ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ: ಬಿರುಗಾಳಿಗೆ ಸಿಕ್ಕಿ ಮುಳುಗಿದ ಹಡಗು, 450 ಜನ ಸಾವು?

By Mahesh
|
Google Oneindia Kannada News

ಬೀಜಿಂಗ್, ಜೂ. 02: ಈಸ್ಟರ್ನ್ ಸ್ಟಾರ್ ಹೆಸರಿನ ಹಡಗು ಬಿರುಗಾಳಿ ಹೊಡೆತಕ್ಕೆ ಸಿಲುಕಿ ಮುಳುಗಿದೆ. ಸುಮಾರು 450ಕ್ಕೂ ಅಧಿಕ ಮಂದಿ ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ. 22 ಜನರನ್ನು ರಕ್ಷಿಸಲಾಗಿದೆ. ಹಡಗು ಯಾಂಗ್‌ಷೇ ನದಿಯಲ್ಲಿ ಮುಳುಗಿದೆ.

ಸೋಮವಾರ ರಾತ್ರಿ 500 ಜನರಿದ್ದ ಹಡಗು, ಪೂರ್ವ ಚೀನಾದ ರಾಜಧಾನಿ ನಾಂಜಿಂಗ್‌ನಿಂದ ಚೊಂಗ್‌ಕಿಂಗ್ ನಗರಕ್ಕೆ ಹೊರಟಿತ್ತು. ರಾತ್ರಿ 9.30ರ ಸುಮಾರಿನಲ್ಲಿ ಜಾನ್ಲಿ ಪ್ರದೇಶದಲ್ಲಿ ಭಯಂಕರ ಬಿರುಗಾಳಿ ಬೀಸಿದ ಪರಿಣಾಮ ಕೇವಲ ಎರಡೇ ನಿಮಿಷದಲ್ಲಿ 50 ಅಡಿ ಆಳಕ್ಕೆ ಮುಳುಗಿತು. ಅಪಘಾತದ ಬಗ್ಗೆ ಸಂದೇಶ ರವಾನಿಸಲೂ ಸಾಧ್ಯವಾಗಲಿಲ್ಲ ಎಂದು ರಕ್ಷಿಸಲ್ಪಟ್ಟ ಸಿಬ್ಬಂದಿ ಹೇಳಿದ್ದಾರೆ.

Ship with over 450 people sinks in China's Yangtze, 22 rescued

ಹಡಗಿನಲ್ಲಿ 405 ಚೀನಿ ಪ್ರಯಾಣಿಕರು, ಐವರು ಟ್ರಾವೆಲ್ ಏಜೆನ್ಸಿ ಸಿಬ್ಬಂದಿ, 47 ಜನ ಹಡಗಿನ ಸಿಬ್ಬಂದಿ ಇದ್ದರು. ಪ್ರಯಾಣಿಕರ ಪೈಕಿ ಬಹುತೇಕ ವೃದ್ಧರೇ ಇದ್ದಾರೆ ಎಂದು ತಿಳಿದು ಬಂದಿದೆ.

ಈಸ್ಟರ್ನ್ ಸ್ಟಾರ್ ಹೆಸರಿನ ಈ ಹಡಗು ಚೊಂಕಿಂಗ್ ಈಸ್ಟರ್ನ್ ಷಿಪ್ಪಿಂಗ್ ಕಾರ್ಪೋರೇಷನ್‌ಗೆ ಸೇರಿದ್ದು, ಈ ಸಂಸ್ಥೆ 1967ರಿಂದಲೂ ಪ್ರವಾಸ ಏರ್ಪಡಿಸುತ್ತಿದೆ.

ಈ ಹಡಗಿನಲ್ಲಿ 50 ರಿಂದ 80 ವರ್ಷ ವಯಸ್ಸಿನ ಹಿರಿಯರು ಪ್ರವಾಸ ಹೊರಟಿದ್ದರು.ಮುಳುಗಿರುವ ಹಡಗಿನಲ್ಲಿರುವ ಪ್ರಯಾಣಿಕರ ರಕ್ಷಣೆಗೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಚೀನಾ ಪ್ರಧಾನಿ ಲೀ ಕಿಯಾಂಗ್ ಹೇಳಿದ್ದಾರೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

English summary
A passenger ship carrying more than 450 people sank overnight in the Yangtze river in southern China after being caught in a cyclone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X