ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಂದ ರಾಜಪಕ್ಸೆ ಎದುರು ವಿಪಕ್ಷಗಳು ಧೂಳ್ ಧೂಳ್..!

|
Google Oneindia Kannada News

ಕೊಲಂಬೋ, ಆಗಸ್ಟ್ 7: ದ್ವೀಪರಾಷ್ಟ್ರ ಶ್ರೀಲಂಕಾ ಮತ್ತೊಂದು ರಾಜಕೀಯ ದಾಖಲೆಗೆ ಸಾಕ್ಷಿಯಾಗಿದೆ. ಏಷ್ಯಾದಲ್ಲಿ ದೀರ್ಘಾವಧಿಗೆ ಆಡಳಿತ ನಡೆಸಿದ ಖ್ಯಾತಿ ಹೊಂದಿರುವ ರಾಜಪಕ್ಸೆ ಮತ್ತೆ ಸಿಂಹಳಿಯರ ಸಿಂಹಾಸನ ಏರಿದ್ದಾರೆ.

ಶ್ರೀಲಂಕಾ ಪ್ರಧಾನಿ ಮಹಿಂದ ರಾಜಪಕ್ಸೆ ಪಕ್ಷವಾದ ಎಸ್‌ಎಲ್‌ಪಿಪಿ ಭಾರಿ ಅಂತರದಲ್ಲಿ ಜಯಭೇರಿ ಭಾರಿಸಿ, ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. 225 ಸದಸ್ಯ ಬಲದ ಶ್ರೀಲಂಕಾ ಸಂಸತ್‌ಗೆ ಆಗಸ್ಟ್‌ 5 ರಂದು ಚುನಾವಣೆ ನಡೆದಿತ್ತು. ಕೊರೊನಾ ಸೋಂಕು ಹರಡುತ್ತಿದ್ದ ಹಿನ್ನೆಲೆಯಲ್ಲಿ 2 ಬಾರಿ ಮತದಾನ ಮುಂದೂಡಲಾಗಿತ್ತು. ಆದರೂ ಆಗಸ್ಟ್‌ 5 ರಂದು ಚುನಾವಣೆ ನಡೆಸಲಾಗಿತ್ತು.

ಚುನಾವಣೆ ನಡೆದಿದ್ದ 225 ಸ್ಥಾನಗಳ ಪೈಕಿ ರಾಜಪಕ್ಸೆ ಪಕ್ಷ ಎಸ್‌ಎಲ್‌ಪಿಪಿ 146 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆದರೆ ಲಂಕಾದ ಪ್ರಮುಖ ವಿರೋಧ ಪಕ್ಷವಾಗಿರುವ ಸಜಿತ್‌ ಪ್ರೇಮದಾಸರ ಯುನೈಟೆಡ್‌ ನ್ಯಾಷನಲ್‌ ಪಾರ್ಟಿ ಕೇವಲ 53 ಸ್ಥಾನ ಪಡೆದಿದೆ. ತಮಿಳು ಪಕ್ಷಗಳು 16 ಸ್ಥಾನ ಗೆದ್ದಿದ್ದರೆ, ಎಡಪಕ್ಷಗಳ ಮೈತ್ರಿಕೂಟ 10 ಸ್ಥಾನಗಳನ್ನು ಪಡೆದಿದೆ. ಈ ಮೂಲಕ ರಾಜಪಕ್ಸೆ ತಮ್ಮ ರಾಜಕೀಯ ಇತಿಹಾಸದಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ.

SL Election Results: Mahinda Rajapaksa Won 145 Seats

ಶೇ. 60ರಷ್ಟು ಮತ ರಾಜಪಕ್ಸೆ ಪರ..!

ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಒಟ್ಟು 1.5 ಕೋಟಿ ಮತದಾರರು ಇದ್ದಾರೆ. ಇವರಲ್ಲಿ ರಾಜಪಕ್ಸೆಗೆ 60.8 ಲಕ್ಷ ಜನರು ಮತ ನೀಡಿದ್ದಾರೆ. ಎಸ್‌ಎಲ್‌ಪಿಪಿ ಶೇಕಡ 60 ರಷ್ಟು ಮತ ಪಡೆದರೆ, ಯುಎನ್‌ಪಿ ಶೇಕಡ 20ರಷ್ಟು ವೋಟ್ ಪಡೆದಿದೆ. ಈ ಮೂಲಕ ಬೃಹತ್ ಅಂತರದಲ್ಲಿ ಮತ್ತೆ ಗೆಲುವು ಸಾಧಿಸಿರುವ ರಾಜಪಕ್ಸೆ, ಶ್ರೀಲಂಕಾ ರಾಜಕೀಯದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಈ ಗೆಲುವಿನ ಸಂತಸವನ್ನು ಅಧ್ಯಕ್ಷ ಗೋಟಬಯ ರಾಜಪಕ್ಸೆ ಟ್ವೀಟ್ ಮೂಲಕ ಹಂಚಿಕೊಂಡಿದ್ದು, ಮತದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ.

SL Election Results: Mahinda Rajapaksa Won 145 Seats

ರಾಜಪಕ್ಸೆಗೆ ಪ್ರಧಾನಿ ಮೋದಿ ವಿಶ್..!

ನೆರೆಯ ದೇಶ ಶ್ರೀಲಂಕಾ ಜೊತೆಗಿನ ಸಂಬಂಧ ಭಾರತಕ್ಕೆ ಅತಿಮುಖ್ಯ. ಅದರಲ್ಲೂ ಲಂಕಾ ಜೊತೆ ಚೀನಾ ಸ್ನೇಹ ಬೆಳೆಸುತ್ತಿರುವ ಈ ಸಂದರ್ಭ ಲಂಕಾ ಸಂಬಂಧ ಭಾರತಕ್ಕೆ ಮುಖ್ಯವಾದದ್ದು. ಹೀಗೆ ಮತ್ತೊಮ್ಮೆ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದ ನೆರೆಯ ದೇಶದ ನಾಯಕನಿಗೆ ಪ್ರಧಾನಿ ಮೋದಿ ದೂರವಾಣಿ ಕರೆ ಮಾಡಿ ಅಭಿನಂದಿಸಿದ್ದಾರೆ. ಅಷ್ಟೇ ಅಲ್ಲ ಟ್ವೀಟ್ ಮಾಡುವ ಮೂಲಕ ವಿಶ್ ಮಾಡಿದ್ದಾರೆ.

English summary
Mahinda Rajapaksa Came To The Power Again. Rajapaksa’s Sri Lanka People’s Party alone had won 145 seats and with its allies have won 150 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X