ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆಗಡಿ ಇದೆ ಎಂದಾಕ್ಷಣ ಕೊರೊನಾ ಪರೀಕ್ಷೆ ಮಾಡಿಸಬೇಕೆ?: ತಜ್ಞರು ಏನಂತಾರೆ

|
Google Oneindia Kannada News

ಕಳೆದ ವರ್ಷ ಈ ಚಳಿಗಾಲದಲ್ಲಿ ನಿಮಗೆ ಜ್ವರ ಬಂದಿತ್ತಾ, ಗಂಟಲು ಕೆರೆತ ಉಂಟಾಗಿತ್ತಾ, ಶೀತವಾಗಿತ್ತಾ ಎನ್ನುವುದು ಮುಖ್ಯವಲ್ಲ.

ಈ ಚಳಿಗಾಲದಲ್ಲಿ ಅಂತಹ ಯಾವುದೇ ತೊಂದರೆಗಳು ಕಾಣಿಸಿಕೊಂಡರೂ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.

ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಮಾಹಿತಿ ಪ್ರಕಾರ ರೋಗದ ಯಾವುದೇ ಒಂದು ಲಕ್ಷಣ ಕಂಡುಬಂದರೂ ಕೂಡ ಪರೀಕ್ಷೆ ಮಾಡಿಸಲೇಬೇಕು. ಆದರೆ ಯಾವುದೇ ಲಕ್ಷಣಗಳು ಸಣ್ಣ ಪ್ರಮಾಣದಲ್ಲಿದ್ದರೆ ಪರೀಕ್ಷೆಯ ಅಗತ್ಯವಿಲ್ಲ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರತಿವರ್ಷವೂ ಒಂದೆರೆಡು ರೋಗಗಳು ಸಾಮಾನ್ಯ

ಪ್ರತಿವರ್ಷವೂ ಒಂದೆರೆಡು ರೋಗಗಳು ಸಾಮಾನ್ಯ

ಪ್ರತಿವರ್ಷವೂ ದೊಡ್ಡವರಿಗೆ ಒಂದೆರೆಡು ಉಸಿರಾಟದ ಸೋಂಕು ಮತ್ತು ಮಕ್ಕಳಿಗೆ ಸುಮಾರು ಐದು ರೀತಿಯ ಉಸಿರಾಟದ ಸೋಂಕುಗಳು ತಗುಲುತ್ತವೆ. ಹಾಗೆಂದ ಮಾತ್ರಕ್ಕೆ ಎಲ್ಲದಕ್ಕೂ ಪರೀಕ್ಷೆ ಮಾಡುತ್ತಿರಲು ಸಾಧ್ಯವಿಲ್ಲ ಎಂದು ಪ್ರೊ.ಅರ್ನಾಲ್ಡ್ ಎಸ್ ಮೋಂಟೊ ತಿಳಿಸಿದ್ದಾರೆ.

ನಿಮ್ಮ ಕುಟುಂಬ ಉಳಿಯಬೇಕಿದ್ದರೆ ಪರೀಕ್ಷೆ ಮಾಡಿಸಿ

ನಿಮ್ಮ ಕುಟುಂಬ ಉಳಿಯಬೇಕಿದ್ದರೆ ಪರೀಕ್ಷೆ ಮಾಡಿಸಿ

ಯೂನಿವರ್ಸಿಟಿ ಆಫ್ ಚಿಕಾಗೊದ ಎಮಿಲಿ ಲಂಡನ್ ಮಾತನಾಡಿ, ಕೊವಿಡ್ ಆರಂಭ ಹಾಗೂ ನೆಗಡಿಯ ವ್ಯತ್ಯಾಸ ಕುರಿತು ಹೇಳಲು ಸಾಧ್ಯವಿಲ್ಲ.ನಿಮ್ಮ ಕುಟುಂಬದವರನ್ನು ರಕ್ಷಿಸಿಕೊಳ್ಳಬೇಕೆಂದರೆ ನೀವು ರೋಗದ ಯಾವುದೇ ಒಂದು ಲಕ್ಷಣಗಳು ಕಂಡು ಬಂದರೂ ಅದನ್ನು ನಿರ್ಲಕ್ಷಿಸಬೇಡಿ, ಆಸ್ಪತ್ರೆಗೆ ಹೋಗಿ ಪರೀಕ್ಷಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ನಿರ್ದಿಷ್ಟವಾದ ಉತ್ತರವಿಲ್ಲ

