ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಹ್.. ಜುಲೈನಲ್ಲಿ 'ಕೊರೊನಾ-ದಿ ಎಂಡ್': ಸಂಶೋಧಕರ ಈ ಮಾತು ನಿಜವಾಗಲಿ!

|
Google Oneindia Kannada News

ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ಇಡೀ ವಿಶ್ವವೇ ತಲ್ಲಣಗೊಂಡಿದೆ. ಇಲ್ಲಿಯವರೆಗೂ 30,07,194 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಡೆಡ್ಲಿ ಕೋವಿಡ್-19 ನಿಂದಾಗಿ 2,07,265 ಜನ ಪ್ರಾಣ ಕಳೆದುಕೊಂಡಿದ್ದಾರೆ.

Recommended Video

ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಶಾಸಕ ಶ್ರೀಕಂಠೇಗೌಡ ಮತ್ತು ಅವರ ಪುತ್ರ,ದೂರು ದಾಖಲು

ದಿನೇ ದಿನೇ ಸೋಂಕಿತ ಪ್ರಕರಣಗಳು ಮತ್ತು ಸಾವಿನ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಕೊರೊನಾ ಅಟ್ಟಹಾಸ ಅದ್ಯಾವಾಗ ನಿಲ್ಲುತ್ತೋ, ಗೊತ್ತಿಲ್ಲ. ಆದರೆ, ಲಸಿಕೆ ಕಂಡುಹಿಡಿಯುವವರಿಗೂ ಕೊರೊನಾ ವೈರಸ್ ನಿಂದಾಗಿ ಅಪಾಯ ತಪ್ಪಿದ್ದಲ್ಲ ಎಂಬುದು ಕಟು ವಾಸ್ತವ.

ಗುಡ್ ನ್ಯೂಸ್: ಕೊರೊನಾ ಕೊಲ್ಲಲು ಬಳಸಿದ ಅಸ್ತ್ರ ಭಾರತದಲ್ಲಿ ಯಶಸ್ವಿ!ಗುಡ್ ನ್ಯೂಸ್: ಕೊರೊನಾ ಕೊಲ್ಲಲು ಬಳಸಿದ ಅಸ್ತ್ರ ಭಾರತದಲ್ಲಿ ಯಶಸ್ವಿ!

ಹೀಗಿರುವಾಗಲೇ, ಕೊರೊನಾ ವೈರಸ್ ನಿರ್ನಾಮದ ಬಗ್ಗೆ ಸಿಂಗಾಪುರ್ ನ ಸಂಶೋಧಕರ ತಂಡ ಭವಿಷ್ಯ ನುಡಿದಿದೆ. ಸಿಂಗಾಪುರ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಅಂಡ್ ಡಿಸೈನ್ ನಲ್ಲಿರುವ ಸಂಶೋಧಕರ ತಂಡದ ಪ್ರಕಾರ, ಜುಲೈ ಅಂತ್ಯಕ್ಕೆ ಭಾರತದಲ್ಲಿ ಬಹುಶಃ ಕೊರೊನಾ ಕೊನೆಯಾಗಲಿದೆ.

ಡೇಟಾ ಚಾಲಿತ ಮುನ್ನೋಟ

ಡೇಟಾ ಚಾಲಿತ ಮುನ್ನೋಟ

ಕೃತಕ ಬುದ್ಧಿಮತ್ತೆ ಆಲ್ಗಾರಿದಮ್ (artificial intelligence algorithm) ಬಳಸಿ ಸಿಂಗಾಪುರ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಅಂಡ್ ಡಿಸೈನ್ ನಲ್ಲಿರುವ ಸಂಶೋಧಕರ ತಂಡ ತಯಾರಿಸಿರುವ ಡೇಟಾ ಚಾಲಿತ ಮುನ್ನೋಟದ ಪ್ರಕಾರ ಜುಲೈ 26 ರ ವೇಳೆಗೆ ಭಾರತದಲ್ಲಿ ಹೊಸ ಕೋವಿಡ್-19 ಪ್ರಕರಣಗಳು ಕೊನೆಯಾಗುವ ಸಾಧ್ಯತೆ ಇದೆ. ಮೇ 21 ರ ವೇಳೆಗೆ 97% ರಷ್ಟು ಒಟ್ಟು ಕೇಸ್ ಗಳು ಪತ್ತೆಯಾಗಲಿವೆ ಅಂತಲೂ ಸಂಶೋಧಕರು ಹೇಳಿದ್ದಾರೆ.

