ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳಲ್ಲಿ ಹೆಚ್ಚಾದ ಕೊರೊನಾ ರೂಪಾಂತರ ಸೋಂಕು; ಶಾಲೆಗಳಿಗೆ ಬೀಗ ಜಡಿದ ಸಿಂಗಪುರ

|
Google Oneindia Kannada News

ಸಿಂಗಪುರ, ಮೇ 17: ಸಿಂಗಪುರದಲ್ಲಿ ರೂಪಾಂತರಗೊಂಡಿರುವ ಕೊರೊನಾ ಸೋಂಕು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಿಂಗಪುರ ಆಡಳಿತಾಧಿಕಾರಿಗಳು ಎಚ್ಚರಿಕೆ ನೀಡಿದ್ದು, ಬುಧವಾರದಿಂದ ಶಾಲೆಗಳನ್ನು ಮುಚ್ಚಲು ನಿರ್ಧರಿಸಲಾಗಿದೆ.

ಕಳೆದ ಎಂಟು ತಿಂಗಳಿನಿಂದ ಸಿಂಗಪುರ ಕೊರೊನಾ ಸೋಂಕಿನಿಂದ ಮುಕ್ತವಾಗಿತ್ತು. ಆದರೆ ಈಚೆಗೆ ಕೊರೊನಾ ಪ್ರಕರಣಗಳು ಮತ್ತೆ ಪತ್ತೆಯಾಗಿದ್ದು, ಸರ್ಕಾರ ಕಠಿಣ ನಿಯಮಗಳನ್ನು ಹೇರಲು ನಿರ್ಧರಿಸಿದೆ. ಜೊತೆಗೆ ಕೊರೊನಾ ರೂಪಾಂತರ ಸೋಂಕು ಮಕ್ಕಳ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತಿದೆ ಎಂಬ ಕಾರಣಕ್ಕೆ ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಕಾಲೇಜುಗಳನ್ನು ಮೇ 19ರಿಂದ ಮುಚ್ಚಲು ನಿರ್ಧರಿಸಲಾಗಿದೆ.

ಅಲೆಗಳ ಆಟ: ಮಕ್ಕಳಿಗೂ ಇದೆಯಾ ಕೊರೊನಾವೈರಸ್ ಲಸಿಕೆ?ಅಲೆಗಳ ಆಟ: ಮಕ್ಕಳಿಗೂ ಇದೆಯಾ ಕೊರೊನಾವೈರಸ್ ಲಸಿಕೆ?

ಭಾನುವಾರ ಸಿಂಗಪುರದಲ್ಲಿ 38 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಎಂಟು ತಿಂಗಳ ನಂತರ ಇದೇ ಮೊದಲ ಬಾರಿ ಒಂದೇ ದಿನದಲ್ಲಿ ದಾಖಲಾದ ಅತಿ ಹೆಚ್ಚು ಪ್ರಕರಣ ಇದಾಗಿತ್ತು. ಜೊತೆಗೆ ಶಾಲೆಗೆ ತೆರಳುತ್ತಿದ್ದ ಮಕ್ಕಳಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Singapore Shuts Schools As Warning Of New Virus Strain Infecting Children

"ಭಾರತದಲ್ಲಿ ಮೊದಲ ಬಾರಿ ಪತ್ತೆಯಾಗಿದ್ದ B.1.617 ರೂಪಾಂತರ ಸೋಂಕಿನಂಥ ಮಾದರಿ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿರುವುದು ಗೋಚರಿಸಿದೆ. ಇದು ಅತ್ಯಂತ ವೇಗವಾಗಿ ಹರಡುತ್ತಿದೆ. ಆದರೆ ಸೋಂಕಿಗೆ ಒಳಗಾಗಿರುವ ಮಕ್ಕಳ ಸ್ಥಿತಿ ಗಂಭೀರವಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಶಾಲೆಗಳನ್ನು ಮುಚ್ಚಲು ಸೂಚಿಸಲಾಗಿದೆ" ಎಂದು ಆರೋಗ್ಯ ಸಚಿವ ಆನ್ ಯೆ ಕಂಗ್ ತಿಳಿಸಿದ್ದಾರೆ.

English summary
Singapore will close schools from Wednesday as authorities warned new coronavirus strains affecting children more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X