ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್‌ ಸಮಯದಲ್ಲಿ ಮೂರರಷ್ಟು ಹೆಚ್ಚಾಗಿದೆ ಸೆಕ್ಸ್ ಟಾಯ್ಸ್ ಮಾರಾಟ

|
Google Oneindia Kannada News

ವೆಲ್ಲಿಂಗ್ಟನ್, ಏಪ್ರಿಲ್ 09: ನ್ಯೂಜಿಲ್ಯಾಂಡ್‌ನಲ್ಲಿಯೂ ಕೊರೊನಾ ವೈರಸ್‌ ತಡೆಗೆ ಲಾಕ್‌ಡೌನ್‌ ಕ್ರಮವನ್ನು ತೆಗೆದುಕೊಳ್ಳಲಿದೆ. ಲಾಕ್‌ಡೌನ್ ಸಮಯದಲ್ಲಿ ಅಲ್ಲಿ ಸೆಕ್ಸ್ ಟಾಯ್ಸ್ ಮಾರಾಟ ಮೂರರಷ್ಟು ಹೆಚ್ಚಾಗಿದೆ.

ಮಾರ್ಚ್ 25 ರಂದು ನ್ಯೂಜಿಲ್ಯಾಂಡ್‌ನಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿತ್ತು. ಸದ್ಯ ಅಲ್ಲಿ ಎರಡು ವಾರಗಳ ಲಾಕ್‌ಡೌನ್ ಮುಗಿದಿದ್ದು, ಇನ್ನು ಎರಡು ವಾರಗಳು ಲಾಕ್‌ಡೌನ್ ಮುಂದುವರೆಯಲಿದೆ ಎಂದು ಸರ್ಕಾರ ಜನರಿಗೆ ತಿಳಿಸಿದೆ. ಲಾಕ್‌ ಡೌನ್‌ ಸಮಯದಲ್ಲಿ ಅನಗತ್ಯ ಓಡಾಟಕ್ಕೆ ನಿರ್ಬಂಧ ಹಾಕಿದ್ದು, ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದೆ.

ಕೊರೊನಾದಿಂದ ಕಾಂಡೋಮ್ ಮಾರಾಟದಲ್ಲಿ ಭಾರಿ ಏರಿಕೆ ಕೊರೊನಾದಿಂದ ಕಾಂಡೋಮ್ ಮಾರಾಟದಲ್ಲಿ ಭಾರಿ ಏರಿಕೆ

ಲಾಕ್‌ ಡೌನ್ ಸಮಯದಲ್ಲಿ ನಿರ್ಬಂಧಗಳ ನಡುವೆಯೂ ಅಲ್ಲಿ ಸೆಕ್ಸ್ ಆಟಿಕೆಗಳ ಮಾರಾಟ ಹೆಚ್ಚಾಗಿದೆ. ಲಾಕ್‌ಡೌನ್‌ನಿಂದ ಮನೆಯಲ್ಲಿಯೇ ಇರಬೇಕಾದ ಅನಿವಾರ್ಯತೆ ಎದುರಾಗಿದೆ. ಈ ವೇಳೆ ಹೆಚ್ಚು ಮಂದಿ ಸಮಯ ಕಳೆಯಲು ಸೆಕ್ಸ್‌ ಮೊರೆ ಹೋಗಿದ್ದಾರೆ. ಸೆಕ್ಸ್ ಆಡಿಕೆಗಳ ಮಾರಾಟ ದಿಡೀರ್ ಹೆಚ್ಚಾಗಿದೆ.

48 ಗಂಟೆಗಳಲ್ಲಿ ಹೆಚ್ಚಿನ ಮಾರಾಟ

48 ಗಂಟೆಗಳಲ್ಲಿ ಹೆಚ್ಚಿನ ಮಾರಾಟ

ನ್ಯೂಜಿಲ್ಯಾಂಡ್‌ನಲ್ಲಿ ಮಾರ್ಚ್ 25 ರಿಂದ ಲಾಕ್‌ಡೌನ್ ಜಾರಿಗೆ ಬಂದಿದೆ. ಆದರೆ, ಸರ್ಕಾರ ಲಾಕ್‌ಡೌನ್ ವಿಷಯ ತಿಳಿಸಿದ 48 ಗಂಟೆಗಳಲ್ಲಿ ಸೆಕ್ಸ್ ಟಾಯ್ಸ್ ಮಾರಾಟ ಹೆಚ್ಚಾಗಿದೆ. ಲಾಕ್‌ಡೌನ್‌ ಸಮಯದಲ್ಲಿ ಸೆಕ್ಸ್ ಟಾಯ್ಸ್ ಮೂರುಪಟ್ಟು ಜಾಸ್ತಿ ಮಾರಾಟ ಆಗಿವೆ. ಆಹಾರ, ಮನೆಗೆ ಅಗತ್ಯ ವಸ್ತುಗಳ ಜೊತೆಗೆ ಅಲ್ಲಿನ ಜನರು ಸೆಕ್ಸ್ ಟಾಯ್ಸ್‌ಗಳನ್ನು ಸಹ ಕೊಂಡುಕೊಂಡಿದ್ದಾರೆ.

ಹೊಸದಾಗಿ ಕೊಂಡುