ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎನ್ ಬಿ ಹಗರಣ: ಸ್ವಿಸ್ ಬ್ಯಾಂಕ್ ನಂತರ ಸಿಂಗಪುರ ಬ್ಯಾಂಕ್ ಖಾತೆ ಜಪ್ತಿ

|
Google Oneindia Kannada News

ಸಿಂಗಪುರ, ಜುಲೈ 03: ಪಂಜಾಬ್ ನ್ಯಾಷನಲ್ ಬ್ಯಾಂಕಿನ ಬಹುಕೋಟಿ ಹಗರಣದ ಪ್ರಮುಖ ಆರೋಪಿ, ದೇಶಭ್ರಷ್ಟ ಉದ್ಯಮಿ ನೀರವ್ ಮೋದಿ ಅವರಿಗೆ ಸಂಬಂಧಿಸಿದ ಆಸ್ತಿ, ವಸ್ತುಗಳನ್ನು ಜಪ್ತಿ, ಹರಾಜು ಹಾಕಿದ ಬಳಿಕ ತನಿಖಾ ಸಂಸ್ಥೆ ಜಾರಿ ನಿರ್ದೇಶನಲಯವು ಜಪ್ತಿ ಕಾರ್ಯ ಮುಂದುವರೆಸಿದೆ.

ಈ ನಡುವೆ ಸ್ವಿಸ್ ಬ್ಯಾಂಕಿನ ನಾಲ್ಕು ಖಾತೆಗಳು ಜಪ್ತಿಯಾಗಿತ್ತು. ಈಗ ಮೋದಿ ಅವರ ಸೋದರಿಗೆ ಸೇರಿದ ಸಿಂಗಪುರದ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಯಾರೀತ ಬಹುಕೋಟಿ ವಂಚಕ ನೀರವ್ ಮೋದಿ?ಯಾರೀತ ಬಹುಕೋಟಿ ವಂಚಕ ನೀರವ್ ಮೋದಿ?

ಸಿಂಗಪುರದ ಹೈಕೋರ್ಟ್ ಮಂಗಳವಾರದಂದು ನೀರವ್ ಮೋದಿ ಅವರ ಸೋದರಿ ಪೂರ್ವಿ ಮೋದಿ ಮೆಹ್ತಾ ಅವರ ಬ್ಯಾಂಕ್ ಖಾತೆ ಜಪ್ತಿಗೆ ಆದೇಶ ನೀಡಿದೆ. ಸುಮಾರು 14,356 ಕೋಟಿ ರು ಹಗರಣದಲ್ಲಿ ಪೂರ್ವಿ ಅವರು ಕೂಡಾ ಸಹ ಆರೋಪಿಯಾಗಿದ್ದಾರೆ.

ದುಬೈ ಹಾಗೂ ಹಾಂಗ್ ಕಾಂಗ್ ಮೂಲದ ಕಂಪನಿಗೆ ಮೆಹ್ತಾ ಅವರು ನಿರ್ದೇಶಕಿಯಾಗಿದ್ದರು. ನೀರವ್ ಮೋದಿ ಅವರ ಗೀತಾಂಜಲಿ ಸಂಸ್ಥೆಯ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದರು. ವಿದೇಶಿ ವಿನಿಯಮ ಕಾಯ್ದೆ ಉಲ್ಲಂಘಿಸಿರುವ ಪೂರ್ವಿ ಮೆಹ್ತಾ ಅವರು ಕೂಡಾ ಈ ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಮಹತ್ವದ ಪಾತ್ರ ಹೊಂದಿದ್ದಾರೆ ಎಂದು ಜಾರಿ ನಿರ್ದೇಶನಾಲಯ ತನ್ನ ದೋಷಾರೋಪಣ ಪಟ್ಟಿಯಲ್ಲಿ ಹೇಳಿದೆ.

