡೆಂಟ್ ಅವರು ತಮ್ಮ ವಿಮಾನದಲ್ಲಿ ಸಿಕ್ಕ ಆಹಾರವನ್ನು ತಿನ್ನುತ್ತಿದ್ದಾಗ, ಆಲೂಗಡ್ಡೆ ಮತ್ತು ತರಕಾರಿಗಳ ನಡುವೆ ಸಣ್ಣ ಹಾವಿನ ಕತ್ತರಿಸಿದ ತಲೆಯನ್ನು ಕಂಡಿರುವುದಾಗಿ ಹೇಳಿದ್ದಾರೆ.

ವಿಡಿಯೋ ವೈರಲ್

ವಿಡಿಯೋ ವೈರಲ್

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಮಾನದಲ್ಲಿ ಊಟ ಮಾಡುವುದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು. ಇದರಲ್ಲಿ ಹಾವಿನ ಕತ್ತರಿಸಿದ ತಲೆಯು ಆಹಾರದ ತಟ್ಟೆಯ ಮಧ್ಯದಲ್ಲಿ ಇರುವುದನ್ನು ಕಾಣಬಹುದು. ಈ ಹಾವಿನ ತಲೆ ಚಿಕ್ಕ ಗಾತ್ರದಲ್ಲಿದ್ದು, ಕೊಂಚ ಹಲ್ಲಿ ಆಕಾರದಲ್ಲಿಯೇ ಕಾಣಿಸುತ್ತದೆ. ಆದರೆ ಇದರ ಗಾತ್ರ, ಮೈ ಬಣ್ಣ ನೋಡಿದರೆ ಇದು ಹಾವು ಎನ್ನುವುದು ಸ್ಪಷ್ಟವಾಗಿದೆ. ಆದರೆ ಇದು ಆಹಾರದಲ್ಲಿ ಹೇಗೆ ಬಂತು? ಎನ್ನುವ ಬಗ್ಗೆ ಮಾಹಿತಿ ಇಲ್ಲ. ಈ ವಿಡಿಯೋ ನೋಡಿದ ಜನ ಆಶ್ಚರ್ಯದೊಂದಿಗೆ ಗಾಬರಿಗೊಂಡಿದ್ದಾರೆ. ಈ ವಿಡಿಯೋಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.

ಘಟನೆ ಬಗ್ಗೆ ತನಿಖೆ

ಏವಿಯೇಷನ್ ​​ಬ್ಲಾಗ್ ಒನ್ ಮೈಲ್ ಅಟ್ ಎ ಟೈಮ್ ಅನ್ನು ಉಲ್ಲೇಖಿಸಿ, ದಿ ಇಂಡಿಪೆಂಡೆಂಟ್ ಜುಲೈ 21 ರಂದು ಆಹಾರದಲ್ಲಿ ಹಾವಿನ ತಲೆ ಕಂಡುಬಂದಿದೆ ಎಂದು ವರದಿ ಮಾಡಿದೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವಿಮಾನಯಾನ ಸಂಸ್ಥೆಯು ಈ ಘಟನೆಯನ್ನು "ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ" ಎಂದು ಹೇಳಿದೆ. ಜೊತೆಗೆ ತನಿಖೆಯನ್ನು ಪ್ರಾರಂಭಿಸಲು ಹೇಳಿತು. ಇದರೊಂದಿಗೆ ಆಹಾರ ಸರಬರಾಜು ಕಂಪನಿಯಿಂದ ಏರ್‌ಲೈನ್ಸ್ ಒಪ್ಪಂದವನ್ನೂ ನಿಲ್ಲಿಸಿದೆ. ಆಹಾರದಲ್ಲಿ ಹಾವಿನ ತಲೆ ಬಿದ್ದಿರುವ ವಿಡಿಯೋವನ್ನು ನೀವೂ ನೋಡಿ.

ಆಹಾರ ಸರಬರಾಜು ಕಂಪನಿ ಹೇಳುವುದೇನು?

ಆಹಾರ ಸರಬರಾಜು ಕಂಪನಿ ಹೇಳುವುದೇನು?

ಇಲ್ಲಿ ಆಹಾರ ಸರಬರಾಜು ಕಂಪನಿಯು 2018 ರಿಂದ ವಿಮಾನಯಾನ ಕಂಪನಿಗೆ ತನ್ನ ಅಡುಗೆ ಸೇವೆಯನ್ನು ಒದಗಿಸುತ್ತಿದೆ ಎಂದು ತನ್ನ ಸ್ಪಷ್ಟೀಕರಣದಲ್ಲಿ ತಿಳಿಸಿದೆ, ಆದರೆ ಈ ರೀತಿಯ ದೂರು ಬಂದಿರುವುದು ಇದೇ ಮೊದಲು ಎಂದಿದೆ. ಘಟನೆಯ ಬಗ್ಗೆ ತನಿಖೆ ನಡೆಸುವುದಾಗಿಯೋ ಅದು ಹೇಳಿಕೊಂಡಿದೆ.

ಸಾಮಾನ್ಯವಾಗಿ ಕೀಟಗಳು, ನೊಣ, ಹಲ್ಲಿ, ಜಿರಳೆ ಇಂತಹ ಸಣ್ಣಪುಟ್ಟ ಕೀಟಗಳು ಆಹಾರದಲ್ಲಿ ಬೀಳುವುದು ಅದನ್ನು ನೋಡುವುದು ಸಾಮಾನ್ಯ ಆದರೆ ವಿಷಪೂರಿತ ಹಾವು ಆಹಾರದಲ್ಲಿ ಕಂಡುಬಂದಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ಕಂಡು ಜನ ಬೆರಗಾಗಿದ್ದಾರೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಯುತ್ತಿದ್ದು ಆಹಾರ ಸರಬರಾಜು ಕಂಪನಿಯ ಉತ್ತರಕ್ಕಾಗಿ ನಿರೀಕ್ಷಿಸಲಾಗಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

English summary
An air hostess panics after finding a snake's head in the in-flight food. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X