131 ರಾಷ್ಟ್ರಗಳಲ್ಲಿ ಕೊರೊನಾ ಕೊನೆ ಯಾವಾಗ.?

131 ರಾಷ್ಟ್ರಗಳಲ್ಲಿ ಕೊರೊನಾ ಕೊನೆ ಯಾವಾಗ.?

ಭಾರತ ಮಾತ್ರ ಅಲ್ಲ.. ಕೃತಕ ಬುದ್ದಿಮತ್ತೆ ಆಲ್ಗಾರಿದಮ್ ಮೂಲಕ ವಿಶ್ವದ 131 ವಿವಿಧ ರಾಷ್ಟ್ರಗಳಲ್ಲಿ ಕೋವಿಡ್-19 ಯಾವಾಗ ಕೊನೆಯಾಗಲಿದೆ ಎಂಬುದನ್ನೂ ಊಹಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಯೂನಿವರ್ಸಿಟಿಯ ವೆಬ್ ತಾಣದಲ್ಲಿ ಏಪ್ರಿಲ್ 26 ರಂದು ಪ್ರಕಟಿಸಲಾಗಿದೆ.

ರೋಗದ ಲಕ್ಷಣ ಇಲ್ಲದಿದ್ದರೂ ಪಾಸಿಟಿವ್: ಬೆಚ್ಚಿಬಿದ್ದ ಹೊಂಗಸಂದ್ರ ಜನತೆ!ರೋಗದ ಲಕ್ಷಣ ಇಲ್ಲದಿದ್ದರೂ ಪಾಸಿಟಿವ್: ಬೆಚ್ಚಿಬಿದ್ದ ಹೊಂಗಸಂದ್ರ ಜನತೆ!

ವಿಶ್ವದಲ್ಲಿ ಕೊರೊನಾ ಅಂತ್ಯ ಯಾವಾಗ.?

ವಿಶ್ವದಲ್ಲಿ ಕೊರೊನಾ ಅಂತ್ಯ ಯಾವಾಗ.?

ಸಂಶೋಧಕರ ತಂಡದ ಪ್ರಕಾರ, ವಿಶ್ವದಲ್ಲಿ ಡಿಸೆಂಬರ್ 9 ರಂದು ಕೋವಿಡ್-19 ಅಂತ್ಯವಾಗಲಿದೆ. ಆದ್ರೆ, ಬಹ್ರೇನ್, ಕತಾರ್ ಸೇರಿದಂತೆ ಕೆಲವು ಕಡೆ ಮಾತ್ರ ಫೆಬ್ರವರಿ 2021 ರವರೆಗೂ ಕೊರೊನಾ ಆರ್ಭಟಿಸಲಿದೆ.

ಸಂಶೋಧಕರ ಪ್ರಕಾರ..

ಸಂಶೋಧಕರ ಪ್ರಕಾರ..

ಕೋವಿಡ್-19 ಇತರೆ ಸಾಂಕ್ರಾಮಿಕ ರೋಗಗಳಂತೆ ಜೀವನಚಕ್ರ ಮಾದರಿಯನ್ನು ಅನುಸರಿಸುತ್ತವೆ. ಆರಂಭಿಕ ಹಂತದಲ್ಲಿ ರೋಗ ವ್ಯಾಪಕವಾಗಿ ಹಬ್ಬುವ ಕಾರಣ, ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತದೆ. ಇದಾದ ಬಳಿಕ 'ಇನ್ಫ್ಲೆಕ್ಷನ್ ಪಾಯಿಂಟ್' ತಲುಪಲಿದ್ದು, ಪ್ರಕರಣಗಳ ಸಂಖ್ಯೆ ಸಹಜವಾಗಿ ಕಡಿಮೆಯಾಗುತ್ತದೆ. ನಂತರ ಬರುವ Deceleration ಹಂತದಲ್ಲಿ ಸಾಂಕ್ರಾಮಿಕ ರೋಗ ಕೊನೆಗೊಳ್ಳುತ್ತದೆ. ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳು ಕೂಡ ಪ್ರಕರಣಗಳ ಏರಿಳಿತಕ್ಕೆ ಕಾರಣವಾಗಿರುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಛೇ.. ಪಾದರಾಯನಪುರದ ಕಿಡಿಗೇಡಿಗಳನ್ನು ಹಿಡಿದ ಪೊಲೀಸರಿಗೆ ಇದೆಂಥಾ ಶಿಕ್ಷೆ!ಛೇ.. ಪಾದರಾಯನಪುರದ ಕಿಡಿಗೇಡಿಗಳನ್ನು ಹಿಡಿದ ಪೊಲೀಸರಿಗೆ ಇದೆಂಥಾ ಶಿಕ್ಷೆ!

