ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರ: ಮಹಾಭಾರತ ಕಾರ್ಡ್ ಆಟ ಆಡಿ ನೋಡಿ!

By Mahesh
|
Google Oneindia Kannada News

ಸಿಂಗಪುರ, ಜೂ.20: ಭಾರತೀಯರ ಮೂಲದ ಯುವಕರು ಶುರು ಮಾಡಿರುವ ಸ್ಟಾರ್ ಅಪ್ ಕಂಪನಿ ತನ್ನ ಮೊದಲ ಉತ್ಪನ್ನವಾಗಿ ಮಹಾಭಾರತ ಆಧಾರಿತ ಕಾರ್ಡ್ ಗೇಮ್ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

ಮಹಾಭಾರತದ ಪಾತ್ರಗಳನ್ನು ಬಳಸಿಕೊಂಡು ಕಾರ್ಡ್ ಆಟವನ್ನು ವಿನ್ಯಾಸಗೊಳಿಸಲಾಗಿದೆ. ಈಗಿನ ಅನೇಕ ಜುಗಾರಿಗಳಿಗೆ ಮಹಾಭಾರತದ ಜೂಜೇ ಪ್ರೇರಣೆ ಎಂದು 29 ವರ್ಷ ವಯಸ್ಸಿನ ವರುಣ್ ದೇವನಾಥನ್ ಹೇಳಿದ್ದಾರೆ. ಅರ್ಜುನ ಹಾಗೂ ಕರ್ಣ ಪಾತ್ರಗಳನ್ನು ಆರಂಭದಲ್ಲಿ ಬಳಸಿಕೊಳ್ಳಲಾಗಿದೆ.

Singapore startup launches card game on Mahabharata

ವರ್ಷಾಂತ್ಯಕ್ಕೆ ಇನ್ನಷ್ಟು ಪಾತ್ರಗಳನ್ನು ಬಳಸಿಕೊಂಡು ಕಾರ್ಡ್ ಗಳನ್ನು ಹೆಚ್ಚಿಸಲಾಗುವುದು. ಮೇ.30ರಂದು ವ್ಯಾಸ ಮಹರ್ಷಿ ಹೆಸರಿನಲ್ಲಿ ಆರಂಭವಾದ ಈ ಆಟದ ಪೂರ್ಣ ಪ್ಯಾಕೇಜ್ ರಿಲೀಸ್ ಆಗಲು 2016 ತನಕ ಕಾಯಬೇಕಾಗುತ್ತದೆ.

ಮಹಾಭಾರತದಂಥ ಬೃಹತ್ ಗ್ರಂಥದ ಪಾತ್ರಗಳು ಜನಸಾಮಾನ್ಯರಿಗೆ ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿ ತಿಳಿಸುವ ಉದ್ದೇಶದಿಂದ ಗೇಮ್ ವಿನ್ಯಾಸಗೊಳಿಸಲು ಆರಂಭಿಸಿದೆವು ನನ್ನ ಜೊತೆ ವೈದ್ಯ ಮಿತ್ರ ಹರೇನ್ ಶಿವರಾಜ್(30) ನೆರವಾದರು. 14 ರಿಂದ 30 ವರ್ಷ ವಯಸ್ಕರನ್ನು ಗಮನದಲ್ಲಿಟ್ಟುಕೊಂಡು ಆಟ ರೂಪಿಸಲಾಗಿದೆ. ಗೇಮ್ ರಿಲೀಸ್ ಗೂ ಮುನ್ನ ಭಾರತ ಹಾಗೂ ಯುಎಸ್ ಎ ನಿಂದ ಪ್ರೀ ಆರ್ಡರ್ ಕೂಡಾ ಮಾಡಬಹುದು ಎಂದು ದೇವನಾಥನ್ ಹೇಳಿದ್ದಾರೆ.

ಗೇಮ್ ರೂಪಿಸುವಲ್ಲಿ ದೆಹಲಿ ಮೂಲದ ಕಲಾವಿದ ಅನಿರುಧ್ ಸಾಯಿನಾಥ್, ಸಿಂಗಪುರದ ಮೊಬೈಲ್ ಹಾಗೂ ಕಂಪ್ಯೂಟರ್ ಗೇಮ್ಸ್ ವಿನ್ಯಾಸಗಾರ ಬೆಂಜಮಿನ್ ತಾನ್ ಕೂಡಾ ನೆರವಾಗಿದ್ದಾರೆ. ಇಸ್ಲೀಟ್ ಎಲೆ ಬಿಟ್ಟರೆ, ಡಬ್ಲ್ಯೂಡಬ್ಲ್ಯೂಎಫ್ ಕಾರ್ಡ್ ಗೇಮ್ ಭಾರತದಲ್ಲಿ ಜನಪ್ರಿಯಗೊಂಡಿತ್ತು. ಈಗ ಈ ಮಹಾಭಾರತ ಗೇಮ್ ಯಾವ ರೀತಿ ಮೋಡಿ ಮಾಡಲಿದೆ ನೋಡಬೇಕಿದೆ.(ಪಿಟಿಐ)

English summary
An Indian-Singaporean startup has launched a card game based on the Indian mythological epic Mahabharata with plans to put it online by the end of 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X