ಮೆಲ್ಬೋರ್ನ್ನಲ್ಲಿ ಶೂಟೌಟ್ 1 ಸಾವು, ಹಲವರಿಗೆ ಗಾಯ
ಮೆಲ್ಬೋರ್ನ್, ಏಪ್ರಿಲ್ 14 : ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ಗುಂಡಿನ ದಾಳಿ ನಡೆದಿದೆ. ಒಬ್ಬ ವ್ಯಕ್ತಿ ಮೃತಪಟ್ಟಿದ್ದು 4ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ವಿಕ್ಟೋರಿಯನ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಭಾನುವಾರ ಮುಂಜಾನೆ 3.20ರ ಸುಮಾರಿಗೆ ಮೆಲ್ಬೋರ್ನ್ನಲ್ಲಿ ನೈಟ್ ಕ್ಲಬ್ ಹೊರ ಭಾಗದಲ್ಲಿ ಗುಂಡಿನ ದಾಳಿ ನಡೆದಿದೆ. 37 ವರ್ಷಷ ವಾರೆನ್ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ. 28 ವರ್ಷದ ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಭಾರತೀಯ ದಂತವೈದ್ಯೆ ಹತ್ಯೆಗೂ ಮುನ್ನ ನಡೆದಿದ್ದೇನು?
ಕಪ್ಪು ಎಸ್ಯುವಿ ಕಾರಿನಲ್ಲಿ ಬಂದ ವ್ಯಕ್ತಿ ಗುಂಡಿನ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಘಟನೆ ನಡೆದ ಬಳಿ ಎಸ್ಯುವಿ ಕಾರು ಸ್ಥಳದಿಂದ ಹೋಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಮಿಸೆಸ್ ಯೂನಿವರ್ಸಲ್ ಗೆ ಉಡುಪಿಯ ಡಾ.ಪದ್ಮಾ ಗಡಿಯಾರ್ ಆಯ್ಕೆ
ಗುಂಡಿನ ದಾಳಿ ನಡೆಸಿರುವ ವ್ಯಕ್ತಿ ಯಾರು? ಎಂಬುದು ಇನ್ನೂ ಪತ್ತೆಯಾಗಿಲ್ಲ. ವಿಡಿಯೋ ಮತ್ತು ಫೋಟೋವನ್ನು ಪೊಲೀಸರು ಸಂಗ್ರಹಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಗುಂಡಿನ ದಾಳಿ ನಡೆಸಿದ ವ್ಯಕ್ತಿ ಬಗ್ಗೆ ಮಾಹಿತಿ ಇದ್ದರೆ ನೀಡುವಂತೆ ಜನರಿಗೂ ಮನವಿ ಮಾಡಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ: ಕನ್ನಡಿಗ ಬಂಧನ