ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿನಕ್ಕೆ 200 ಬಾರಿ ಕೂಗುವ ಕೋಳಿ ಮತ್ತು ಮಾಲೀಕನ ವಿರುದ್ಧ ಕೇಸ್!

|
Google Oneindia Kannada News

ಬರ್ಲಿನ್, ಆಗಸ್ಟ್ 11: ದಿನ ಬೆಳಗಾದರೆ ಕೋಳಿ ಕೂಗುವುದು ಕೇಳುವುದು ಸರ್ವೇ ಸಾಮಾನ್ಯ. ಆದರೆ ಜರ್ಮನಿಯಲ್ಲಿ ಮನೆ ಮಾಲೀಕನಿಗೆ ತನ್ನ ಕೋಳಿ ಕೂಗಾಟವೇ ಕೋರ್ಟ್ ಮೆಟ್ಟಿಲೇರುವಂತೆ ಮಾಡಿ ಬಿಟ್ಟಿದೆ.

ನಿಮ್ಮ ಮನೆಯ ಕೋಳಿ ನಮ್ಮ ನಿದ್ದೆಯನ್ನು ಹಾಳು ಮಾಡುತ್ತಿದೆ. ಅದೇ ಕೋಳಿ ಕೂಗಾಟದಿಂದ ನಮಗೆ ನಿತ್ಯ ಹಿಂಸೆ ಆಗುತ್ತಿದೆ. ನಮ್ಮ ಆರೋಗ್ಯ ಹಳ್ಳ ಹಿಡಿಯುತ್ತಿದೆ. ಕೋಳಿ ಕೂಗಾಟದಿಂದ ನಮಗೆ ಮುಕ್ತಿ ಕೊಡಿ ಎಂದು ದಂಪತಿಯೊಬ್ಬರು ಕೋರ್ಟ್ ಮೆಟ್ಟಿಲೇರಿದ್ದಾರೆ.

ಮೊಟ್ಟೆ ಸಸ್ಯಾಹಾರಿಯೇ? ಅಥವಾ ಮಾಂಸಾಹಾರಿಯೇ? ವೈಜ್ಞಾನಿಕ ಉತ್ತರ ಇಲ್ಲಿದೆಮೊಟ್ಟೆ ಸಸ್ಯಾಹಾರಿಯೇ? ಅಥವಾ ಮಾಂಸಾಹಾರಿಯೇ? ವೈಜ್ಞಾನಿಕ ಉತ್ತರ ಇಲ್ಲಿದೆ

ಪಶ್ಚಿಮ ಜರ್ಮನಿಯ ಬ್ಯಾಡ್ ಸಾಲ್ಜುಫ್ಲೆನ್‌ನಲ್ಲಿರುವ ತಮ್ಮ ಪಕ್ಕದ ಮನೆಯ ಕೋಳಿಯ ಕೂಗಾಟದಿಂದ ನಮ್ಮ ಆರೋಗ್ಯ ಹದಗೆಡುತ್ತಿದೆ ಎಂದು 76 ವರ್ಷದ ಫ್ರೆಡ್ರಿಕ್-ವಿಲ್ಹೆಲ್ಮ್ ಮತ್ತು ಅವರ ಪತ್ನಿ ಜುಟ್ಟಾ ದೂರು ಸಲ್ಲಿಸಿದ್ದಾರೆ. ಕೋಳಿ ಮತ್ತು ಕೋರ್ಟ್ ಕೇಸ್ ಕುರಿತು ಕುತೂಹಲಕಾರಿ ಕಥೆಯಿತು.

ಒಂದು ದಿನಕ್ಕೆ 200 ಬಾರಿ ಕೂಗುವ ಕೋಳಿ

ಒಂದು ದಿನಕ್ಕೆ 200 ಬಾರಿ ಕೂಗುವ ಕೋಳಿ

"ನಾವು ಪ್ರತಿನಿತ್ಯ ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ತೆರೆಯುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಫ್ರೆಡ್ರಿಕ್-ವಿಲ್ಹೆಲ್ಮ್ ದಂಪತಿ ಜರ್ಮನ್ ದೂರದರ್ಶನಕ್ಕೆ ತಿಳಿಸಿದ್ದಾರೆ. ರಾತ್ರಿ ಬಾಗಿಲು ಮುಚ್ಚಿದರೆ ಬೆಳಗ್ಗೆ 8 ಗಂಟೆವರೆಗೂ ಮನೆಯ ಬಾಗಿಲನ್ನು ತೆರೆಯುವುದಿಲ್ಲ. ಅದಾಗ್ಯೂ, ಕೋಳಿಯ ಕೂಗಾಟವನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಅದು ದಿನಕ್ಕೆ 100 ರಿಂದ 200 ಬಾರಿ ಬಿಟ್ಟೂ ಬಿಡದೇ ಕೂಗುತ್ತದೆ. ಅದು ತೀರಾ ಅಸಹನೀಯವಾಗಿದೆ ಎಂದು ದಂಪತಿ ದೂರಿದ್ದಾರೆ.

