ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Video: ಕಾಬೂಲ್‌ನಲ್ಲಿ ಆಕಾಶಕ್ಕೆ ಹಾರಿತು ವಿಮಾನದಿಂದ ಜಾರಿದವರ ಪ್ರಾಣಪಕ್ಷಿ!

|
Google Oneindia Kannada News

ಕಾಬೂಲ್, ಆಗಸ್ಟ್ 16: ಅಫ್ಘಾನಿಸ್ತಾನದ ಮೇಲೆ ತಾಲಿಬಾನ್ ಸಂಘಟನೆ ಉಗ್ರರು ಹಿಡಿತ ಸಾಧಿಸುತ್ತಿದ್ದಂತೆ ಅನಿರೀಕ್ಷಿತ ಬೆಳವಣಿಗೆ, ಘಟನೆಗಳು ಮತ್ತು ಸನ್ನಿವೇಶಗಳಿಗೆ ರಾಜಧಾನಿ ಕಾಬೂಲ್ ಸಾಕ್ಷಿಯಾಗುತ್ತಿದೆ. ದೇಶವನ್ನು ತೊರೆದು ಹೋಗುತ್ತಿರುವ ಜನರು ಆತುರದಲ್ಲಿ ಮಾಡಿಕೊಳ್ಳುತ್ತಿರುವ ಅಚಾತುರ್ಯಗಳ ಸರಣಿ ಮುಂದುವರಿಯುತ್ತಿದೆ.

Recommended Video

ಇಂಥ ಪರಿಸ್ಥಿತಿ ಯಾರಿಗೂ ಬೇಡ - ಅಫ್ಘಾನ್ ನಲ್ಲಿ ಕರುಳು ಹಿಂಡುವ ದೃಶ್ಯ !! | Oneindia Kannada

ಅಫ್ಘಾನಿಸ್ತಾನವನ್ನು ತೊರೆಯುವುದಕ್ಕಾಗಿ ಕಾಬೂಲ್‌ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ನೆರೆದಿದ್ದಾರೆ. ಕಾಬೂಲ್‌ನಿಂದ ಹಾರಲು ಸಿದ್ಧವಾದ ವಿಮಾನಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ತುಂಬಿದ್ದು, ಅನಿರೀಕ್ಷಿತ ಬೆಳವಣಿಗೆಗೆ ಸಾಕ್ಷಿಯಾಗಿದೆ. ಆಕಾಶಕ್ಕೆ ಹಾರಿದ ವಿಮಾನದಿಂದ ಇಬ್ಬರು ಪ್ರಯಾಣಿಕರು ಹಾರಿ ಬಿದ್ದು ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ.

ತಾಲಿಬಾನ್ ಪಾರುಪತ್ಯ: ಅಫ್ಘಾನ್ ಗದ್ದುಗೆ ಬಿಟ್ಟು ಇಳಿದ ಅಧ್ಯಕ್ಷ ಅಶ್ರಫ್ ಘನಿ!ತಾಲಿಬಾನ್ ಪಾರುಪತ್ಯ: ಅಫ್ಘಾನ್ ಗದ್ದುಗೆ ಬಿಟ್ಟು ಇಳಿದ ಅಧ್ಯಕ್ಷ ಅಶ್ರಫ್ ಘನಿ!

ವಿಮಾನದ ಚಕ್ರವನ್ನೇ ಇಬ್ಬರು ಪ್ರಯಾಣಿಕರು ಹಿಡಿದುಕೊಂಡು ನಿಂತಿದ್ದರು. ಕಾಬೂಲ್ ವಿಮಾನ ನಿಲ್ದಾಣದಿಂದ ವಿಮಾನ ಹಾರಿದ ಕೆಲವೇ ಕ್ಷಣಗಳಲ್ಲಿ ಇಬ್ಬರೂ ಪ್ರಯಾಣಿಕರು ಕೆಳಗೆ ಬೀಳುತ್ತಿರುವ ದೃಶ್ಯವು ಎದೆ ಝಲ್ ಎನ್ನಿಸುವಂತಿದೆ. ಇದೇ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಕಾಬೂಲ್ ಏರ್ ಪೋರ್ಟ್ ನಲ್ಲಿ ತಾಲಿಬಾನ್ ಗುಂಡಿನ ದಾಳಿ

ತಾಲಿಬಾನ್ ಉಗ್ರರ ಭಯದಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ದೇಶವನ್ನು ತೊರೆದು ಹೋಗುವುದಕ್ಕೆ ಆತುರದಿಂದ ಮುಗಿ ಬೀಳುತ್ತಿದ್ದಾರೆ. ಇದರ ಮಧ್ಯೆ ಅಫ್ಘಾನಿಸ್ತಾನದಿಂದ ಹೊರಟು ನಿಂತ ಸಾವಿರಾರು ಪ್ರಯಾಣಿಕರ ಮೇಲೆ ತಾಲಿಬಾನ್ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಲ್ಲಿ ಐವರಿಗಿಂತ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ಅಂತಾರಾಷ್ಟ್ರೀಯ ಸುದ್ದಿ ವಾಹಿನಿಗಳು ವರದಿ ಮಾಡಿದೆ.

