ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಕೋವಿಡ್; ಲಾಕ್‌ಡೌನ್‌ ನಿಯಮ ಕಠಿಣಗೊಳಿಸಿದ ಶಾಂಘೈ

|
Google Oneindia Kannada News

ಬೀಜಿಂಗ್, ಏಪ್ರಿಲ್ 22; ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಹಿನ್ನಲೆಯಲ್ಲಿ ಶುಕ್ರವಾರ ಶಾಂಘೈ ಕಠಿಣ ಲಾಕ್‌ಡೌನ್‌ ನಿಯಮಗಳನ್ನು ಘೋಷಣೆ ಮಾಡಿದೆ. ನಗರದಾದ್ಯಂತ ಪರೀಕ್ಷೆಗಳನ್ನು ಮಾಡುವುದಾಗಿ ಹೇಳಿದೆ.

ಶಾಂಘೈ ಸರ್ಕಾರ ವಿ-ಚಾಟ್ ಮೂಲಕ ಶುಕ್ರವಾರ ಈ ಕುರಿತು ಮಾಹಿತಿ ನೀಡಿದೆ. ನಗರದ ಸಾಂಕ್ರಾಮಿಕದ ಪರಿಸ್ಥಿತಿ ಸಕಾತ್ಮಕ ಮಟ್ಟದಲ್ಲಿ ಸಾಗುತ್ತಿದೆ. ಸೋಂಕು ಹತೋಟಿಗೆ ಬರುವ ತನಕ ಕಠಿಣ ನಿಯಮ ಅನಿವಾರ್ಯವಾಗಿದೆ ಎಂದು ತಿಳಿಸಿದೆ.

ಮಾಡಿದ್ದುಣ್ಣೋ ಮಹರಾಯ: ಕೊರೊನಾವೈರಸ್ ಕಾಲದಲ್ಲಿ ಜಗತ್ತಿನ ಎದುರು ಮತ್ತೆ ಮುಗ್ಗರಿಸಿದ ಚೀನಾ!? ಮಾಡಿದ್ದುಣ್ಣೋ ಮಹರಾಯ: ಕೊರೊನಾವೈರಸ್ ಕಾಲದಲ್ಲಿ ಜಗತ್ತಿನ ಎದುರು ಮತ್ತೆ ಮುಗ್ಗರಿಸಿದ ಚೀನಾ!?

ಜನರು ಮನೆಯಲ್ಲಿಯೇ ಇದ್ದು, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದರೆ ಸೋಂಕು ಹರಡುವಿಕೆ ಕಡಿಮೆಯಾಗಲಿದೆ. ಸೋಂಕಿನ ಪ್ರಮಾಣ ಕಡಿಮೆಯಾದರೆ ನಿಯಮಗಳನ್ನು ಸಡಿಲಿಸಲಾಗುತ್ತದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಕೋವಿಡ್ ನಾಲ್ಕನೇ ಅಲೆ?, ತಜ್ಞರು ಹೇಳುವುದು ಹೀಗೆ...ಬೆಂಗಳೂರಿನಲ್ಲಿ ಕೋವಿಡ್ ನಾಲ್ಕನೇ ಅಲೆ?, ತಜ್ಞರು ಹೇಳುವುದು ಹೀಗೆ...

Shanghai Announces Strict Lockdown Enforcement In COVID Fight

ಶಾಂಘೈನಿಂದ ಅಕ್ಕ-ಪಕ್ಕದ ಜಿಲ್ಲೆಗಳಿಗೆ ಸಹ ಭೇಟಿ ನೀಡಲು ನಿಷೇಧ ಹೇರಲಾಗಿದೆ. ಕೋವಿಡ್ ಪ್ರಕರಣಗಳ ಸಂಖ್ಯೆ ಶೂನ್ಯಕ್ಕೆ ತಲುಪಿಸುವುದು ನಮ್ಮ ಗುರಿಯಾಗಿದೆ. ಏಪ್ರಿಲ್ 1ರಿಂದಲೇ ಶಾಂಘೈ ನಗರ ಜನರನ್ನು ಮನೆಯಲ್ಲಿಯೇ ಇರುವಂತೆ ಸೂಚಿಸಿತ್ತು. ಆದರೆ ಸರ್ಕಾರದ ವಿರುದ್ಧ ಜನರು ಬೀದಿಗಿಳಿದಿದ್ದರು.

Breaking; ಹೊಸ ಕೋವಿಡ್ ಪ್ರಕರಣ ಹೆಚ್ಚಳ; ಇದು 4ನೇ ಅಲೆ ಅಲ್ಲ Breaking; ಹೊಸ ಕೋವಿಡ್ ಪ್ರಕರಣ ಹೆಚ್ಚಳ; ಇದು 4ನೇ ಅಲೆ ಅಲ್ಲ

ಕಳೆದ ಗುರುವಾರ ಕೋವಿಡ್ ಹಡುವಿಕೆ ತಡೆಗೆ 9 ಅಂಶಗಳ ಮಾರ್ಗಸೂಚಿಯನ್ನು ಶಾಂಘೈ ಪ್ರಕಟಿಸಿತ್ತು. ಶುಕ್ರವಾರ 8 ಅಂಶಗಳ ಹೊಸ ಮಾರ್ಗಸೂಚಿಯನ್ನು ಘೋಷಣೆ ಮಾಡಿದೆ.

ಶಾಂಘೈ ಚೀನಾದ ವಾಣಿಜ್ಯ ನಗರಿಯಾಗಿದೆ. ನಗರದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಮಂಗಳವಾರ 7 ಸೋಂಕಿತರು ಮೃತಪಟ್ಟಿದ್ದರು. ಆ ಮೂಲಕ ಒಟ್ಟು ಸಾವಿನ ಸಂಖ್ಯೆ 17ಕ್ಕೆ ಏರಿಕೆಯಾಗಿತ್ತು.

ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗದ ಮಾಹಿತಿ ಪ್ರಕಾರ ದೇಶದಲ್ಲಿ 2,700ಕ್ಕೂ ಅಧಿಕ ಹೊಸ ಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ. ಇವುಗಳಲ್ಲಿ 2500ರಷ್ಟು ಪ್ರಕರಣಗಳು ಶಾಂಘೈ ನಗರವೊಂದರಲ್ಲಿಯೇ ದಾಖಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕಠಿಣ ಲಾಕ್‌ಡೌನ್ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ.

English summary
After new Covid case showing positive trend Shanghai announced strict lockdown enforcement and city wide testing warning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X