ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದ ಜೂಜುಕೋರ ವೆಬ್ 'ಅಡ್ಡಾ' ಬಂದ್

By Mahesh
|
Google Oneindia Kannada News

ಸಿಂಗಪುರ, ಫೆ.3: ಜೂಜುಕೋರರ ಸ್ವರ್ಗ ಎನಿಸಿಕೊಂಡಿದ್ದ ಸಿಂಗಪುರದಲ್ಲಿ ಈಗ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಇಲ್ಲಿನ ವಿದೇಶಾಂಗ ಸಚಿವಾಲಯ ಲೈಸನ್ ರಹಿತ ಜೂಜುಕೋರರ 'ವೆಬ್' ಅಡ್ಡಾಗಳನ್ನು ಬಂದ್ ಮಾಡುತ್ತಿದ್ದಾರೆ.

ಸುಮಾರು ನೂರಕ್ಕೂ ಅಧಿಕ ಗ್ಯಾಂಬ್ಲಿಂಗ್ ವೆಬ್ ಸೈಟ್ ಗಳನ್ನು ವಿದೇಶಾಂಗ ಸಚಿವಾಲಯ ಬಂದ್ ಮಾಡಿದೆ. ಇನ್ನಷ್ಟು ವೆಬ್ ಸೈಟ್ ಗಳು ಬಂದ್ ಆಗುವ ಭೀತಿ ಎದುರಿಸುತ್ತಿದೆ. ಬೆಟ್ಟಿಂಗ್ ದಂಧೆ ಹತ್ತಿಕ್ಕಲು ರೂಪಿಸಲಾಗಿರುವ ಹೊಸ ಕಾನೂನು ವೆಬ್ ತಾಣಗಳಿಗೆ ಮಾರಕವಾಗಿದೆ.

ಬೆಟ್ 365, Ladbrokes, 888.ಕಾಂ ವೆಬ್ ತಾಣಗಳು ಬಂದ್ ಆಗಿವೆ. ಎಲ್ಲೋ ಕುಳಿತು ಯಾರೋ ಜೂಜುಕೋರರನ್ನು ನಿಯಂತ್ರಿಸುವುದನ್ನು ತಡೆಗಟ್ಟಲು ಈ ರೀತಿ ಕ್ರಮ ಅಗತ್ಯವಾಗಿತ್ತು. ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟಾಗುವುದನ್ನು ತಪ್ಪಿಸಲು ಹೊಸ ಕಾನೂನು ರೂಪಿಸಬೇಕಾಯಿತು ಎಂದು ಸಚಿವಾಲಯ ಹೇಳಿದೆ. [ಅಶ್ಲೀಲ ವೆಬ್ ತಾಣಗಳ ಕ್ಲೀನ್ ಮಾಡಿದ ಚೀನಾ]

Singapore starts blocking gambling websites

ಹೀಗಾಗಿ ಈ ಬೆಟ್ಟಿಂಗ್ ದಂಧೆ ನಡೆಸುವ ವೆಬ್ ತಾಣಗಳಿಗೆ ಹಣ ನೀಡಿದವರು ಈಗ ತಲೆ ಮೇಲೆ ಕೈಹೊತ್ತಿಕೊಂಡು ಕುಳಿತುಕೊಳ್ಳುವಂತಾಗಿದೆ. ರಿಮೋಟ್ ಗ್ಯಾಂಬ್ಲಿಂಗ್ ಕಾಯ್ದೆ ಜಾರಿಗೆ ತರಲಾಗಿದ್ದು, ಅಗತ್ಯ ಬಿದ್ದರೆ ಫ್ರಾನ್ಸ್ ನೆರವು ಪಡೆದುಕೊಂಡು ಕಾನೂನು ಇನ್ನಷ್ಟು ಬಲಗೊಳಿಸಲು ಚಿಂತಿಸಲಾಗಿದೆ.

ಫೋನ್, ಆನ್ ಲೈನ್ ಜುಗಾರಿ ಅಡ್ಡಾಗಳು ಈಗ ಕೋಟಿಗಟ್ಟಲೆ ನಷ್ಟ ಅನುಭವಿಸಬೇಕಾಗಿದೆ. ಲೈಸನ್ ರಹಿತ ಜೂಜುಕೋರರು ಸಿಕ್ಕಿಬಿದ್ದರೆ 6 ತಿಂಗಳು ಜೈಲು ಅಥವಾ 5,000 ಸಿಂಗಪುರ ಡಾಲರ್ ದಂಡ ತೆರಬೇಕಾಗುತ್ತದೆ.

ಅದರೆ, ಏನೇ ಕಠಿಣ ಕಾನೂನು ರೂಪಿಸಿದರೂ ಮೊಬೈಲ್ ಗಳಲ್ಲಿ ಈ ಜುಗಾರಿ ವೆಬ್ ತಾಣಗಳು ಇನ್ನೂ ಓಪನ್ ಆಗುತ್ತಿದ್ದು, ಫೋನ್, ಟ್ಯಾಬ್ಲೆಟ್ ಗಳಲ್ಲಿ ಜೂಜಾಟ ಮುಂದುವರೆದಿರುವ ಸುದ್ದಿ ಬಂದಿದೆ.

ಈ ಹಿಂದೆ ಚೀನಾದಲ್ಲಿ ಆನ್'ಲೈನ್ ಸ್ವಚ್ಛತಾ ಆಂದೋಲನ ನಡೆಸಿ ಅಂತರ್ಜಾಲದಲ್ಲಿ ಕಂಡು ಬರುವ ನಿಯಮಬಾಹಿರ ಅಶ್ಲೀಲ ವೆಬ್ ತಾಣಗಳನ್ನು ಒಂದೊಂದಾಗಿ ಮುಚ್ಚಲಾಗಿತ್ತು. ಸರಿ ಸುಮಾರು 422ಕ್ಕೂ ಅಧಿಕ ವೆಬ್ ಸೈಟ್ ಗಳನ್ನು ಬಂದ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.(ಪಿಟಿಐ)

English summary
Singapore has started blocking hundreds of gambling websites to curb unlicensed online gambling, said the Ministry of Home Affairs (MHA).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X