ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನನಷ್ಟ ಮೊಕದ್ದಮೆ; ಸಿಂಗಪುರ ಪ್ರಧಾನಿಗೆ 100,000 ಡಾಲರ್ ಕೊಡಲು ಕೋರ್ಟ್ ಸೂಚನೆ

|
Google Oneindia Kannada News

ಸಿಂಗಪುರ, ಮಾರ್ಚ್ 24: ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಸಿಂಗಪುರ ಪ್ರಧಾನಿ ಲೀ ಸೀನ್ ಲೂಂಗ್ ಅವರಿಗೆ 100,000 ಡಾಲರ್ ಹಣ ಪರಿಹಾರ ನೀಡಬೇಕೆಂದು ಬ್ಲಾಗರ್‌ಗೆ ಸಿಂಗಪುರ ಹೈಕೋರ್ಟ್ ಬುಧವಾರ ಆದೇಶಿಸಿದೆ.

ಮಲೇಷ್ಯಾದ ರಾಜ್ಯ ನಿಧಿಯಲ್ಲಿ ನಡೆದ ಹಣಕಾಸಿನ ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿಯನ್ನು ಉಲ್ಲೇಖಿಸಿ ಆರ್ಥಿಕ ಸಲಹೆಗಾರ ಲಿಯಾಂಗ್ ಶೆ ಹಿಯಾನ್ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಲಿಯಾಂಗ್ ವಿರುದ್ಧ ಪ್ರಧಾನಿ ಮೊಕದ್ದಮೆ ಹೂಡಿದ್ದರು.

ಅವಹೇಳನಾಕಾರಿ ವಿಡಿಯೋ: ನಿವೃತ್ತ ನ್ಯಾಯಮೂರ್ತಿ ಕರ್ಣನ್‌ಗೆ ಷರತ್ತುಬದ್ಧ ಜಾಮೀನುಅವಹೇಳನಾಕಾರಿ ವಿಡಿಯೋ: ನಿವೃತ್ತ ನ್ಯಾಯಮೂರ್ತಿ ಕರ್ಣನ್‌ಗೆ ಷರತ್ತುಬದ್ಧ ಜಾಮೀನು

ಈ ಪೋಸ್ಟ್ ಹಂಚಿಕೊಂಡ ಮೂರು ದಿನದ ನಂತರ ಲಿಯಾಂಗ್ ನವೆಂಬರ್ 2018ರಲ್ಲಿ ಫೇಸ್‌ಬುಕ್ ಪೋಸ್ಟ್ ಅಳಿಸಿ ಹಾಕಿದ್ದರು. ಈ ಬಗ್ಗೆ ವಿಚಾರಣೆ ಕೈಗೊಂಡ ನ್ಯಾಯಾಧೀಶ ಎಡಿತ್ ಅಬ್ದುಲ್ಲಾ ಅವರು, "ಲಿಯಾಂಗ್, ಪ್ರಧಾನಿ ವಿರುದ್ಧ ಮಾನಹಾನಿಕರ ಪದಗಳನ್ನು ಬಳಸಿಲ್ಲ ಎಂದು ಹೇಳಿಕೊಳ್ಳುವ ಅಂಶಗಳು ಕಾಣುತ್ತಿಲ್ಲ" ಎಂದು ಹೇಳಿದ್ದು, ಲಿಯಾಂಗ್ ಹಂಚಿಕೊಂಡ ಸುದ್ದಿ ಪ್ರಧಾನಿ ಅವರು ಗಂಭೀರ ಹಾಗೂ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬುದನ್ನು ಸೂಚಿಸುವಂತಿದೆ ಎಂದು ಹೇಳಿ 100,000 ಡಾಲರ್ ಹಣ ಪರಿಹಾರ ನೀಡಬೇಕೆಂದು ಸೂಚಿಸಿದ್ದಾರೆ.

Singapore Blogger To pay 100000 Dollar For Defaming PM

ಲಿಯಾಂಗ್ ಅವರ ಪೋಸ್ಟ್‌ಗೆ ಒಟ್ಟು 45 ಜನರು ಪ್ರತಿಕ್ರಿಯಿಸಿದ್ದರು. ಮಲೇಷಿಯನ್ ಆನ್‌ಲೈನ್ ಸುದ್ದಿ ಮಾಧ್ಯಮದಿಂದ ಈ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದು, ಸುದ್ದಿಯಲ್ಲಿ ಏನನ್ನೂ ಬದಲಾಯಿಸದೇ ಹಂಚಿಕೊಂಡಿರುವುದಾಗಿ ಲಿಯಾಂಗ್ ಉಲ್ಲೇಖಿಸಿದ್ದರು.

English summary
Singaporean blogger was ordered to pay $100,000 for defaming the prime minister by sharing an article on Facebook linking the leader to a corruption scandal
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X