ಕಾಬೂಲ್‌ನಲ್ಲಿ ವಿಮಾನ ಏರುವುದಕ್ಕೆ ಪ್ರಯಾಣಿಕರ ಪೈಪೋಟಿ

ತಾಲಿಬಾನ್ ಉಗ್ರರಿಗೆ ಅಫ್ಘಾನಿಸ್ತಾನದಲ್ಲಿ ಸಾರ್ವಜನಿಕರು ಎಷ್ಟರ ಮಟ್ಟಿಗೆ ಹೆದರಿ ಹೈರಾಣಾಗಿದ್ದಾರೆ ಎನ್ನುವುದಕ್ಕೆ ರಾಜಧಾನಿ ಕಾಬೂಲ್‌ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೇ ಸಾಕ್ಷಿಯಾಗಿತ್ತು. ಅಫ್ಘಾನಿಸ್ತಾನದಿಂದ ಬೇರೆ ರಾಷ್ಟ್ರಗಳಿಗೆ ಹಾರುವ ಕೆಲವೇ ಕೆಲವು ವಿಮಾನಗಳಲ್ಲಿ ದೇಶ ತೊರೆಯುವುದಕ್ಕಾಗಿ ಜನರು ಮುಗಿ ಬಿದ್ದರು. ವಿಮಾನ ಏರುವುದಕ್ಕೆ ಜನರು ಹರಸಾಹಸ ಪಡುತ್ತಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಸಾಕಷ್ಟು ವೈರಲ್ ಆಗುತ್ತಿದೆ.

ದೇಶದಿಂದಲೇ ಪಲಾಯನ ಮಾಡಿರುವ ಅಧ್ಯಕ್ಷ ಅಶ್ರಫ್ ಘನಿ

ತಾಲಿಬಾನ್ ಉಗ್ರರು ಕಾಬೂಲ್ ಮೇಲೆ ಹಿಡಿತ ಸಾಧಿಸುತ್ತಿದ್ದಂತೆ ಗದ್ದುಗೆಯನ್ನು ತೊರೆದ ಅಧ್ಯಕ್ಷ ಅಶ್ರಫ್ ಘನಿ ರಾಜಧಾನಿಯಿಂದ ಕಾಲ್ಕಿತ್ತಿದ್ದಾರೆ. ಮೂಲಗಳ ಪ್ರಕಾರ, ಅವರು ದೇಶದಿಂದಲೇ ಪಲಾಯನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಷಯ ತಿಳಿಯುದ್ದಂತೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದರು. ವಿದೇಶಗಳಿಗೆ ಹಾರುವ ವಿಮಾನಗಳನ್ನು ಏರುವುದಕ್ಕೆ ಮುಗಿ ಬಿದ್ದರು.

ಯುಎಸ್ ಪ್ರಜೆಗಳನ್ನು ಕರೆದೊಯ್ಯಲು ಸೇನಾ ಪಡೆ

ಯುಎಸ್ ಪ್ರಜೆಗಳನ್ನು ಕರೆದೊಯ್ಯಲು ಸೇನಾ ಪಡೆ

ಅಫ್ಘಾನಿಸ್ತಾನದಲ್ಲಿ ವಾಸವಿದ್ದ ಅಮೆರಿಕಾದ ಪ್ರಜೆಗಳು ಮತ್ತು ಅವರ ಸಂಬಂಧಿಕರು ಹಾಗೂ ಸ್ನೇಹಿತರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ನಿಟ್ಟಿನಲ್ಲಿ ಯುಎಸ್ ಕ್ರಮ ತೆಗೆದುಕೊಂಡಿದೆ. ಅಮೆರಿಕಾದಿಂದ 6,000 ಸೇನಾ ಪಡೆಯನ್ನು ಕಾಬೂಲ್ ವಿಮಾನ ನಿಲ್ದಾಣಕ್ಕೆ ಕಳುಹಿಸಿ ಕೊಡಲಾಗಿದೆ. ಯುಎಸ್ ಮಿಲಿಟರಿ ಕಾಬೂಲ್ ವಿಮಾನ ನಿಲ್ದಾಣದ ಪರಿಧಿಯನ್ನು ಭದ್ರಪಡಿಸಿದ್ದು, ಇದರಿಂದ ಫ್ರಾನ್ಸ್‌ನಂತಹ ಕೆಲವು ದೇಶಗಳ ದೂತಾವಾಸ ಸಿಬ್ಬಂದಿಗೂ ಸಹಾಯವಾಗಲಿದೆ.

ಅಫ್ಘಾನ್ ಮೂಲಕ ವಿಮಾನ ಹಾರಾಟಕ್ಕೆ ನಿರ್ಬಂಧಿಸಿದ ದೇಶಗಳು

ಅಫ್ಘಾನ್ ಮೂಲಕ ವಿಮಾನ ಹಾರಾಟಕ್ಕೆ ನಿರ್ಬಂಧಿಸಿದ ದೇಶಗಳು

ಭಾನುವಾರ ಕಾಬೂಲ್ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿರುವ ಹಿನ್ನೆಲೆ ಈ ಮಾರ್ಗದಲ್ಲಿ ನಾಗರಿಕ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಅಸೋಸಿಯೇಷನ್ ತಿಳಿಸಿದ. ಇದರ ಹೊರತಾಗಿ ಇನ್ನು ಮುಂದೆ ಯುನೈಟೆಡ್ ಏರ್ ಲೈನ್ಸ್, ಬ್ರಿಟೀಷ್ ಏರ್ ವೇಸ್ ಮತ್ತು ವರ್ಜಿನ್ ಅಟ್ಲಾಂಟಿಕ್ ವಿಮಾನಗಳ ಮಾರ್ಗ ಬದಲಾವಣೆಗೆ ಚಿಂತಿಸಲಾಗುತ್ತಿದೆ. ಅಫ್ಘಾನ್ ಮೇಲೆ ಹಾರುತ್ತಿದ್ದ ವಿಮಾನಗಳ ಮಾರ್ಗ ಬದಲಾವಣೆಗೆ ನಿರ್ಧರಿಸಲಾಗುತ್ತಿದೆ.

English summary
Shocking video shows 2 people falling Down From Flight in Afghanistan's Kabul.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X