2018ರಲ್ಲಿ 5 ಕೋಳಿ ಖರೀದಿಸಿದ್ದ ಮನೆ ಮಾಲೀಕ ಮೈಕಲ್

2018ರಲ್ಲಿ 5 ಕೋಳಿ ಖರೀದಿಸಿದ್ದ ಮನೆ ಮಾಲೀಕ ಮೈಕಲ್

ಕಳೆದ 2018ರಲ್ಲಿ ಮೊಟ್ಟೆಗಾಗಿ ಮನೆ ಮಾಲೀಕ ಮೈಕೆಲ್ ಐದು ಕೋಳಿ ಮರಿಗಳನ್ನು ಖರೀದಿಸಿದ್ದರು. ಈ ಐದು ಮರಿಗಳಲ್ಲಿ ಒಂದು ಹುಂಜವೂ ಸೇರಿತ್ತು. ಹುಂಜದ ನಿತ್ಯ ಕೂಗಾಟ ಅಕ್ಕಪಕ್ಕದ ಮನೆಯ ಮಂದಿಯನ್ನು ಕೆರಳಿಸಿತು. ಫ್ರೆಡ್ರಿಕ್-ವಿಲ್ಹೆಲ್ಮ್ ದಂಪತಿ ಸಹ ಅದೇ ಪಟ್ಟಿಗೆ ಸೇರುತ್ತಾರೆ. ದಿನನಿತ್ಯದ ಕಾಟವನ್ನು ಸಹಿಸಿಕೊಂಡ ನಂತರ, ಫ್ರೆಡ್ರಿಕ್-ವಿಲ್ಹೆಲ್ಮ್ ಮತ್ತು ಜುಟ್ಟಾ ತಮ್ಮ ಸಹನೆ ಕಳೆದುಕೊಂಡಿದ್ದಾರೆ. ಮೈಕೆಲ್ ವಿರುದ್ಧ ಲೆಮ್ಗೊ ಜಿಲ್ಲಾ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದಾರೆ.

ಮೈಕಲ್ ವಿರುದ್ಧ ಲೆಮ್ಗೊ ಕೋರ್ಟಿನಲ್ಲಿ ಪ್ರಕರಣ

ಮೈಕಲ್ ವಿರುದ್ಧ ಲೆಮ್ಗೊ ಕೋರ್ಟಿನಲ್ಲಿ ಪ್ರಕರಣ

ಲೆಮ್ಗೊ ಜಿಲ್ಲಾ ನ್ಯಾಯಾಲಯದಲ್ಲಿ ವಿರುದ್ಧ ದಂಪತಿ ದೂರು ಸಲ್ಲಿಸಿದ್ದು, ಮೈಕಲ್ ವಿರುದ್ಧ ಆರೋಪಿಸಿದ್ದಾರೆ. 'ನಾವು ನಿಜವಾಗಿಯೂ ಸಾಕಷ್ಟು ಪರೀಕ್ಷೆಗಳನ್ನು ಎದುರಿಸಿದ್ದೇವೆ. ನಮ್ಮ ಮಕ್ಕಳೂ ಸಹ ಪ್ರಯತ್ನಿಸಿದ್ದಾರೆ, ನಮ್ಮ ನೆರೆಹೊರೆಯವರೂ ಇದಕ್ಕೆ ಹೊರತಾಗಿಲ್ಲ ಎಂದ, "ಫ್ರೆಡ್ರಿಕ್-ವಿಲ್ಹೆಲ್ಮ್ ಹೇಳಿದ್ದಾರೆ.

