ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಗ್ಗುತ್ತಿರುವ ಚಂದ್ರನಲ್ಲಿ ಕಂಪನ ಉಂಟಾಗುವ ಸಾಧ್ಯತೆ ಇದೆಯೆಂದ ವಿಜ್ಞಾನಿಗಳು, ನಾಸಾದಿಂದ ಸಾಕ್ಷ್ಯ

By ಅನಿಲ್ ಆಚಾರ್
|
Google Oneindia Kannada News

ಭೂಮಿಯ ಉಪಗ್ರಹ ಚಂದ್ರ ಕಿರಿದಾಗುತ್ತಿದೆ. ಇದರಿಂದಾಗಿ ಚಂದ್ರನ ಮೇಲ್ಮೈಯಲ್ಲಿ ಸುಕ್ಕಾದಂತೆ ಆಗಬಹುದು ಹಾಗೂ ಚಂದ್ರ ಕಂಪನಗಳು ಆಗಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಚಂದ್ರನ ಒಳಭಾಗ ತಂಪಾಗಿದ್ದು, ಅದು ಕುಗ್ಗಿ, ಅದರಿಂದ ಅದರ ಗಟ್ಟಿ ಮೇಲ್ಭಾಗದಲ್ಲಿ ಸೀಳು ಬಿಡುತ್ತದೆ ಮತ್ತು ಗೆರೆಗಳು ಮೂಡುತ್ತವೆ ಎಂದು ನಾಸಾದಿಂದ ಪ್ರಾಯೋಜಿತವಾದ ಸಂಶೋಧನೆಯಲ್ಲಿ ತಿಳಿದುಬಂದಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಕಳೆದ ಕೆಲವು ನೂರು ಮಿಲಿಯನ್ ವರ್ಷಗಳಿಂದ ಚಂದ್ರನ ಪದರ ನೂರೈವತ್ತು ಅಡಿಯಷ್ಟು ತೆಳುವಾಗಿದೆ. ಚಂದ್ರನ ಮೇಲ್ಮೈನ ಗೆರೆಗಳನ್ನು ತೋರಿಸುವಂಥ ವಿಡಿಯೋವನ್ನು ನಾಸಾದಿಂದ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಕಳೆದ ಕೆಲವು ಮಿಷನ್ ಗಳಲ್ಲಿ ಗಗನಯಾತ್ರಿಗಳು ಚಂದ್ರನ ಮೇಲೆ ಹಲವು ಸೆಸ್ಮೋ ಮೀಟರ್ ಇರಿಸಿದ್ದಾರೆ.

ನಾಸಾದ ಪ್ರಕಾರ, ಚಂದ್ರನಲ್ಲಿನ ಗೆರೆಗಳ ಸಮೀಪವೇ ಕಂಪನಗಳನ್ನು ಗುರುತಿಸಿರುವ ವಿಜ್ಞಾನಿಗಳು, ಈ ಬಗ್ಗೆ ಅಧ್ಯಯನ ವರದಿಯನ್ನು ನೇಚರ್ ಜಿಯೋ ಸೈನ್ಸ್ ನಲ್ಲಿ ಸೋಮವಾರ ಪ್ರಕಟಿಸಿದ್ದಾರೆ. ಚಂದ್ರನ ಮೇಲಿನ ಗೆರೆಗಳನ್ನು ಭಾವಚಿತ್ರಗಳ ಮೂಲದ ಸಾಕ್ಷ್ಯವಾಗಿ ನಾಸಾ ದಾಖಲು ಮಾಡಿದೆ.

Shrinking Moon may cause quakes : Scientists

ನಮ್ಮ ವಿಶ್ಲೇಷಣೆ ಪ್ರಕಾರ, ಮೊದಲ ಸಾಕ್ಷ್ಯವು ಈ ದೋಷಪೂರಿತ ಗೆರೆಗಳು ಈಗಲೂ ಸಕ್ರಿಯವಾಗಿರುವಂತೆ ತೋರುತ್ತಿವೆ. ಮತ್ತು ಚಂದ್ರನು ಕ್ರಮೇಣ ತಂಪಾಗುತ್ತಾ ಹಾಗೂ ಕುಗ್ಗುತ್ತಾ ಸಾಗುತ್ತಿದ್ದಂತೆ ಕಂಪನ ಉಂಟು ಮಾಡುವ ಸಾಧ್ಯತೆಗಳಿವೆ ಎಂದು ಹಿರಿಯ ವಿಜ್ಞಾನಿ ಥಾಮಸ್ ವಾಟ್ಟರ್ಸ್ ತಿಳಿಸಿದ್ದಾರೆ.

ರಿಕ್ಟರ್ ಮಾಪನದಲ್ಲಿ ಐದರಷ್ಟು ತೀವ್ರತೆಯ ಕಂಪನವು ಚಂದ್ರನಲ್ಲಿ ಉಂಟಾಗಬಹುದು ಎಂದು ವಾಟ್ಟರ್ಸ್ ತಿಳಿಸಿರುವುದಾಗಿ ನಾಸಾದ ಹೇಳಿಕೆಯಲ್ಲಿ ತಿಳಿಸಲಾಗಿದೆ. ‌

English summary
Shrinking Moon may cause quakes, said by scientists and NASA has released statement regarding this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X