ನೀರವ್ ಮೋದಿ, ಮೆಹುಲ್ ಚೊಕ್ಸಿ ಅವರು ಭಾರತದಿಂದ ಪರಾರಿಯಾಗಿದ್ದು, ವಿವಿಧ ತನಿಖಾ ಸಂಸ್ಥೆಗಳು ಇವರಿಬ್ಬರನ್ನು ಭಾರತಕ್ಕೆ ಕರೆ ತಂದು ವಿಚಾರಣೆ ನಡೆಸಲು ಯತ್ನಿಸುತ್ತಿವೆ.

ಸ್ವಿಸ್ ಬ್ಯಾಂಕ್ ಖಾತೆ ಜಪ್ತಿ ಮೊತ್ತ

ಸ್ವಿಸ್ ಬ್ಯಾಂಕ್ ಖಾತೆ ಜಪ್ತಿ ಮೊತ್ತ

ನೀರವ್ ಮೋದಿಯ 4 ಸ್ವಿಸ್ ಬ್ಯಾಂಕ್ ಖಾತೆಯಿಂದ ಸಿಕ್ಕ ಮೊತ್ತ ಬಹಿರಂಗವಾಗಿದ್ದು, ಸುಮಾರು 283.16 ಕೋಟಿ ರು ಗಳನ್ನು ತನಿಖಾ ಸಂಸ್ಥೆಗಳು ತಮ್ಮ ವಶಕ್ಕೆ ತೆಗೆದುಕೊಂಡಿವೆ. 3,74,11,596 ಡಾಲರ್ ಠೇವಣಿ ಹೊಂದಿದ್ದರೆ, ಸೋದರಿ ಪೂರ್ವಿ ಮೋದಿ ಖಾತೆಯಲ್ಲಿ 27,38,136 ಬ್ರಿಟಿಷ್ ಪೌಂಡ್ ಹೊಂದಿದ್ದರು. ಸುಮಾರು 13,700 ಕೋಟಿ ರು ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ಪೂರ್ವಿ ಮೋದಿ ಕೂಡಾ ಸಹ ಆರೋಪಿಯಾಗಿದ್ದಾರೆ.

ಪೂರ್ವಿ ಮೋದಿ ಮೆಹ್ತಾ

ಪೂರ್ವಿ ಮೋದಿ ಮೆಹ್ತಾ

ಸಿಂಗಪುರ ಹೈಕೋರ್ಟ್ ಆದೇಶದಂತೆ ಪೂರ್ವಿ ಮೋದಿ ಮೆಹ್ತಾ ಅವರ ಖಾತೆಯನ್ನು ಜಪ್ತಿ ಮಾಡಲಾಗಿದ್ದು, 6.122 ಡಾಲರ್( 44.41 ಕೋಟಿ ರು) ಮೊತ್ತವನ್ನು ವಶಕ್ಕೆ ಪಡೆಯಲಾಗಿದೆ. ಪೂರ್ವಿ ಮೆಹ್ತಾ ಹಾಗೂ ಅವರ ಪತಿ ಮೈಯಾಂಕ್ ಮೆಹ್ತಾ ಒಡೆತನದ ಬ್ರಿಟಿಷ್ ವರ್ಜಿನ್ ಐಲ್ಯಾಂಡ್ ನ ಪೆವಿಲಿಯನ್ ಪಾಯಿಂಟ್ ಕಾರ್ಪೊರೇಷನ್ ಕಂಪನಿ ಹೆಸರಿನಲ್ಲಿ ಖಾತೆ ನಿರ್ವಹಣೆಯಾಗುತ್ತಿತ್ತು.

