ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಫ್ರಿಕಾದಲ್ಲಿ ಮಹಿಳೆ ಕೊಂದ ಕುರಿಗೆ ಮೂರು ವರ್ಷ ಜೈಲು ಶಿಕ್ಷೆ

|
Google Oneindia Kannada News

ವಿಲಕ್ಷಣ ಪ್ರಕರಣವೊಂದರಲ್ಲಿ ದಕ್ಷಿಣ ಸುಡಾನ್‌ನಲ್ಲಿ ಕುರಿಯೊಂದು ಮಹಿಳೆಯನ್ನು ಕೊಂದ ಆರೋಪ ಸಾಬೀತಾದ ನಂತರ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಸುಡಾನ್‌ನ ಐ ರೇಡಿಯೊ ಪ್ರಕಾರ, ಈ ತಿಂಗಳ ಆರಂಭದಲ್ಲಿ ದಕ್ಷಿಣ ಸುಡಾನ್‌ನಲ್ಲಿ 45 ವರ್ಷದ ಅದಿಯು ಚಾಪಿಂಗ್ ಎಂಬ ಮಹಿಳೆ ಮೇಲೆ ದಾಳಿ ಮಾಡಿದ ಕುರಿಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಚಾಪಿಂಗ್‌ಗೆ ಕುರಿ ಪದೇ ಪದೇ ತಲೆಬಾಗಿಸಿ ಗುದ್ದಿ ಆಕೆಯ ಪಕ್ಕೆಲುಬುಗಳನ್ನು ಮುರಿದಿತ್ತು. 45 ವರ್ಷದ ಮಹಿಳೆ ಗಾಯಗೊಂಡಿದ್ದರಿಂದ ತಕ್ಷಣವೇ ಸಾವನ್ನಪ್ಪಿದ್ದಾರೆ.

ಯೋಗಿ ವಿರುದ್ಧ ಪೋಸ್ಟ್: ಬಾಲಕನಿಗೆ ಇದೆಂಥ ಶಿಕ್ಷೆ?ಯೋಗಿ ವಿರುದ್ಧ ಪೋಸ್ಟ್: ಬಾಲಕನಿಗೆ ಇದೆಂಥ ಶಿಕ್ಷೆ?

ರುಂಬೆಕ್ ಪೂರ್ವದಲ್ಲಿ ಅಕುಯೆಲ್ ಯೋಲ್ ಎಂಬ ಸ್ಥಳದಲ್ಲಿ ಈ ಘಟನೆ ನಡೆದಿದೆ. ಮಾಲೆಂಗ್ ಆಗೋಕ್ ಪಾಯಂನ ಪೊಲೀಸ್ ಠಾಣೆಯಲ್ಲಿ ಕುರಿಯನ್ನು ಬಂಧಿಸಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಮಾಧ್ಯಮದೊಂದಿಗೆ ಮಾತನಾಡಿದ ಮೇಜರ್ ಎಲಿಜಾ ಮಾಬೋರ್, "ಕುರಿ ಮಾಲೀಕ ಮುಗ್ಧ. ಅದರ ಅಪರಾಧವನ್ನು ಮಾಲೀಕನಿಗೆ ಹಾಕಲಾಗದು. ಆದ್ದರಿಂದ ಕುರಿ ಬಂಧಿಸಲು ಅರ್ಹನಾಗಿದ್ದಾನೆ'' ಎಂದಿದ್ದಾರೆ.

Sheep jailed for murdering woman in Africa

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಕುರಿ ಮುಂದಿನ ಮೂರು ವರ್ಷಗಳ ಕಾಲ ಸುಡಾನ್‌ನ ಲೇಕ್ಸ್ ಸ್ಟೇಟ್‌ನಲ್ಲಿರುವ ಅಡ್ಯುಯೆಲ್ ಕೌಂಟಿಯ ಪ್ರಧಾನ ಕಚೇರಿಯಲ್ಲಿ ಮಿಲಿಟರಿ ಶಿಬಿರದಲ್ಲಿ ಕಳೆಯಲಿದೆ ಎಂದು ತಿಳಿದುಬಂದಿದೆ. ಜೊತೆಗೆ ಕುರಿಯ ಮಾಲೀಕ ಡುಯೋನಿ ಮಾನ್ಯಂಗ್ ಧಾಲ್ ಕೂಡ ಐದು ಹಸುಗಳನ್ನು ಸಂತ್ರಸ್ತ ಕುಟುಂಬಕ್ಕೆ ಹಸ್ತಾಂತರಿಸಬೇಕೆಂದು ಸ್ಥಳೀಯ ನ್ಯಾಯಾಲಯವು ತೀರ್ಪು ನೀಡಿದೆ.

ಮದುವೆ ವೇಳೆ ಕಳಚಿ ಬಿದ್ದ ವರನ ವಿಗ್: ಪ್ರಜ್ಞೆ ತಪ್ಪಿದ ವಧುಮದುವೆ ವೇಳೆ ಕಳಚಿ ಬಿದ್ದ ವರನ ವಿಗ್: ಪ್ರಜ್ಞೆ ತಪ್ಪಿದ ವಧು

ಇದಲ್ಲದೆ, ಧಲ್ ತನ್ನ ಶಿಕ್ಷೆಯ ಕೊನೆಯಲ್ಲಿ ಕುರಿಯನ್ನು ಕಳೆದುಕೊಳ್ಳುತ್ತಾನೆ. ಏಕೆಂದರೆ ಪ್ರದೇಶದ ಸಾಂಪ್ರದಾಯಿಕ ಕಾನೂನುಗಳು ವ್ಯಕ್ತಿಯನ್ನು ಕೊಲ್ಲುವ ಯಾವುದೇ ಸಾಕುಪ್ರಾಣಿಗಳನ್ನು ಸತ್ತವರ ಕುಟುಂಬಕ್ಕೆ ನೀಡಲಾಗುತ್ತದೆ ಎಂದು ಹೇಳುತ್ತದೆ. ಕುರಿಯ ಮಾಲೀಕರು ಮತ್ತು ಸಂತ್ರಸ್ತ ಕುಟುಂಬ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಕುರಿಯಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ಅಮೇರಿಕಾದಲ್ಲಿ ಮಹಿಳೆಯೊಬ್ಬರು ಕೂಡ ಜಮೀನಿನಲ್ಲಿ ಕುರಿಗಳ ದಾಳಿಯಿಂದ ಸಾವನ್ನಪ್ಪಿದರು. ಮಾಧ್ಯಮದ ಪ್ರಕಾರ, 73 ವರ್ಷದ ಕಿಮ್ ಟೇಲರ್ ಮಸಾಚುಸೆಟ್ಸ್‌ನ ಬೋಲ್ಟನ್‌ನಲ್ಲಿರುವ ಕಲ್ಟಿವೇಟ್ ಕೇರ್ ಫಾರ್ಮ್‌ನಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದಾಗ, ಅವರು ಕುರಿ ದಾಳಿಯಿಂದ ತೀವ್ರವಾಗಿ ಗಾಯಗೊಂಡರು. ತುರ್ತು ಸೇವೆಗಳು ಸ್ಥಳಕ್ಕೆ ಬಂದ ಸ್ವಲ್ಪ ಸಮಯದ ನಂತರ ಅವರು ಹೃದಯ ಸ್ತಂಭನಕ್ಕೆ ಒಳಗಾಗಿದ್ದರು.

(ಒನ್ಇಂಡಿಯಾ ಸುದ್ದಿ)

English summary
A South Sudan Sheep has been sentenced to three years in prison after being found guilty of killing a woman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X