• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಷವೆಂದು ದೂರದಿರಿ, ಕಚ್ಚುತ್ತೆಂದು ಹೆದರದಿರಿ: ಹಾವಿಗಿಂದು ಜನ್ಮದಿನ

By Nayana
|
   World Snake Day : ಇಂದು ಜುಲೈ 16 ಹಾವುಗಳ ಜನ್ಮದಿನ | Oneindia Kannada

   ಬೆಂಗಳೂರು, ಜು.16: ಹಾವು ಎಂದ ತಕ್ಷಣನೇ ಮೈಯಲ್ಲಿ ನಡುಕ, ಅದೇನೂ ಕಚ್ಚಬೇಕೆಂದೇನಿಲ್ಲ, ಪಕ್ಕಕ್ಕೆ ಹರಿದಾಡಿದರೂ ಸಾಕು ಮೈಮೇಲೆ ಬಿಟ್ಟುಕೊಂಡಂತೆ ಕಿರುಚಾಡುತ್ತೇವೆ, ಹಾವು ಅನ್ನುವ ಎರಡಕ್ಷರದಲ್ಲಿ ಅದೆಷ್ಟು ಮಹತ್ವವಿದೆ ಎಂದು ಇದರಲ್ಲೇ ತಿಳಿಯುತ್ತದೆ.

   ಸರಸರನೆ ಓಡಾಡುವ, ವಿಷ ಕಾರುವ, ಪುಂಗಿ ನಾದಕ್ಕೆ ತಲೆದೂಗುವ ಹಾವುಗಳೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಭಯ. ಕೆಲವರಿಗೆ ಇದರ ಬಗ್ಗೆ ಭಯದಿಂದ ಕೂಡಿದ ಭಕ್ತಿ. ಇನ್ನು ಕೆಲವರಿಗೆ ಹಾವುಗಳೇ ದೇವರು. ನಮ್ಮ ಭೂಮಂಡಲದ ಅನೇಕ ಸೃಷ್ಟಿಗಳಲ್ಲಿ ಹಾವು ಕೂಡಾ ಒಂದು.

   ಅಯ್ಯೋ ಹಾವು...! ವಿಶ್ವ ಹಾವು ದಿನಕ್ಕೆ ಒಂದಷ್ಟು ವೈರಲ್ ವಿಡಿಯೋ!

   ಜಗದ ಜೀವರಾಶಿಗಳ ಕಾಲಚಕ್ರದಲ್ಲಿ ಕೀಟವನ್ನು ಇಲಿ, ಇಲಿಯನ್ನು ಹಾವು, ಹಾವನ್ನು ಹದ್ದು ಹೀಗೆ ಆಹಾರ ಪದ್ಧತಿಯಲ್ಲಿ ಒಂದನ್ನೊಂದು ಆಶ್ರಯಿಸಿಯೇ ಜೀವರಾಶಿಗಳು ಬದುಕಬೇಕು. ಆಯಾ ಜೀವರಾಶಿಗಳು ಸಸ್ಯಹಾರವೋ ಮಾಂಸಹಾರಿಯೋ, ಪರೋಪಕಾರಿಯೋ ಅಪಾಯಕಾರಿಯೋ ಹೀಗೆ ಒಂದನ್ನೊಂದು ಆಶ್ರಯಿಸಿಯೇ ಬದುಕಬೇಕು.

   13 ಅಡಿ ಕಾಳಿಂಗ ಸರ್ಪವನ್ನು ಚಾರ್ಮಾಡಿ ಘಾಟ್ ಗೆ ಬಿಟ್ಟ ಸ್ನೇಕ್ ಜಾಯ್

   ಈ ಕಾಲಚಕ್ರದಲ್ಲಿ ಎಲ್ಲ ಜೀವಿಗೂ ಒಂದೊಂದು ಮಹತ್ಚದ ಸ್ಥಾನವಿದೆ. ಈ ಪೈಕಿ ಯಾವುದಾದರೊಂದು ನಶಿಸಿ ಹೋದರೂ, ಮತ್ತೊಂದು ಬದುಕುವುದು ಕಷ್ಟವೇ ಅಂತಹ ಕಾಲ ಚಕ್ರದ ಸುಳಿಯಲ್ಲಿ ಹಾವುಗಳ ಅಸ್ತಿತ್ವವು ಅಷ್ಟೇ ಮುಖ್ಯ, ಭಾರತೀಯ ಸಂಸ್ಕೃತಿಯಲ್ಲಂತೂ ಹಾವಿಗೆ ದೈವಸ್ಥಾನವಿದೆ.

   ಈ ಜೀವಿ ಪರಿಸರದ ಸಮತೋಲನ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಅಸ್ತಿತ್ವದಿಂದ ಪರಿಸರಕ್ಕೆ ಅನೇಕ ಪ್ರಯೋಜನಗಳಿವೆ. ಹಾವುಗಳು ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿವೆ. ಮಾನವರ ಉಗಮಕ್ಕಿಂತ ಮುನ್ನ ಹಾವುಗಳೇ ಭೂಮಂಡಲವನ್ನು ಆಳುತ್ತಿದ್ದವು ಎಂದು ಹೇಳಲಾಗುತ್ತದೆ.

