ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಫ್ರಿಕಾದಲ್ಲಿ ಭಾರೀ ಭೂ ಕುಸಿತಕ್ಕೆ 312ಕ್ಕೂ ಹೆಚ್ಚು ಬಲಿ

By Sachhidananda Acharya
|
Google Oneindia Kannada News

ಸಿಯೆರಾ ಲಿಯೋನ್, ಆಗಸ್ಟ್ 14: ಆಫ್ರಿಕಾ ಖಂಡದ ಪಶ್ಚಿಮ ಭಾಗದಲ್ಲಿರುವ ಸಿಯೆರಾ ಲಿಯೋನ್ ಎಂಬ ದೇಶದಲ್ಲಿ ನಡೆದ ಭೀಕರ ಭೂ ಕುಸಿತ ಸಂಭವಿಸಿ ಕೆಸರು ನೀರು ಜನವಸತಿ ಪ್ರದೇಶಗಳಿಗೆ ನುಗ್ಗಿದೆ. ಪರಿಣಾಮ 312 ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ರೆಡ್ ಕ್ರಾಸ್ ಸಂಸ್ಥೆಯ ವಕ್ತಾರರು ಹೇಳಿರುವುದಾಗಿ ಎಎಫ್'ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸಿಯೆರಾ ಲಿಯೋನ್ ನ ರಾಜಧಾನಿ ಫ್ರೀಟೌನ್ ನಲ್ಲಿ ಈ ದುರಂತ ನಡೆದಿದೆ. ಇಲ್ಲಿನ ರಿಜೆಂಟ್ ಪ್ರದೇಶದ ಪರ್ವತವೊಂದರ ಭಾಗ ಭಾರೀ ಮಳೆಯಿಂದ ಕುಸಿದು ಹಲವು ಮನೆಗಳು ಮಣ್ಣಿನಡಿ ಸಿಲುಕಿವೆ. ಅಲ್ಲದೆ ಭೀಕರ ಪ್ರವಾಹಕ್ಕೆ ಕೆಸರು ನೀರು ಮನೆಗಳಿಗೆ ನುಗ್ಗಿದ್ದು ಹಲವಾರು ಜನರು ಸಾವಿಗೀಡಾಗಿದ್ದಾರೆ.

ಮಣ್ಣು ಮಿಶ್ರಿತ ನೀರು ಮನೆಗಳಿಗೆ ನುಗ್ಗುವ ವೇಳೆ ಜನರು ನಿದ್ದೆಯಲ್ಲಿದ್ದರು ಎನ್ನಲಾಗಿದೆ. ಈಗಾಗಲೇ 312ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ.

English summary
At least 312 people have been killed in a mudslide near Sierra Leone's capital, Freetown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X