• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ಯಾಲಿಫೋರ್ನಿಯಾದಲ್ಲಿ ಸಿಖ್ ಯುವಕನ ಬರ್ಬರ ಹತ್ಯೆ

|
Google Oneindia Kannada News

ಕ್ಯಾಲಿಫೋರ್ನಿಯಾ, ಮೇ 8: ಸುಮಾರು 32 ವರ್ಷದ ಜಗಜೀತ್ ಸಿಂಗ್ ಎಂಬ ಸಿಖ್ ಯುವಕನೊಬ್ಬನನ್ನು ಕ್ಯಾಲಿಫೋರ್ನಿಯಾದಲ್ಲಿ ಇರಿದು ಕೊಲ್ಲಲಾಗಿದೆ ಎಂದು ಪಿಟಿಐ ಹೇಳಿದೆ.

ಕ್ಯಾಲಿಫೋರ್ನಿಯಾದ ಮಳಿಗೆಯೊಂದರಲ್ಲಿ ಸಿಗರೇಟು ಖರೀದಿಗೆ ಸಂಬಂಧಿಸಿದಂತೆ ಉಂಟಾದ ಅಲ್ಪ ಗಲಾಟೆಯಿಂದಾಗಿ ಈ ಯುವಕನನ್ನು ಯುವಕನೊಬ್ಬ ಕೊಂದಿದ್ದಾನೆ.[ಅಮೆರಿಕದಲ್ಲಿ ಮಂಗಳೂರು ಮೂಲದ ದಂಪತಿ ಹತ್ಯೆ]

ಈ ವಾರದಲ್ಲಿ ಅಮೆರಿಕದಲ್ಲಿ ನಡೆದಿರುವ ಮೂರ ಹತ್ಯೆ ಇದಾಗಿದೆ. ಶನಿವಾರವಷ್ಟೇ, ಸಾನ್ ಜೋಸ್ ಎಂಬಲ್ಲಿ ಮಂಗಳೂರು ಮೂಲದ ದಂಪತಿಯನ್ನು ದುಷ್ಕರ್ಮಿಯೊಬ್ಬ ಶೂಟೌಟ್ ಮಾಡಿ ಹತ್ಯೆಗೈದಿದ್ದ.

ಪಂಜಾಬ್ ನ ಕಪುರ್ತಲಾ ನಗರ ಮೂಲದ ಜಗಜೀತ್ ಸಿಂಗ್, ಕೆಲ ವರ್ಷಗಳ ಹಿಂದೆ ಅಮೆರಿಕಕ್ಕೆ ಹೋಗಿದ್ದರು. ಕ್ಯಾಲಿಫೋರ್ನಿಯಾದ ದಿನಸಿ ಮಳಿಗೆಯೊಂದರಲ್ಲಿ ಅವರು ಕೆಲಸ ಮಾಡುತ್ತಿದ್ದರು.[ಅಮೆರಿಕಾದಲ್ಲಿ ಭಾರತೀಯ ಮೂಲದ ವೈದ್ಯ ಅನುಮಾನಾಸ್ಪದ ಸಾವು]

ಸೋಮವಾರ, ಯುವಕನೊಬ್ಬ ಅಂಗಡಿಗೆ ಬಂದು ನಿರ್ದಿಷ್ಟ ಬ್ರಾಂಡ್ ನ ಸಿಗರೇಟು ಕೇಳಿದ. ಹಾಗಾಗಿ, ನಿಯಮಗಳ ಪ್ರಕಾರ, ಜಗಜೀತ್ ಸಿಂಗ್ ಯುವಕನ ಐಡಿ ಕಾರ್ಡ್ ನೀಡುವಂತೆ ಕೇಳಿದ್ದಾರೆ. ಆತ ಐಡಿ ಕಾರ್ಡ್ ತೋರಿಸದಿದ್ದ ಹಿನ್ನೆಲೆಯಲ್ಲಿ ಆತನಿಗೆ ಸಿಗರೇಟ್ ಕೊಡಲು ಜಗಜೀತ್ ನಿರಾಕರಿಸಿದ್ದಾರೆ.

ಇದರಿಂದ ಕುಪಿತಗೊಂಡ ಆತ ಬಾಯಿಬಂದಂತೆ ಬಯ್ದಾಡುತ್ತಾ, ಜಗಜೀತ್ ಅವರನ್ನು ಜನಾಂಗೀಯ ನಿಂದನೆಗೆ ಗುರಿಪಡಿಸಿ ಬುಸುಗುಡುತ್ತಾ 'ಇದರ ಘೋರ ಪರಿಣಾಮ ಅನುಭವಿಸಬೇಕಾಗುತ್ತದೆ' ಎಂದು ಎಚ್ಚರಿಕೆ ನೀಡಿ ಹೋಗಿದ್ದಾನೆ.

ಹಾಗೆ, ಅಂಗಡಿಯಿಂದ ಹೊರಹೋಗದ ಅರ್ಧಗಂಟೆ ನಂತರ ಪುನಃ ಅಂಗಡಿಯೊಳಕ್ಕೆ ನುಗಿದ್ದ ಆ ಯುವಕ ಕ್ಯಾಶ್ ಕೌಂಟರ್ ನಲ್ಲಿದ್ದ ಜಗ್ ಜೀತ್ ಸಿಂಗ್ ಅವರನ್ನು ತನ್ನೊಂದಿಗೆ ತಂದಿದ್ದ ಚೂರಿಯಿಂದ ನೋಡನೋಡುತ್ತಲೇ ಇರಿದು ಹತ್ಯೆಗೈದ ಎಂದು ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಮತ್ತೊಬ್ಬ ಭಾರತೀಯ ಸುಖ್ವಿಂದರ್ ಸಿಂಗ್ ತಿಳಿಸಿದ್ದಾರೆ.

ಸಮಗ್ರ ಘಟನೆಯು ಅಂಗಡಿಯಲ್ಲಿನ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಇದರ ಆಧಾರದ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

English summary
A 32 year old stabbed to death in California on May 8th, 2017 over a quarrel over cigaratte purchase. This is third Indian-origin victim to be killed in the US State.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X