   ಸವದತ್ತಿಯಲ್ಲಿ ಹಾವುಗಳಿಗೆ ಸ್ವಂತ ಮನೆ ಬಿಟ್ಟ ಮಾಲೀಕ ಬಾಡಿಗೆ ಮನೆ ಪಾಲು!

   ಪುರಾಣಗಳಲ್ಲಿ ಹಾವುಗಳ ಕುರಿತಾದ ಹಲವಾರು ರೋಚಕ ಕಥೆಗಳಿವೆ. ಹಾವುಗಳಿಗೆ ಅತೀಂದ್ರಿಯ ಶಕ್ತಿಗಳಿವೆ, ಅವುಗಳದ್ದೇ ಆದ ಒಂದು ಲೋಕವಿದೆ, ಹಾವಿನ ದ್ವೇಷ ಹನ್ನೆರಡು ವರ್ಷಗಳಿರುತ್ತವೆ ಎಂಬಿತ್ಯಾದಿ ಮಾತುಗಳು ಈ ಜೀವಿಯ ಕುರಿತಾಗಿ ಒಂದು ರೀತಿಯ ಕುತೂಹಲವನ್ನು ಮೂಡಿಸುತ್ತದೆ.

   ಲಕ್ಷಾಂತರ ಉಪಜಾತಿಯ ಹಾವುಗಳು, ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಅಪಾಯದ ಅಂಚಿನಲ್ಲಿದೆ, ಹೆಚ್ಚುತ್ತಿರುವ ನಗರೀಕರಣ, ಕಡಿಮೆಯಾಗುತ್ತಿರುವ ಅರಣ್ಯ ಪ್ರದೇಶ ಹಾಗೂ ಮಾನವ ವಸತಿ ಪ್ರದೇಶಗಳು ಕಾಂಕ್ರೀಟೀಕರಣಗೊಳ್ಳುತ್ತಿರುವ ಕಾರಣ ಹಾವುಗಳ ಅಸ್ತಿತ್ವಕ್ಕೆ ಆತಂಕ ಎದುರಾಗಿರುವುದು ಸುಳ್ಳಲ್ಲ, ವಿವಿಧ ಜಾತಿಯ ಹಾವುಗಳು ಇಂದಿಗೂ ನಾವು ಬದುಕುವ ನೆಲದಲ್ಲೇ ಜಾಗೃತವಾಗಿದೆ.

    ಹಾವುಗಳದ್ದು ಪರಿಸರದ ಸಮತೋಲನ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ

   ಹಾವುಗಳದ್ದು ಪರಿಸರದ ಸಮತೋಲನ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ

   ಈ ಜೀವಿ ಪರಿಸರದ ಸಮತೋಲನ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಅಸ್ತಿತ್ವದಿಂದ ಪರಿಸರಕ್ಕೆ ಅನೇಕ ಪ್ರಯೋಜನಗಳಿವೆ. ಹಾವುಗಳು ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿವೆ. ಮಾನವರ ಉಗಮಕ್ಕಿಂತ ಮುನ್ನ ಹಾವುಗಳೇ ಭೂಮಂಡಲವನ್ನು ಆಳುತ್ತಿದ್ದವು ಎಂದು ಹೇಳಲಾಗುತ್ತದೆ. ಪುರಾಣಗಳಲ್ಲಿ ಹಾವುಗಳ ಕುರಿತಾದ ಹಲವಾರು ರೋಚಕ ಕಥೆಗಳಿವೆ. ಹಾವುಗಳಿಗೆ ಅತೀಂದ್ರಿಯ ಶಕ್ತಿಗಳಿವೆ, ಅವುಗಳದ್ದೇ ಆದ ಒಂದು ಲೋಕವಿದೆ, ಹಾವಿನ ದ್ವೇಷ ಹನ್ನೆರಡು ವರ್ಷಗಳಿರುತ್ತವೆ ಎಂಬಿತ್ಯಾದಿ ಮಾತುಗಳು ಈ ಜೀವಿಯ ಕುರಿತಾಗಿ ಒಂದು ರೀತಿಯ ಕುತೂಹಲವನ್ನು ಮೂಡಿಸುತ್ತದೆ.

   ಹಸಿದುಕೊಂಡು ಮನೆಗೆ ಬಂದಿದ್ದ ನಾಗರಹಾವು ನುಂಗಿದ್ದು 7 ಮೊಟ್ಟೆ!