ಈ ಹುಂಜಗಳು ಶಾಂತಿಯುವ ಪ್ರದೇಶಕ್ಕೆ ಹೋಲುವಂತಹದ್ದಲ್ಲ ಎಂದು ದಂಪತಿ ಪರ ವಕೀಲ ಟಾರ್ಸ್ಟೆನ್ ಗೀಸೆಕೆ ಹೇಳಿದ್ದಾರೆ. ಕೋಳಿಯ ಅಸಹನೀಯ ಕೂಗಿನಿಂದ ಒಬ್ಬ ಮನೆಯವರು ಎರಡು ವರ್ಷಗಳ ಹಿಂದೆಯೇ ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ. ಇದರ ಮಧ್ಯೆ ಕೋಳಿಯ ಮಾಲೀಕ ಮೈಕೆಲ್ ತನ್ನ ಕೋಳಿಗಳನ್ನು ಇಟ್ಟುಕೊಳ್ಳುವುದು ತೀರಾ ಅತ್ಯಗತ್ಯ ಎಂದು ವಾದಿಸಿದ್ದಾರೆ. 'ಕೋಳಿಗಳಿಗೆ ಹುಂಜ ಬೇಕು, ಇಲ್ಲದಿದ್ದರೆ ಅವು ಪರಸ್ಪರ ಕಿತ್ತಾಡಿಕೊಳ್ಳುತ್ತವೆ' ಎಂದು ಮಾಲೀಕರು ಉಲ್ಲೇಖಿಸಿದ್ದಾರೆ.

ನೆರೆಹೊರೆಯ ಮಂದಿ ಕೋಳಿ ಕೂಗಾಟದ ಬಗ್ಗೆ ಹೇಳಿದ್ದೇನು?

ನೆರೆಹೊರೆಯ ಮಂದಿ ಕೋಳಿ ಕೂಗಾಟದ ಬಗ್ಗೆ ಹೇಳಿದ್ದೇನು?

ಮೈಕಲ್ ನಿವಾಸದಿಂದ ಕೂಗಳತೆ ದೂರದಲ್ಲಿರುವ ಮತ್ತೊಬ್ಬ ನಿವಾಸಿ ಕೂಡ ಕೋಳಿ ಕೂಗಾಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಇದಕ್ಕೂ ಮೊದಲು ನಾವೂ ಸಹ ಹಲವು ಬಾರಿ ಮೈಕಲ್ ಅವರಿಗೆ ಮನವಿ ಮಾಡಿಕೊಂಡಿದ್ದೇವೆ. ಕನಿಷ್ಠ 8 ಗಂಟೆವರೆಗೆ ಕೋಳಿಯನ್ನು ಕತ್ತಲಿನಲ್ಲಿ ಇರಿಸುವಂತೆ ಕೇಳಿಕೊಂಡಿದ್ದೇವೆ. ಆದರೆ ಅವರು ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ. ಇದು ಸಮಾಜ ವಿರೋಧಿಯಾಗಿದೆ. ಇದು ಇಲ್ಲಿನ ಕೆಲವರಿಗೆ ಜೀವನವನ್ನು ಒಂದು ದುಃಸ್ವಪ್ನವನ್ನಾಗಿ ಕಾಡುತ್ತಿದೆ. ಆ ಕೋಳಿಗಳು ಪ್ರತಿನಿತ್ಯ ಬೆಳಗ್ಗೆ 4 ಗಂಟೆ ಇಲ್ಲವೇ 5 ಗಂಟೆಯಿಂದಲೇ ಕೂಗುವುದಕ್ಕೆ ಶುರು ಮಾಡುತ್ತದೆ," ಎಂದು ಸೋನ್ಯಾ ವಿಕರ್ಸ್ ಹೇಳಿದ್ದಾರೆ.

ಮನೆಯಿಂದ ಕೆಲಸ ಮಾಡುವ ಇನ್ನೊಬ್ಬ ನಿವಾಸಿ, ಕಾಕೆರೆಲ್ ತನ್ನ ಬಾಸ್‌ಗೆ ಜೂಮ್ ಕರೆಗಳನ್ನು ತೊಂದರೆಗೊಳಿಸುತ್ತಿದೆ ಎಂದು ಹೇಳಿದ್ದಾರೆ. 'ನನ್ನ ಸಹೋದ್ಯೋಗಿಗಳು ನನ್ನನ್ನು ಓಲ್ಡ್ ಮ್ಯಾಕ್‌ಡೊನಾಲ್ಡ್ ಎಂದು ಕರೆಯಲು ಪ್ರಾರಂಭಿಸಿದ್ದಾರೆ. ಏಕೆಂದರೆ ನಮ್ಮ ಬೆಳಗಿನ ಸಭೆಗಳು ಕೋಳಿಯ ಕೂಗಾಟದಿಂದ ನಿತ್ಯ ಅಡಚಣೆಯನ್ನು ಎದುರಿಸುತ್ತೇವೆ,' ಎಂದಿದ್ದಾರೆ.

English summary
Sick of rooster's repeated crowing, German couple takes legal action against owner. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X