ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾರುಖ್‌ರನ್ನು ಬಂಧಿಸಿದ್ದಕ್ಕಾಗಿ ಕ್ಷಮೆ ಕೇಳಿದ ಅಮೆರಿಕ

By Prasad
|
Google Oneindia Kannada News

ಲಾಸ್ ಏಂಜಲಿಸ್ , ಆಗಸ್ಟ್ 12 : ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಅವರು ಅಮೆರಿಕದಲ್ಲಿ ಮತ್ತೆ ಬಂಧನಕ್ಕೊಳಗಾಗಿದ್ದಾರೆ!

ವಿಚಾರಣೆಯ ನೆಪದಲ್ಲಿ ಲಾಸ್ ಏಂಜಲಿಸ್ ವಿಮಾನ ನಿಲ್ದಾಣದಲ್ಲಿ ಗುರುವಾರ ರಾತ್ರಿ ಶಾರುಖ್ ಖಾನ್ ಅವರನ್ನು ಅಮೆರಿಕದ ಇಮಿಗ್ರೇಷನ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

ಶಾರುಖ್ ಅಮೆರಿಕದಲ್ಲಿ ಬಂಧನಕ್ಕೊಳಗಾಗಿರುವುದು ಇದು ಮೊದಲೇನಲ್ಲ. 2012ರಲ್ಲಿ ನ್ಯೂಯಾರ್ಕ್ ನಲ್ಲಿ ಕೂಡ ಅವರನ್ನು ಇಮಿಗ್ರೇಷನ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದರು. ಸುಮಾರು ಎರಡು ಗಂಟೆಗಳ ಕಾಲ ಅವರ ವಿಚಾರಣೆ ನಡೆಸಿದ್ದರು. [ಅಸಹಿಷ್ಣುತೆ ಮಾತಾಡಿದ್ದ ಶಾರುಖ್ ದಿಲ್ವಾಲೆಗೆ ಚಲ್ ರೇ ಎಂದ ಪ್ರೇಕ್ಷಕ!]

Shah Rukh Khan detained again in Los Angeles

ಈಗ ಮತ್ತೆ ಬಂಧಿತನಾಗಿರುವುದಕ್ಕೆ ಅವರು ಟ್ವಿಟ್ಟರ್ ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಭದ್ರತೆಯ ಬಗ್ಗೆ ನನಗೆ ಗೌರವವಿದೆ. ಆದರೆ, ಪ್ರತೀಬಾರಿ ಬಂಧಿತನಾಗುತ್ತಿರುವುದಕ್ಕೆ ಬೇಸರವಿದೆ ಎಂದು ಅವರು ಹೇಳಿದ್ದಾರೆ.

ಕ್ಷಮೆ ಕೋರಿದ ಅಮೆರಿಕ : ಶಾರುಖ್ ಖಾನ್ ಅವರನ್ನು ಬಂಧಿಸಿ, ಅನಗತ್ಯವಾಗಿ ವಿಚಾರಣೆ ನಡೆಸಿದ್ದಕ್ಕಾಗಿ ಅಮೆರಿಕ ಕ್ಷಮೆ ಕೇಳಿದೆ. ಅಮೆರಿಕದ ವಿದೇಶಾಂಗ ಖಾತೆಯ ದಕ್ಷಿಣ ಹಾಗೂ ಮಧ್ಯ ಏಷ್ಯಾ ರಾಷ್ಟ್ರಗಳೊಂದಿಗಿನ ವ್ಯವಹಾರಗಳ ಸಹಾಯಕ ಕಾರ್ಯದರ್ಶಿಯಾಗಿರುವ ನಿಶಾ ಬಿಸ್ವಾಲ್ ಅವರು ಶಾರುಖ್ ಅವರ ಕ್ಷಮೆ ಕೋರಿ ಟ್ವೀಟ್ ಮಾಡಿದ್ದಾರೆ. [ಶಾರುಖ್ ಅಸಹಿಷ್ಣುತೆ ಬಗ್ಗೆ ಯಾರು ಏನು ಹೇಳಿದರು?]

English summary
Bollywood star Shar Rukh Khan again detained at US immigration in Los Angeles on Thursday evening for questioning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X