    ಹಾವು ಕಚ್ಚಿದರೆ ಮರಣ ಖಚಿತ, ದೂರವಿರಿ ಎನ್ನುವವರೇ ಹೆಚ್ಚು

   ಹಾವು ಕಚ್ಚಿದರೆ ಮರಣ ಖಚಿತ, ದೂರವಿರಿ ಎನ್ನುವವರೇ ಹೆಚ್ಚು

   ಹಾವು ಕಚ್ಚಿದರೆ ಮರಣ ಖಚಿತ ಆದ್ದರಿಂದ ಹಾವುಗಳಿಂದ ದೂರವಿರಿ ಎಂಬ ಮಾತುಗಳಿಂದಾಗಿ ಬಹುತೇಕ ಜನರು ಹಾವುಗಳಿಂದ ದೂರವೇ ಉಳಿಯುತ್ತಾರೆ. ಆದರೆ ಹಾವು ತನಗೆ ತೊಂದರೆ ಉಂಟು ಮಾಡಿದವರಿಗೆ ಮಾತ್ರ ಕಚ್ಚುತ್ತದೆ. ಈ ಜಗತ್ತಿನಲ್ಲಿ ಹಾವನ್ನು ಪ್ರೀತಿಸುವವರೂ ಇದ್ದಾರೆ. ಇವರಿಗೆ ಹಾವಿನ ಆಹಾರ, ಜೀವನ ಕ್ರಮ, ಅದರ ವೈವಿಧ್ಯಗಳ ಬಗ್ಗೆ ತಿಳಿದುಕೊಳ್ಳಲು ಇನ್ನಿಲ್ಲದ ಆಸಕ್ತಿ. ವಿಶ್ವದ ಎಲ್ಲೆಡೆ ಸುತ್ತಾಡಿ ಇವರು ಹಾವಿನ ಕುರಿತಾದ ಹೊಸ ಹೊಸ ಮಾಹಿತಿಗಳನ್ನು ಕಲೆ ಹಾಕುತ್ತಾರೆ. ಇಂತಹ ಹಾವು ಪ್ರಿಯರೇ ಈ ಜೀವಿಗೊಂದು ವಿಶೇಷವಾದ ದಿನವನ್ನು ಗೊತ್ತು ಮಾಡಿದ್ದಾರೆ.

   ಹಾವನ್ನೇ ಹೂವಿನ ರೀತಿ ಕುತ್ತಿಗೆಗೆ ಹಾರ ಹಾಕಿಕೊಳ್ಳುವ ಪೋರ

    ಅಮೇರಿಕಾದಲ್ಲಿ ಮೊದಲು ಹಾವುಗಳ ದಿನ ಆಚರಣೆ

   ಅಮೇರಿಕಾದಲ್ಲಿ ಮೊದಲು ಹಾವುಗಳ ದಿನ ಆಚರಣೆ

   ಅಮೇರಿಕಾದಲ್ಲಿ 1967ನೇ ಇಸವಿಯಲ್ಲಿ ಸ್ನೇಕ್‌ ಫಾರ್ಮ್‌ ಎಂಬ ಸಂಸ್ಥೆ ಇಂಥದ್ದೊಂದು ದಿನಾಚರಣೆಯನ್ನು ಮೊದಲ ಬಾರಿಗೆ ಆಚರಿಸಿತು, ಈಗ ವಿಶ್ವದೆಲ್ಲೆಡೆ ವಿಶ್ವ ಹಾವುಗಳ ದಿನವನ್ನು ಆಚರಿಸಲಾಗುತ್ತದೆ. ಆ ದಿನವೇ ಜುಲೈ 16. ಈ ದಿನವನ್ನು ವರ್ಲ್ಡ್‌ ಸ್ನೇಕ್‌ ಡೇ ಎಂದು ಎಲ್ಲಾ ಕಡೆಗಳಲ್ಲಿ ಆಚರಿಸಲಾಗುತ್ತದೆ.

    ಮನುಷ್ಯ ಸಾಮಿಪ್ಯ ಬಯಸದೆ ಕಣ್ಣು ತಪ್ಪಿಸಿ ಬದುಕುವ ಹಾವುಗಳು

   ಮನುಷ್ಯ ಸಾಮಿಪ್ಯ ಬಯಸದೆ ಕಣ್ಣು ತಪ್ಪಿಸಿ ಬದುಕುವ ಹಾವುಗಳು

   ವಿಶ್ವ ಹಾವುಗಳ ದಿನ. ಪರಿಸರಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಹಾವುಗಳು, ಯಾವತ್ತೂ ಮನುಷ್ಯನ ಸಾಮಿಪ್ಯ ಬಯಸದ ಮತ್ತು ಕಣ್ಣು ತಪ್ಪಿಸಿ ಬದುಕುವ ಪರಿಸರ ಸ್ನೇಹಿ ಜೀವಿಗಳು. ಜೀವಿ ಸಂಕುಲದ ಆಹಾರ ಸರಪಳಿಯ ಒಂದು ವಿಶಿಷ್ಟ ಮತ್ತು ಗಟ್ಟಿಮುಟ್ಟಾದ ಸೂಕ್ಷ್ಮ ಕೊಂಡಿ ಹಾವುಗಳು.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   We may not love snakes, but they are co passengers of journey of our life. Today, July 16 is world snakes day. Why did the world celebrating this? Read the story.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more