ನಿರ್ದಿಷ್ಟವಾದ ಉತ್ತರವಿಲ್ಲ

ಕೇವಲ ನೆಗಡಿ ಕಾಣಿಸಿಕೊಂಡಾಕ್ಷಣ ಆಸ್ಪತ್ರೆಗೆ ಹೋಗಬೇಕೆ ಎನ್ನುವ ಪ್ರಶ್ನೆ ಸಾಕಷ್ಟು ಮಂದಿಯನ್ನು ಕಾಡುತ್ತಿದೆ. ಕಳೆದ ವರ್ಷವೂ ನನಗೆ ಜ್ವರ, ಶೀತವಾಗಿತ್ತು, ಹಾಗೆಯೇ ಗುಣಮುಖನಾಗಿದ್ದೆ, ಈ ಬಾರಿಗೂ ಹಾಗೆಯೇ ಕಡಿಮೆಯಾಗುತ್ತದೆ ಅದಕ್ಕೆ ಆಸ್ಪತ್ರೆ ಏಕೆ ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ನಿರ್ದಿಷ್ಟ ಉತ್ತರವಿಲ್ಲ. ಕೆಲವು ತಜ್ಞರು ಕೊವಿಡ್ ಯಾವುದು ಸಾಮಾನ್ಯ ನೆಗಡಿಯಾವುದು ಎಂದು ಆರಂಭದಲ್ಲಿ ವ್ಯತ್ಯಾಸ ಗುರುತಿಸುವುದು ಕಷ್ಟ ಹಾಗಾಗಿ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರೆ, ಇನ್ನು ಕೆಲವು ತಜ್ಞರು ಶೀತ, ಜ್ವರ ಎಲ್ಲಾ ವರ್ಷ ವರ್ಷವೂ ಬರುವಂಥದ್ದು ಹೀಗಾಗಿ ರೋಗದ ಸಣ್ಣ ಲಕ್ಷಣಗಳಿದ್ದರೆ ಚಿಕಿತ್ಸೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಕೊರೊನಾ ಲಕ್ಷಣಗಳೇನು?

ಕೊರೊನಾ ಲಕ್ಷಣಗಳೇನು?

ನೆಗಡಿ, ಸೀನುವುದು, ಗಂಟಲು ತುರಿಕೆ, ಜ್ವರ, ಕಣ್ಣಿನಲ್ಲಿ ನೀರು ತುಂಬಿಕೊಂಡಿರುವುದು ಕೊರೊನಾ ಸೋಂಕಿನ ಸಾಮಾನ್ಯ ಲಕ್ಷಣವಾಗಿದೆ. ಅಷ್ಟೇ ಅಲ್ಲದೆ ಉಸಿರಾಟ ತೊಂದರೆ, ತಲೆನೋವು, ಮೈಕೈ ನೋವು, ವಾಸನೆ ಗ್ರಹಿಕೆ ಇಲ್ಲದಿರುವುದು ಕೂಡ ಒಂದು ಲಕ್ಷಣವಾಗಿದೆ.

Recommended Video

Political Popcorn with Lavanya : Dr BL Shankar, ಈಗ ಆಗಿರೋದೆ ಸಾಕು ಇನ್ಮೇಲೆ ಚುನಾವಣೆಗೆ ನಿಲ್ಲಲ್ಲಾ!?! Part2

English summary
If you fell ill last winter, it probably didn’t really matter whether your sore throat and sniffles were the result of a cold or the flu. This year, with covid-19 added to the mix of look-alike winter maladies, it’s more important to know which virus is causing your illness, because the coronavirus is so contagious and can result in such serious outcomes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X