ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋ ಸಾಧನೆ ನೋಡಿ ಶಾಕ್ ಆಗಿದ್ದ ಡೊನಲ್ಡ್ ಟ್ರಂಪ್ ಆಪ್ತ!

ಕಳೆದ ತಿಂಗಳ 15ರಂದು ಇಸ್ರೋ, 104 ಉಪಗ್ರಹಗಳನ್ನು ಯಶಸ್ವಿಯಾಗಿ ಅಂತರಿಕ್ಷಕ್ಕೆ ಸೇರಿಸಿ, ಈ ಹಿಂದೆ 36 ಉಪಗ್ರಹಗಳ ಉಡಾವಣೆ ಮಾಡಿ ದಾಖಲೆ ನಿರ್ಮಿಸಿದ್ದ ರಷ್ಯಾದ ದಾಖಲೆಯನ್ನು ಮುರಿದಿತ್ತು.

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 1: ಅಮೆರಿಕದ ಗುಪ್ತಚರ ಇಲಾಖೆಯ ಮುಖ್ಯಸ್ಥರಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ನಾಮ ನಿರ್ದೇಶನಗೊಂಡಿರುವ ಡಾನ್ ಕೋಸ್ಟ್ಸ್ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಂಸ್ಥೆಯ ಇತ್ತೀಚೆಗಿನ ಸಾಧನೆಯ ಬಗ್ಗೆ ಅಚ್ಚರಿ ಹಾಗೂ ಹರ್ಷ ವ್ಯಕ್ತಪಡಿಸಿದ್ದಾರೆ.

ಕಳೆದ ತಿಂಗಳ 15ರಂದು ಇಸ್ರೋ ಸಂಸ್ಥೆಯು ಒಂದೇ ರಾಕೆಟ್ ನಲ್ಲಿ 104 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಹಾರಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಸಂಸ್ಥೆಯೆಂಬ ಹೆಗ್ಗಳಿಕೆಯನ್ನು ಸಂಪಾದಿಸಿತ್ತು.[104 ಉಪಗ್ರಹಗಳನ್ನು ಒಟ್ಟಿಗೆ ಉಡಾಯಿಸಿ ಹೊಸ ದಾಖಲೆ ಬರೆದ ಭಾರತ]

'Shocked' To Read ISRO's record 104-Satellite Launch: Trump Intel Nominee

ಇದು ಜಗತ್ತಿನಾದ್ಯಂತ ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಈ ಸುದ್ದಿಯನ್ನು ವೃತ್ತಪತ್ರಿಕೆಯಲ್ಲಿ ಓದಿದ್ದ ಕೋಸ್ಟ್ಸ್ ಅವರು, ಚಕಿತರಾಗಿದ್ದರಂತೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ''ಒಂದೇ ರಾಕೆಟ್ ನಲ್ಲಿ 104 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಇಸ್ರೋ ಸಂಸ್ಥೆ ಹಾರಿಸಿದ್ದು ನೋಡಿ ಅಚ್ಚರಿಯಾಯಿತು. ಭಾರತಕ್ಕೆ ಇದೊಂದು ಹೆಮ್ಮೆಯ ವಿಚಾರ'' ಎಂದು ತಿಳಿಸಿದರು.[ಮೋದಿ ಮನ್ ಕಿ ಬಾತ್ ನಲ್ಲಿ ಇಸ್ರೋ, ಕ್ಷಿಪಣಿ, ಡಿಜಿಟಲ್ ಮನಿ, ಕೃಷಿ]

ಆದರೆ, ಇದೇ ವೇಳೆ, ಅಮೆರಿಕ ಸರ್ಕಾರವು ಇದನ್ನು ದೊಡ್ಡ ಸವಾಲಾಗಿ ತೆಗೆದುಕೊಳ್ಳುವುದಾಗಿ ಅವರು ತಿಳಿಸಿದರು. ''ತಂತ್ರಜ್ಞಾನದಲ್ಲಿ ಮುಂದಿದ್ದರೂ, ಭಾರತ ಮಾಡಿರುವ ಸಾಧನೆಯನ್ನು ನೋಡುತ್ತಾ ಕೂಡುವುದು ಅಮೆರಿಕ ಒಲ್ಲದು. ಬಾಹ್ಯಾಕಾಶ ವಿಜ್ಞಾನ ರಂಗದಲ್ಲಿ ಭಾರತಕ್ಕಿಂತ ಉನ್ನತವಾದ ಸಾಧನೆಯನ್ನು ಮಾಡುವ ಛಲ ಈಗ ನಮ್ಮಲ್ಲಿ ಮೂಡಿದೆ'' ಎಂದು ಅವರು ತಿಳಿಸಿದರು.[ತುಮಕೂರಿನ ಎಚ್ ಎಂಟಿ 120 ಎಕರೆ ಜಾಗ ಇಸ್ರೋಗೆ?]

English summary
US President Donald Trump's nominee to be the Director of National Intelligence, Dan Coats, has said he was "shocked" to know that India successfully launched over 100 satellites in one rocket, asserting that the US cannot afford to be seen lagging behind.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X