ಯುಎಸ್ಎನಲ್ಲಿ ಕೊರೊನಾ ಕೊನೆ ಯಾವಾಗ.?

ಯುಎಸ್ಎನಲ್ಲಿ ಕೊರೊನಾ ಕೊನೆ ಯಾವಾಗ.?

ಯಾವ ದೇಶದಲ್ಲಿ ಕೋವಿಡ್-19 ಯಾವಾಗ ಕೊನೆಯಾಗುತ್ತದೆ ಎಂಬುದನ್ನು ತಿಳಿಯಲು ಸಂಶೋಧಕರು ಪ್ರತಿ ರಾಷ್ಟ್ರದ ಇನ್ಫೆಕ್ಷನ್ ಮಾಹಿತಿಯನ್ನು ಕಲೆಹಾಕಿದ್ದಾರೆ. ಬಳಿಕ ಎಸ್ (ಶಂಕಿತರು) ಐ (ಸೋಂಕಿತರು) ಆರ್ (ರೋಗ ಗೆದ್ದವರು) ಅಂಕಿ-ಅಂಶವನ್ನು ಪರಿಗಣಿಸಿ ಸಂಭಾವ್ಯ ದಿನಾಂಕವನ್ನು ಊಹಿಸಿದ್ದಾರೆ. ಏಪ್ರಿಲ್ 25 ರವರೆಗೂ ಲಭ್ಯವಾದ ಅಂಕಿ-ಅಂಶದ ಪ್ರಕಾರ, ಯು.ಎಸ್.ಎ ಮತ್ತು ಇಟಲಿಯಲ್ಲಿ ಆಗಸ್ಟ್ ಅಂತ್ಯಕ್ಕೆ ಕೊರೊನಾ ಅಂತ್ಯವಾಗಲಿದೆ. ಮೇ 12 ರ ಸುಮಾರಿಗೆ 97% ರಷ್ಟು ಒಟ್ಟು ಕೇಸ್ ಗಳು ಯು.ಎಸ್.ಎ ನಲ್ಲಿ ಪತ್ತೆಯಾದರೆ, ಮೇ 8 ರ ಸುಮಾರಿಗೆ 97% ರಷ್ಟು ಒಟ್ಟು ಕೇಸ್ ಗಳು ಇಟಲಿಯಲ್ಲಿ ಪತ್ತೆಯಾಗಲಿದೆ.

ಅಪಾಯಕಾರಿ.!

ಅಪಾಯಕಾರಿ.!

ಕೊರೊನಾ ಯಾವಾಗ ಕೊನೆಯಾಗುತ್ತದೆ ಎಂದು ಊಹಿಸಿರುವ ಸಂಶೋಧಕರು ಅದರ ಜೊತೆಗೆ ಒಂದು ಎಚ್ಚರಿಕೆಯನ್ನೂ ನೀಡಿದ್ದಾರೆ. 'ಅಂತ್ಯವಾಗುವ ದಿನಾಂಕ'ಗಳ ಬಗ್ಗೆ ಅತಿಯಾಗಿ ಆಶಾವಾದಿಯಾಗುವುದು ಅಪಾಯಕಾರಿ ಎಂದೂ ಸಂಶೋಧಕರೇ ತಿಳಿಸಿದ್ದಾರೆ. ಹಾಗೇ, ಲಾಕ್ ಡೌನ್ ಸಡಿಲಿಕೆ ಮಾಡುವ ಮೂಲಕ ಸೋಂಕಿತರ ಪ್ರಮಾಣ ಜಾಸ್ತಿಯಾಗುತ್ತದೆ ಎಂದೂ ಹೇಳಿದ್ದಾರೆ. ಅಂದ್ಹಾಗೆ, ಸಂಶೋಧಕರ ಈ ಎಸ್.ಐ.ಆರ್ ಮಾಡೆಲ್ ನಲ್ಲಿ ಸೋಂಕಿನ ಎರಡನೇ ಅಲೆಯ ಪ್ರಭಾವವನ್ನು ಪರಿಗಣಿಸಿಲ್ಲ ಎಂಬುದು ನಿಮ್ಮ ಗಮನದಲ್ಲಿರಲಿ.

English summary
Singapore Study: India Could See Last Of New Covid 19 Cases By July End.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X