ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನ ಷೂ ಬಾಂಬ್: ಅಮೆರಿಕ ಸರಕಾರ ಎಚ್ಚರಿಕೆ

By Srinath
|
Google Oneindia Kannada News

ವಾಷಿಂಗ್ಟನ್, ಫೆ. 20: ಭಯೋತ್ಪಾದಕರು ಅಮೆರಿಕದಲ್ಲಿ ಹೊಸ ರೂಪದಲ್ಲಿ ಭಯೋತ್ಪಾದನೆ ನಡೆಸುವ ಬೆದರಿಕೆಯೊಡ್ಡಿದ್ದಾರೆ. ಭಯೋತ್ಪಾದಕರು ತಾವು ಧರಿಸುವ ಷೂಗಳಲ್ಲಿ ಬಾಂಬುಗಳನ್ನು (shoe-bomb) ಅಡಗಿಸಿಟ್ಟುಕೊಂಡು ಸ್ಫೋಟಕ್ಕೆ ಬಳಸಬಹುದೆಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಹಾಗಾಗಿ ವಿಶ್ವದ ನಾನಾ ಭಾಗಗಳಿಂದ ಅಮೆರಿಕಕ್ಕೆ ಬರುವ ಎಲ್ಲ ವಿಮಾನ ಪ್ರಯಾಣಿಕರ ಮೇಲೂ ಕಟ್ಟೆಚ್ಚರ ವಹಿಸುವಂತೆ ಸ್ವತ: ಅಮೆರಿಕ ಸರ್ಕಾರ ಬುಧವಾರ ಎಚ್ಚರಿಕೆ ನೀಡಿದೆ. ಷೂಗಳಲ್ಲಿ ಕಾಸ್ಮೆಟಿಕ್ಸ್ (ಸೌಂದರ್ಯವರ್ಧಕ) ಅಥವಾ ದ್ರವರೂಪದಲ್ಲಿ ಸ್ಫೋಟಕಗಳನ್ನು ದೇಶದೊಳಕ್ಕೆ ರವಾನೆ ಮಾಡಲು ಉಗ್ರ ಸಂಘಟನೆಗಳು ಸಂಚು ರೂಪಿಸಿವೆ ಎಂಬ ಸ್ಫೋಟಕ ಮಾಹಿತಿಯನ್ನು ಅಮೆರಿಕದ ಭದ್ರತಾ ಸಂಸ್ಥೆಗಳು ನೀಡಿವೆ.

shoe-bombs-possiblity-on-america-airlines-us-warns

ಆದರೆ ನಿರ್ದಿಷ್ಟವಾಗಿ ಯಾವ ಭಯೋತ್ಪಾದಕ ಸಂಘಟನೆ, ಯಾವ ವಿಮಾನ, ವಿಮಾನ ನಿಲ್ದಾಣವೆಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಉಗ್ರ ಸಂಘಟನೆಗಳು ಅಮೆರಿಕ ದೇಶದೊಳಕ್ಕೆ ಸ್ಫೋಟಕಗಳನ್ನು ಸಾಗಿಸಲು ಹಲವು ಉಪಾಯಗಳನ್ನು ಅನುಸರಿಸುತ್ತಿವೆ ಎಂಬ ಆತಂಕವೂ ವ್ಯಕ್ತವಾಗಿದೆ.

ಇದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಒಂದು ಮೂಲ ಹೇಳಿದರೆ, ಈ ವರದಿಯನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದೂ ಇನ್ನೊಂದು ಮೂಲ ಹೇಳಿದೆ.

ಆದರೆ ಕೆಲವು ಮೂಲಗಳ ಪ್ರಕಾರ, ವಿಶ್ವದ ಯಾವುದೇ ಕಡೆಯಿಂದ ಅಮೆರಿಕಕ್ಕೆ ಬರುವ ಯಾವುದೇ ವಿಮಾನಗಳಲ್ಲೂ ಈ ಸ್ಫೋಟಕವನ್ನು ದೇಶದೊಳಕ್ಕೆ ಸಾಗಿಸಬಹುದು. ಈ ಮೊದಲು ಚೀನಾದ ಸೋಚಿಯಲ್ಲಿ ನಡೆಯಲಿರುವ ಒಲಂಪಿಕ್ ಕ್ರೀಡಾಕೂಟ ಸ್ಥಳದಲ್ಲಿ ಸ್ಫೋಟ ನಡೆಸಲು ಟೂತ್‌ ಪೇಸ್ಟ್ ಟ್ಯೂಬ್‌ ಬಳಸಿಕೊಳ್ಳಲಾಗುತ್ತಿದೆ ಎಂದು ವರದಿಯಾಗಿತ್ತು.

2001, ಸೆ. 11ರ ಘಟನೆಯ ನಂತರ ಅಮೆರಿಕದ ಇಸ್ಲಾಂ ಉಗ್ರರು ಎರಡು ಪ್ರಧಾನ ಪ್ರಯತ್ನಗಳನ್ನು ನಡೆಸಿದ್ದಾರೆ. ಈ ಸ್ಫೋಟಕಗಳನ್ನು ಉಗ್ರರು ತಮ್ಮ ಉಡುಗೆ, ಪಾದರಕ್ಷೆಗಳಲ್ಲಿ ಅಡಗಿಸಿಕೊಂಡಿದ್ದರು. 2001ರ ಡಿಸೆಂಬರಿನಲ್ಲಿ ಬ್ರಿಟನ್ ಮೂಲದ ರಿಚರ್ಡ್‌ ರೀಡ್ ತನ್ನ ಷೂನಲ್ಲಿ ಬಾಂಬ್ ಇಟ್ಟುಕೊಂಡು ವಿಮಾನವೇರಿದ್ದ. ಆದರೆ ಅದು ಸ್ಫೋಟಿಸುವ ಮುನ್ನವೇ ಇತರ ಪ್ರಯಾಣಿಕರು ಅವನನ್ನು ಹಿಡಿದು ಹಾಕಿದರು.

ಅದೇ ರೀತಿ 2009ರಲ್ಲಿ ಕ್ರಿಸ್‌ ಮಸ್ ದಿನದಂದೇ ಉಮ್ಮರ್ ಫಾರೂಖ್ ಅಬ್ದುಲ್ ಮುತಾಲಬ್ ಎಂಬ ಉಗ್ರ ತನ್ನ ಒಳಉಡುಪಿನಲ್ಲಿ ಬಾಂಬ್ ಇರಿಸಿಕೊಂಡು ವಿಮಾನವೇರಿದ್ದ. ಆದರೆ ಸ್ಫೋಟಿಸುವ ಮೊದಲೇ ಅವನೂ ಸಿಕ್ಕಿಬಿದ್ದಿದ್ದ. ರಿಚರ್ಡ್‌ ರೀಡ್ ಹಾಗೂ ಅಬ್ದುಲ್ ಮುತಾಲಬ್ ಇಬ್ಬರೂ ಈಗ ಅಮೆರಿಕ ಜೈಲಿನಲ್ಲಿ ಕೊಳೆಯುತ್ತಿದ್ದಾರೆ.

English summary
Shoe bombs possiblity on America Airlines -warning. Intelligence collected by the United States and other countries has indicated terror groups have been working on new shoe-bomb designs, the sources said Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X