ಮಾರ್ಚ್ ತಿಂಗಳಿನಲ್ಲಿ ಜಾರಿ ನಿರ್ದೇಶನಾಲಯ ಹಾಕಿರುವ ಹೊಸ ಚಾರ್ಜ್ ಶೀಟ್ ನಲ್ಲಿ ಪಿಎಂಎಲ್ ಎ ಕಾಯ್ದೆ ಉಲ್ಲಂಘನೆ, 1,201.18ಕೋಟಿ ರು ಅಕ್ರಮ ವರ್ಗಾವಣೆ ಆರೋಪವನ್ನು ಪೂರ್ವಿ ಮೇಲೆ ಹಾಕಲಾಗಿದೆ.

ಮನಿಲಾಂಡ್ರಿಂಗ್ ಅವ್ಯವಹಾರ

ಮನಿಲಾಂಡ್ರಿಂಗ್ ಅವ್ಯವಹಾರ

ನೀರವ್ ಮೋದಿ ಅವರು 6,400 ಕೋಟಿ ರು ಮನಿಲಾಂಡ್ರಿಂಗ್ ಅವ್ಯವಹಾರದಲ್ಲಿ ತೊಡಗಿದ್ದರು ಎಂದು ಜಾರಿ ನಿರ್ದೇಶನಾಲಯವು ತನ್ನ ದೋಷಾರೋಪಣ ಪಟ್ಟಿಯಲ್ಲಿ ಹೇಳಿದೆ. ಪಿಎಂಎಲ್ಎ ಕಾಯ್ದೆ ಉಲ್ಲಂಘನೆಯಡಿಯಲ್ಲಿ ಥೈಲ್ಯಾಂಡ್ ನಲ್ಲಿ 13 ಕೋಟಿ ರು ಮೌಲ್ಯದ ಆಸ್ತಿ ವಶ ಪಡಿಸಿಕೊಳ್ಳಲಾಗಿತ್ತು. ಗೀತಾಂಜಲಿ ಸಮೂಹ ಸಂಸ್ಥೆಗೆ ಸೇರಿದ ಈ ಆಸ್ತಿಗೆ ನೀರವ್ ಅವರ ಅಂಕಲ್ ಮೆಹುಲ್ ಚೋಕ್ಸಿ ಅವರು ಸಹ ಮಾಲೀಕರಾಗಿದ್ದಾರೆ

ಲಂಡನ್ನಿನಲ್ಲಿ ಜಾಮೀನಿಗಾಗಿ ನೀರವ್ ಹೋರಾಟ

ಲಂಡನ್ನಿನಲ್ಲಿ ಜಾಮೀನಿಗಾಗಿ ನೀರವ್ ಹೋರಾಟ

ಲಂಡನ್‌ನಲ್ಲಿ ನೀರವ್ ಮೋದಿಯನ್ನು ಬಂಧಿಸಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ನೀರವ್ ಮೋದಿ ಅವರು ಜಾಮೀನಿಗಾಗಿ ಐದು ಬಾರಿ ಮನವಿ ಸಲ್ಲಿಸಿದ್ದರೂ ಜಾಮೀನು ಸಿಕ್ಕಿಲ್ಲ. ನೀರವ್ ಮೋದಿಗೆ ಇಂಗ್ಲೆಂಡಿನ ವೆಸ್ಟ್‌ಮಿನಿಸ್ಟರ್ ಕೋರ್ಟ್ ಜಾಮೀನು ನಿರಾಕರಿಸುತ್ತಾ ಬಂದಿದೆ. ಮೋದಿ ಅವರ ಮಕ್ಕಳು ಲಂಡನ್ನಿನಲ್ಲೇ ವ್ಯಾಸಂಗ ಮಾಡುತ್ತಿದ್ದು, ಲಂಡನ್ ಬಿಡುವುದಿಲ್ಲ, ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ಮೋದಿ ಪರ ವಕೀಲರು ವಾದಿಸಿದ್ದರು.

English summary
The Singapore high court on Tuesday froze the bank accounts of Nirav Modi’s sister Purvi Modi Mehta, spelling greater trouble for the prime accused in the ₹14,356 crore Punjab National Bank (PNB) scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X