ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking news; ಶೆಹಬಾಜ್ ಷರೀಫ್ ಪಾಕ್‌ ನೂತನ ಪ್ರಧಾನಿ

|
Google Oneindia Kannada News

ಇಸ್ಲಾಮಾಬಾದ್, ಏಪ್ರಿಲ್ 11; ಪಾಕಿಸ್ತಾನದ ನೂತನ ಪ್ರಧಾನಿಯಾಗಿ ವಿರೋಧ ಪಕ್ಷದ ನಾಯಕ ಶೆಹಬಾಜ್ ಷರೀಫ್ ಆಯ್ಕೆಯಾದರು. ಪಾಕ್ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ವಿಶ್ವಾಸ ಮತದಲ್ಲಿ ಸೋಲು ಕಂಡು ಪಟ್ಟ ಕಳೆದುಕೊಂಡಿದ್ದರು.

ಸೋಮವಾರ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಆಯ್ಕೆಯಾದರು. ಅವಿರೋಧವಾಗಿ ಶೆಹಬಾಜ್ ಷರೀಫ್ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಶೆಹಬಾಜ್ ಷರೀಫ್ ಮತ್ತು ಅವರ ಪುತ್ರನ ಹೆಸರು ಮನಿ ಲಾಂಡ್ರಿಗ್ ಪ್ರಕರಣದಲ್ಲಿ ಕೇಳಿ ಬಂದಿತ್ತು.

Imran Khan : ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್: ಕ್ರಿಕೆಟ್, ರಾಜಕೀಯ ಜೀವನದ ಏರಿಳಿತImran Khan : ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್: ಕ್ರಿಕೆಟ್, ರಾಜಕೀಯ ಜೀವನದ ಏರಿಳಿತ

ಭಾನುವಾರ ಪಾಕಿಸ್ತಾನ ರಾಜಕೀಯದಲ್ಲಿ ನಡುರಾತ್ರಿ ಹೈಡ್ರಾಮ ನಡೆದಿತ್ತು. ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯದ ಪರವಾಗಿ 174 ಜನರು ಮತ ಚಲಾವಣೆ ಮಾಡಿದ್ದರು.

ಭಾರತವನ್ನು ಹಾಡಿ ಹೊಗಳಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್! ಭಾರತವನ್ನು ಹಾಡಿ ಹೊಗಳಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್!

Shehbaz Sharif Elected As Pakistan New Prime Minister

ಸೋಮವಾರ ನೂತನ ಪ್ರಧಾನಿಯನ್ನು ಆಯ್ಕೆ ಮಾಡಲು ಪಾಕಿಸ್ತಾನದ ರಾಷ್ಟ್ರೀಯ ಸಂಸತ್ ಸಭೆ ಸೇರಿತ್ತು. ಭಾನುವಾರ ವಿಶ್ವಾಸ ಮತದಲ್ಲಿ ಇಮ್ರಾನ್ ಖಾನ್ ಸೋಲು ಕಂಡ ಬಳಿಕ ಹೊಸ ಪ್ರಧಾನಿ ಆಯ್ಕೆಯ ಪ್ರಕ್ರಿಯೆ ಆರಂಭವಾಗಿತ್ತು.

 ಪಾಕಿಸ್ತಾನ ಸಂಸತ್ತು ವಿಸರ್ಜನೆ, ಹೊಸ ಚುನಾವಣೆ: ಇಲ್ಲಿದೆ ಪ್ರಮುಖ 10 ಬೆಳವಣಿಗೆ ಪಾಕಿಸ್ತಾನ ಸಂಸತ್ತು ವಿಸರ್ಜನೆ, ಹೊಸ ಚುನಾವಣೆ: ಇಲ್ಲಿದೆ ಪ್ರಮುಖ 10 ಬೆಳವಣಿಗೆ

70 ವರ್ಷದ ಶೆಹಬಾಜ್ ಷರೀಫ್ ಪಾಕಿಸ್ತಾನದ ಮೂರು ಬಾರಿಯ ಪ್ರಧಾನಿ ನವಾಝ್ ಷರೀಫ್ ಸಹೋದರ. ಇಮ್ರಾನ್ ಖಾನ್ ಸರ್ಕಾರವನ್ನು ಪತನಗೊಳಿಸುವಲ್ಲಿ ಶೆಹಬಾಜ್ ಪ್ರಮುಖ ಪಾತ್ರವಹಿಸಿದ್ದರು.

ಪಾಕಿಸ್ತಾನದ ಸೇನೆಯ ಜೊತೆ ಶೆಹಬಾಜ್ ಷರೀಫ್ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಪಾಕಿಸ್ತಾನದ ವಿದೇಶಾಂಗ ನೀತಿ, ರಕ್ಷಣಾ ನೀತಿ ವಿಚಾರದಲ್ಲಿ ಅವರು ಮೊದಲಿನಿಂದಲೂ ಹಿಡಿತ ಹೊಂದಿದ್ದರು.

Recommended Video

Bhuvneshwar Kumar ಮೊದಲನೇ ಓವರ್‌ನಲ್ಲೇ ದೊಡ್ಡ ಎಡವಟ್ಟು | Oneindia Kannada

ಪಾಕಿಸ್ತಾನದ ಸೇನೆಯ ಜನರಲ್‌ಗಳು ಸರ್ಕಾರವನ್ನು ಪತನಗೊಳಿಸುವ ಕಾರ್ಯದಲ್ಲಿ ಮೊದಲಿನಿಂದಲೂ ಕೈ ಜೋಡಿಸಿದ್ದಾರೆ. 1947ರ ಬಳಿಕ ಯಾವುದೇ ಪ್ರಧಾನಿ ದೇಶದಲ್ಲಿ ಪೂರ್ಣಾವಧಿ ಅಧಿಕಾರ ಅನುಭವಿಸಿಲ್ಲ.

English summary
Shehbaz Sharif Elected As Pakistan New Prime Minister. Shehbaz Sharif leader of opposition at Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X