ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕಾಗೋದಲ್ಲಿ ಗುಂಡಿನ ದಾಳಿ; 14 ಜನರಿಗೆ ಗಾಯ

|
Google Oneindia Kannada News

ಚಿಕಾಗೋ, ಜುಲೈ 22 : ಅಮೆರಿಕದ ಚಿಕಾಗೋದಲ್ಲಿ ಸ್ಮಶಾನದ ಸಮೀಪ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ 14 ಜನರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಚಿಕಾಗೋ ಪೊಲೀಸರು ಗುಂಡಿನ ದಾಳಿ ನಡೆದಿರುವುದನ್ನು ಖಚಿತಪಡಿಸಿದ್ದಾರೆ. ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬಂದವರ ಮೇಲೆ ಕಪ್ಪು ಬಣ್ಣದ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.

ದ. ಆಫ್ರಿಕಾ ಚರ್ಚ್‌ನಲ್ಲಿ ನರಮೇಧ, ಗುಂಡಿನ ದಾಳಿಗೆ ಐವರು ಬಲಿದ. ಆಫ್ರಿಕಾ ಚರ್ಚ್‌ನಲ್ಲಿ ನರಮೇಧ, ಗುಂಡಿನ ದಾಳಿಗೆ ಐವರು ಬಲಿ

79ನೇ ರಸ್ತೆಯಲ್ಲಿ ಮಂಗಳವಾರ ಸಂಜೆ 6.30ರ ವೇಳೆಗೆ ಈ ಘಟನೆ ನಡೆದಿದೆ. ಗುಂಡಿನ ದಾಳಿಯಿಂದಾಗಿ 14 ಜನರು ಗಾಯಗೊಂಡಿದ್ದಾರೆ. ಕಾರಿನಲ್ಲಿ ಎಷ್ಟು ಜನರಿದ್ದರು? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪೂಂಚ್ ಗಡಿಯಲ್ಲಿ ಪಾಕ್‌ನಿಂದ ಗುಂಡಿನ ಮೊರೆತ: ಓರ್ವ ನಾಗರಿಕ ಸಾವು ಪೂಂಚ್ ಗಡಿಯಲ್ಲಿ ಪಾಕ್‌ನಿಂದ ಗುಂಡಿನ ಮೊರೆತ: ಓರ್ವ ನಾಗರಿಕ ಸಾವು

Shooting In Chicago 14 Injured

14 ಜನರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಅವರ ಸ್ಥಿತಿ ಬಗ್ಗೆ ಮಾಹಿತಿ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ನಡೆದ ಸ್ಥಳದಿಂದ ಪೊಲೀಸರು 60 ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.

 ಚಿಕಾಗೋ; ಕಾರಿನ ಡಿಕ್ಕಿಯಲ್ಲಿ ಶವವಾಗಿ ಸಿಕ್ಕಳು ಗುಜರಾತ್ ಮೂಲದ ಯುವತಿ ಚಿಕಾಗೋ; ಕಾರಿನ ಡಿಕ್ಕಿಯಲ್ಲಿ ಶವವಾಗಿ ಸಿಕ್ಕಳು ಗುಜರಾತ್ ಮೂಲದ ಯುವತಿ

ಗಾಯಗೊಂಡಿದ್ದ 9 ಜನರನ್ನು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. 63ನೇ ರಸ್ತೆಯಲ್ಲಿಯೂ ಸಹ ಮೂವರು ಗಾಯಾಳುಗಳು ಪತ್ತೆಯಾಗಿದ್ದಾರೆ. ಅಲ್ಲಿಯೂ ಸಹ ಗುಂಡಿನ ದಾಳಿ ನಡೆಸಲಾಗಿದೆ ಎಂದು ಅಗ್ನಿ ಶಾಮಕದಳದ ಅಧಿಕಾರಿಗಳು ಹೇಳಿದ್ದಾರೆ.

ಅಂತ್ಯ ಸಂಸ್ಕಾರಕ್ಕೆ ಬಂದರವನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಲಾಗಿದೆ. ಇದೊಂದು ಪೂರ್ವ ನಿಯೋಜಿತ ಸಂಚು ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತಪಟ್ಟವರ ಕುಟುಂಬದ ಮೇಲೆ ಹಳೆಯ ದ್ವೇಷವಿತ್ತೆ ಎಂದು ತನಿಖೆ ಕೈಗೊಂಡಿದ್ದಾರೆ.

English summary
At least 14 people hospitalized after shooting in Chicago. Mass shooting reported near a funeral home in the Auburn Gresham community.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X