ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಾಪುರದಲ್ಲಿ ಮೂರನೇ ಬಾರಿ ಪ್ರಧಾನಿ ಲೀ ಸೀನ್ ಲೂಂಗ್ ಜಯಭೇರಿ

|
Google Oneindia Kannada News

ಸಿಂಗಾಪುರ, ಜುಲೈ.12: ಕೊರೊನಾವೈರಸ್ ಅಟ್ಟಹಾಸದ ನಡುವೆಯೂ ಸಿಂಗಾಪುರದಲ್ಲಿ ನಡೆದ ಚುನಾವಣೆಯಲ್ಲಿ ಲೀ ಸೀನ್ ಲೂಂಗ್ ನೇತೃತ್ವದ ಪೀಪಲ್ಸ್ ಆ್ಯಕ್ಷನ್ ಪಾರ್ಟಿ ಸ್ಪಷ್ಟ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿದೆ.

ಪೀಪಲ್ಸ್ ಆ್ಯಕ್ಷನ್ ಪಾರ್ಟಿಯ ಸ್ಪರ್ಧಿಸಿದ ಸಂಸತ್ತಿನ 93 ಸ್ಥಾನಗಳ ಪೈಕಿ 83 ಸ್ಥಾನಗಳಲ್ಲಿ ಜಯಭೇರಿ ಬಾರಿಸುವುದರ ಮೂಲಕ ಅಧಿಕಾರ ಉಳಿಸಿಕೊಂಡಿದೆ. ಇನ್ನು, ಬಾಕಿ ಉಳಿದ 10 ಸ್ಥಾನಗಳನ್ನು ವರ್ಕರ್ಸ್ ಪಾರ್ಟಿಯು ಗೆದ್ದುಕೊಂಡಿದೆ.

ಕೊರೊನಾ ಸೋಂಕು ವ್ಯಾಪಕ: ಲಾಕ್ ಡೌನ್ ಘೋಷಿಸಿದ ಸಿಂಗಾಪುರಕೊರೊನಾ ಸೋಂಕು ವ್ಯಾಪಕ: ಲಾಕ್ ಡೌನ್ ಘೋಷಿಸಿದ ಸಿಂಗಾಪುರ

ಕಳೆದ 1965ರಲ್ಲಿ ಸ್ವಾತಂತ್ರ್ಯ ಪಡೆದುಕೊಂಡಾಗಿನಿಂದಲೂ ಪೀಪಲ್ಸ್ ಆ್ಯಕ್ಷನ್ ಪಾರ್ಟಿಯೇ ಆಡಳಿತ ಪಕ್ಷವಾಗಿದೆ. ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆಯೂ ಸಿಂಗಾಪುರದಲ್ಲಿ 2.6 ಮಿಲಿಯನ್ ಮತದಾರರು ಹಕ್ಕು ಚಲಾಯಿಸಿದ್ದು, ಶೇ.61.24ರಷ್ಟು ಮತದಾನವಾಗಿದೆ. ಕಳೆದ 2015ರಲ್ಲಿ ಶೇ.69.90ರಷ್ಟು ಮತದಾನ ನಡೆದಿತ್ತು.

Singapore PM Lee Hsien Loong Returned To Power With Clear Majority

ಪ್ರಧಾನಮಂತ್ರಿ ಲೀ ಸೀನ್ ಲೂಂಗ್ ಹೇಳಿದ್ದೇನು?:

ಸಿಂಗಾಪುರದಲ್ಲಿ ನಡೆದ ಚುನಾವಣೆಯಲ್ಲಿ ನಮ್ಮ ಪಕ್ಷವು ಸಂಪೂರ್ಣ ಬಹುಮತದೊಂದಿಗೆ ಗೆಲುವು ಸಾಧಿಸಿರಬಹುದು. ಆದರೆ ತಮ್ಮ ಪಕ್ಷದ ಪರವಾಗಿ ನಿರೀಕ್ಷಿಸಿದಷ್ಟು ಮತಗಳು ಬಂದಿಲ್ಲ ಎಂದು ಪ್ರಧಾನಿ ಲೀ ಸೀನ್ ಲೂಂಗ್ ತಿಳಿಸಿದ್ದಾರೆ.

ವರ್ಕರ್ಸ್ ಪಕ್ಷವು 10 ಸ್ಥಾನಗಳನ್ನು ಪಡೆದುಕೊಂಡಿದ್ದು ಸಂಸತ್ ವಿರೋಧ ಪಕ್ಷದ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಸೆಂಗ್ ‌ಕಾಂಗ್‌ನ ಗುಂಪು ಪ್ರಾತಿನಿಧ್ಯ ಕ್ಷೇತ್ರದಲ್ಲಿ ಹಾಗೂ ಪ್ರಧಾನ ಮಂತ್ರಿ ಕಚೇರಿಯಲ್ಲಿ ಮಾಜಿ ಸಚಿವ ಎನ್‌ಜಿ ಚೀ ಮೆಂಗ್ ನೇತೃತ್ವದ ತಂಡವನ್ನು ವರ್ಕರ್ಸ್ ಪಾರ್ಟಿ ಸೋಲಿಸಿತು. ಅವರು ವಿದ್ಯುತ್ ರಾಷ್ಟ್ರೀಯ ವಾಣಿಜ್ಯ ಒಕ್ಕೂಟದ ಕಾಂಗ್ರೆಸ್ (ಎನ್‌ಟಿಯುಸಿ) ಯ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ.

ಭಾವನಾತ್ಮಕ-ಉತ್ತಮ ಚುನಾವಣೆಯಾಗಿಲ್ಲ ಎಂದು ಸಿಂಗಾಪುರದಲ್ಲಿ ಮೂರನೇ ಬಾರಿ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿರುವ ಲೀ ಸೀನ್ ಲೂಂಗ್ ಹೇಳಿದ್ದಾರೆ. ಭೀಕರ ಆರ್ಥಿಕ ಹಿಂಜರಿತ ಎದುರಿಸುತ್ತಿರುವ ಸಂದರ್ಭದಲ್ಲಿ ದೇಶವು ಶೇಕಡಾ 7 ರಿಂದ 4ಕ್ಕೆ ಕುಗ್ಗುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

English summary
Singapore PM Lee Hsien Loong Returned To Power With Clear Majority. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X