ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ರೋಗಿಗಳ ಆಸ್ಪತ್ರೆ ಬಿಲ್ ಕಟ್ಟಿದ ಸಿಂಗಾಪುರ ಸರ್ಕಾರ

|
Google Oneindia Kannada News

ಸಿಂಗಾಪುರ, ಫೆಬ್ರವರಿ 13: ಸಿಂಗಾಪುರದಲ್ಲಿ ಕೊರೊನಾ ರೋಗಿಗಳ ಸಂಖ್ಯೆ 50ಕ್ಕೇರಿದೆ.ಪ್ರತಿ ರೋಗಿಯ ವೆಚ್ಚವನ್ನು ತಾವೇ ಭರಿಸುವುದಾಗಿ ಸಿಂಗಾಪುರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಕೇವಲ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರವಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡರೂ ಕೂಡ ವೆಚ್ಚವನ್ನು ತಾವು ಭರಿಸುವುದಾಗಿ ತಿಳಿಸಿವೆ.

ಜನವರಿ 23ರಂದು ಕೊರೊನಾ ರೋಗದ ಮೊದಲ ಪ್ರಕರಣ ಸಿಂಗಾಪುರದಲ್ಲಿ ಪತ್ತೆಯಾಗಿತ್ತು. ಇದೀಗ ಅದು 50 ಮಂದಿಗೆ ಹರಡಿದೆ. ಚೀನಾದ ಹ್ಯೂಬೆ ಕೊರೊನಾದ ಕೇಂದ್ರಬಿಂದುವಾಗಿದೆ. ಅಲ್ಲಿ 14,840 ಪ್ರಕರಗಳು ದೃಢಪಟ್ಟಿವೆ.

ಇಬ್ಬರು ಭಾರತೀಯರಿಗೆ ಕೊರೊನಾ ವೈರಸ್: ಇದು ಹಡಗಿನಲ್ಲಿರುವವರ ವಿಷ್ಯಇಬ್ಬರು ಭಾರತೀಯರಿಗೆ ಕೊರೊನಾ ವೈರಸ್: ಇದು ಹಡಗಿನಲ್ಲಿರುವವರ ವಿಷ್ಯ

ಯುಕೆ, ಲಂಡನ್‌ನಲ್ಲಿ ಮೊದಲ ಪ್ರಕರಣ ದೃಢಪಟ್ಟಿದೆ. ಇಬ್ಬರು ಭಾರತೀಯರಲ್ಲಿ ಮಾರಕ ರೋಗ ಕೊರೊನಾ ವೈರಸ್ (ಕೊವಿಡ್-19) ಪತ್ತೆಯಾಗಿರುವ ಬಗ್ಗೆ ಜಪಾನ್ ನ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಎಂದು ವರದಿಯಾಗಿದೆ.

Singapore Govt To Pay Bills Of Coronavirus Patients Admitted In Public Hospitals

ಕಳೆದ ತಿಂಗಳು ಹಾಂಗ್ ಕಾಂಗ್ ನಿಂದ ಹೊರಟ ಡೈಮೆಂಡ್ ಪ್ರಿನ್ಸಸ್ ಎಂಬ ಹಡಗಿನಲ್ಲಿ 200 ಭಾರತೀಯರು ಸೇರಿದಂತೆ 3,700 ಮಂದಿ ಪ್ರಯಾಣಿಕರಿದ್ದು, ಜಪಾನ್ ನ ಯೊಕೊಹಮಾ ಬಂದರಿನಲ್ಲಿ ಹಡಗು ಸಿಲುಕಿಕೊಂಡಿತ್ತು. ಸಿಂಗಾಪುರ ಹೊರತುಪಡಿಸಿ ಇನ್ಯಾವುದೇ ದೇಶದಲ್ಲೂ ಕೊರೊನಾ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರ ನೀಡುವುದಾಗಿ ಘೋಷಣೆ ಮಾಡಿಲ್ಲ.

English summary
Singapore Govt To Pay Bills Of Coronavirus Patients Admitted In Public Hospitals, Hospital Bill Incurred by patients infected by the deadly virus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X