ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳ ಪ್ರಧಾನಿಯಾಗಿ ದೇವುಬಾ ಪ್ರಮಾಣ ವಚನ ಸ್ವೀಕಾರ

|
Google Oneindia Kannada News

ಕಠ್ಮಂಡು, ಜುಲೈ 13: ನೇಪಾಳದ ಪ್ರಧಾನಿಯಾಗಿ ನೇಪಾಳಿ ಕಾಂಗ್ರೆಸ್ ಮುಖ್ಯಸ್ಥ ಶೇರ್ ಬಹದ್ದೂರ್ ದೇವುಬಾ ಅವರು ಮಂಗಳವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದರು.

ಮುಂದಿನ ಎರಡು ದಿನಗಳ ಒಳಗೆ ಶೇರ್ ಬಹದ್ದೂರ್ ದೇವುಬಾ ಅವರನ್ನು ಪ್ರಧಾನಿಯಾಗಿ ನೇಮಿಸುವಂತೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಚೋಳೇಂದ್ರ ಶುಮ್ಮರ್ ರಾಣಾ ನೇತೃತ್ವದ ಐದು ಸದಸ್ಯರ ಸಾಂವಿಧಾನಿಕ ಪೀಠ ಸೋಮವಾರ ಆದೇಶಿಸಿದ್ದು, ಮಂಗಳವಾರ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Sher Bahadur Deuba Sworn In As Prime Minister of Nepal

ರಾಷ್ಟ್ರಾಧ್ಯಕ್ಷರಾದ ವಿದ್ಯಾದೇವಿ ಭಂಡಾರಿ ಅವರು ತಮ್ಮನ್ನು ಪ್ರಧಾನಿಯಾಗಿ ನೇಮಿಸಿದ ನೋಟಿಸ್ ಪರಿಷ್ಕರಿಸುವವರೆಗೆ ಪ್ರತಿಜ್ಞಾ ವಿಧಿ ಸ್ವೀಕರಿಸುವುದಿಲ್ಲ ಎಂದು ಶೇರ್ ಬಹದ್ದೂರ್ ದೇವುಬಾ ಹೇಳಿದ್ದರು.

ಎರಡು ದಿನದಲ್ಲಿ ನೇಪಾಳದ ನೂತನ ಪ್ರಧಾನಿ ಆಯ್ಕೆಗೆ ಸುಪ್ರೀಂಕೋರ್ಟ್ ಸೂಚನೆ ಎರಡು ದಿನದಲ್ಲಿ ನೇಪಾಳದ ನೂತನ ಪ್ರಧಾನಿ ಆಯ್ಕೆಗೆ ಸುಪ್ರೀಂಕೋರ್ಟ್ ಸೂಚನೆ

ನಂತರ ಮಂಗಳವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ದೇವುಬಾ ಅವರು ಐದನೇ ಬಾರಿ ಪ್ರಧಾನಿಯಾಗಿದ್ದಾರೆ.

ಸೆಪ್ಟೆಂಬರ್ 1995ರಿಂದ ಮಾರ್ಚ್ 1997, ಜುಲೈ 2001ರಿಂದ ಅಕ್ಟೋಬರ್ 2002, ಜೂನ್ 2004ರಿಂದ ಫೆಬ್ರವರಿ 2005, ಜೂನ್ 2017ರಿಂದ ಫೆಬ್ರವರಿ 2018ರವರೆಗೆ ನಾಲ್ಕು ಬಾರಿ ನೇಪಾಳದ ಪ್ರಧಾನಿಯಾಗಿದ್ದರು. ಅಧಿಕಾರ ಸ್ವೀಕರಿಸುತ್ತಿದ್ದಂತೆ ಪ್ರಧಾನಿ ದೇವುಬಾ ಅವರು ಐದು ಸದಸ್ಯರ ಸಂಪುಟ ರಚನೆ ಮಾಡಿದ್ದಾರೆ.

English summary
Sher Bahadur Deuba sworn in as the Prime Minister of Nepal on tuesday evening
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X