ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಷ್ಮಾ ಸ್ವರಾಜ್ ಭಾಗವಹಿಸಿದ್ದಕ್ಕೆ, OIC ಸಭೆ ಬಹಿಷ್ಕರಿಸಿದ ಪಾಕಿಸ್ತಾನ

|
Google Oneindia Kannada News

ಇಸ್ಲಾಮಾಬಾದ್, ಮಾರ್ಚ್ 01: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾಗವಹಿಸುತ್ತಿರುವ ಕಾರಣಕ್ಕಾಗಿ ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಶನ್(OIC) ಸಭೆಯನ್ನು ಪಾಕಿಸ್ತಾನ ಬಹಿಷ್ಕರಿಸಿದೆ. 'ನಾವು OIC ಸಭೆಯಲ್ಲಿ ಭಾಗವಹಿಸುವುದಿಲ್ಲ' ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ ಸ್ಪಷ್ಟಪಡಿಸಿದ್ದಾರೆ.

ಅಭಿನಂದನ್ ಬಿಡುಗಡೆ ಬಳಿಕ ಭಾರತ ಮತ್ತೆ ದಾಳಿ ಮಾಡಿದ್ರೆ: ಪಾಕ್ ಅಳಲು ಅಭಿನಂದನ್ ಬಿಡುಗಡೆ ಬಳಿಕ ಭಾರತ ಮತ್ತೆ ದಾಳಿ ಮಾಡಿದ್ರೆ: ಪಾಕ್ ಅಳಲು

ಭಾರತ OIC ಸದಸ್ಯ ರಾಷ್ಟ್ರವಲ್ಲದಿದ್ದರೂ ಅಬುಧಾಬಿಯಲ್ಲಿ ನಡೆಯಲಿರುವ ಸಭೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಗೌರವ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಈ ವಿಷಯ ತಿಳಿಯುತ್ತಿದ್ದತೆಯೇ, OIC ಸದಸ್ಯರಾಷ್ಟ್ರವಾಗಿರುವ ಪಾಕಿಸ್ತಾನ ಸಭೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದೆ.

57 ಇಸ್ಲಾಮಿಕ್ ದೇಶಗಳಲ ಬಹು ಮಹತ್ವದ ಸಂಘಟನೆ ಇದಾಗಿದ್ದು, ಸಭೆಯೂ ಅತ್ಯಂತ ಪ್ರಮುಖವಾದುದು. ಆದರೆ ಪಾಕಿಸ್ತಾನ ಈ ಸಭೆಗೆ ಬಹಿಷ್ಕಾರ ಹಾಕುವ ಮೂಲಕ ಹಲವು ಇಸ್ಲಾಮಿಕ್ ರಾಷ್ಟ್ರಗಳ ಕೆಂಗಣ್ಣಿಗೂ ಗುರಿಯಾಗುವ ಸಂಭವವಿದೆ.

Shah Mahmood Qureshinot attending foriegn ministers meet in Abu Dhabi

ಸುಷ್ಮಾ ಸ್ವರಾಜ್ ಅವರು ಸಭೆಯಲ್ಲಿ ಮಾತನಾಡಿ, ಪುಲ್ವಾಮಾ ದಾಳಿಯ ಬಗ್ಗೆ ಉಲ್ಲೇಖಿಸಿದರೆ ಮತ್ತು ಭಯೋತ್ಪಾದನೆಗೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿರುವುದನ್ನು ಪುನರುಚ್ಚರಿಸಿದರೆ ಮುಜುಗರಕ್ಕೀಡಾಗಬೇಕಾಗಬಹುದು ಎಂಬ ಎಚ್ಚರಿಕೆಯಲ್ಲಿ ಪಾಕಿಸ್ತಾನ ಈ ನಡೆ ಇಟ್ಟಿದೆ.

ಅಭಿನಂದನ್ ಬಿಡುಗಡೆ LIVE: ವಿಂಗ್ ಕಮಾಂಡರ್ ಆಗಮನಕ್ಕೆ ದೇಶದೆಲ್ಲೆಡೆ ಕಾತರಅಭಿನಂದನ್ ಬಿಡುಗಡೆ LIVE: ವಿಂಗ್ ಕಮಾಂಡರ್ ಆಗಮನಕ್ಕೆ ದೇಶದೆಲ್ಲೆಡೆ ಕಾತರ

ಪಾಕಿಸ್ತಾನ ಭಾಗವಹಿಸದೇ ಇದ್ದರೂ ಸುಷ್ಮಾ ಸ್ವರಾಜ್ ಅವರು ಭಯೋತ್ಪಾದನೆಗೆ ಸಂಬಂಧಿಸಿದ ವಿಷಯವನ್ನು ಮತ್ತು ಸದ್ಯಕ್ಕೆ ಭಾರತ ಮತ್ತು ಪಾಕಿಸ್ತಾನದ ನಡುವೆ ಎದ್ದಿರುವ ಪ್ರಕ್ಷುಬ್ಧ ಸನ್ನಿವೇಶಗಳನ್ನೂ ತಮ್ಮ ಭಾಷಣದ ಸಂದರ್ಭದಲ್ಲಿ ಉಲ್ಲೇಖಿಸುವ ಸಾಧ್ಯತೆ ಇದ್ದೇ ಇದೆ.

English summary
Pakistan foreign minister Shah Mahmood Qureshi has announced that he will not attend the foreign ministers' meet of the Organisation of Islamic Cooperation (OIC) states over the invitation extended to external affairs minister Sushma Swaraj.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X