• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾದ ಸಿನೋಫಾರ್ಮ್ ಅಭಿವೃದ್ಧಿಪಡಿಸಿರುವ ಕೊವಿಡ್ ಲಸಿಕೆ ಸುರಕ್ಷಿತ

|

ಚೀನಾ ನ್ಯಾಷನಲ್ ಫಾರ್ಮಾಸ್ಯುಟಿಕಲ್ ಗ್ರೂಪ್ (ಸಿನೊಫಾರ್ಮ್) ಯ ಘಟಕವು ಅಭಿವೃದ್ಧಿಪಡಿಸಿದ ಕೊರೊನಾವೈರಸ್ ಲಸಿಕೆ ಸುರಕ್ಷಿತ ಎಂದು ಸಂಶೋಧಕರು ತಿಳಿಸಿದ್ದಾರೆ.

ಗಡಿಯಲ್ಲಿ ಚೀನಾದ ರಸ್ತೆ: ಭಾರತದ ಆತಂಕಕ್ಕೆ ಕಾರಣವೇನು?

ಆ ಲಸಿಕೆಯಲ್ಲಿ ರೋಗ ನಿರೋಧಕ ಲಕ್ಷಣ ಕಂಡುಬಂದಿದೆ.

ಈಗಾಗಲೇ ಕೊನೆಯ ಹಂತದ ಪ್ರಯೋಗ ನಡೆಯಲಿದೆ. ಸಾವಿರಾರು ಮಂದಿ ಮೇಲೆ ಪ್ರಯೋಗ ನಡೆಸಲಾಗಿದ್ದು, ಉತ್ತಮ ಫಲಿತಾಂಶ ಕೂಡ ಲಭ್ಯವಾಗಿದೆ.ಸಿನೊಫಾರ್ಮ್ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಸಂಭವನೀಯ ಲಸಿಕೆಯ 3 ನೇ ಹಂತದ ಪ್ರಯೋಗವನ್ನು ನಡೆಸುತ್ತಿದೆ, 15,000 ಜನರನ್ನು ನೇಮಕ ಮಾಡುವ ನಿರೀಕ್ಷೆಯಿದೆ.

ಪ್ರಯೋಗ ಒಪ್ಪಂದದ ಪ್ರಕಾರ ಸಾಕಷ್ಟು ಮಂದಿಯನ್ನು ಪಾಕಿಸ್ತಾನಕ್ಕೂ ಕೂಡ ಕಳಿಸುತ್ತಿದೆ. ಈ ಲಸಿಕೆಯು ಯಾವುದೇ ಅಡ್ಡ ಪರಿಣಾಮವನ್ನು ಬೀರುವುದಿಲ್ಲ. ಮೊದಲು ಹಾಗೂ ಎರಡನೇ ಹಂತದಲ್ಲಿ 320 ಮಂದಿ ಮೇಲೆ ಪ್ರಯೋಗ ನಡೆದಿದೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಈ ಲಸಿಕೆಯು ಜನರಲ್ಲಿ ರೋಗ ನಿರೋಧಕ ಶಕ್ತಿಯನ್ನು ಉಂಟು ಮಾಡುತ್ತದೆ. ಆದರೆ ಕೊವಿಡ್ ರೋಗವನ್ನು ತಡೆಗಟ್ಟಲು ಅದು ಸಾಕೇ ಎನ್ನುವ ಬಗ್ಗೆ ಸಂಶೋಧಕರು ಹೇಳಿದ್ದಾರೆ.

ಸಿನೋಫಾರ್ಮ್ ಚೇರ್ಮನ್ ಮಾತನಾಡಿ, ಈ ವರ್ಷದ ಅಂತ್ಯದಲ್ಲಿ ಮೂರನೇ ಹಂತದ ಪ್ರಯೋಗವನ್ನು ನಡೆಸಲಿದ್ದು, ಮೂರು ತಿಂಗಳಲ್ಲಿ ಪ್ರಯೋಗ ಮುಗಿಯಲಿದೆ ಎಂದು ಭರವಸೆ ನೀಡಿದ್ದಾರೆ.

ಕೊರೊನಾ ವೈರಸ್ ವಿಶ್ವದಾದ್ಯಂತ 7,50,000 ಮಂದಿಯ ಹತ್ಯೆಗೆ ಕಾರಣವಾಗಿದೆ. 150 ಕ್ಕೂ ಹೆಚ್ಚು ಕಂಪನಿಗಳು ಕೊರೊನಾ ಲಸಿಕೆ ಸಂಶೋಧನೆಯಲ್ಲಿ ತೊಡಗಿವೆ. ವಿಶ್ವದಲ್ಲೇ ಮೊದಲ ಲಸಿಕೆ ಅಭಿವೃದ್ಧಿಪಡಿಸಿದ ರಾಷ್ಟ್ರ ಎಂಬ ಹೆಗ್ಗಳಿಕೆಗೆ ರಷ್ಯಾ ಪಾತ್ರವಾಗಿದೆ.

English summary
Sinopharm has published clinical data on its adjuvanted SARS-CoV-2–inactivated virus vaccine. The phase 1 and 2 results suggest the vaccine may be safe, tolerable and capable of triggering production of antibodies against the pandemic coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X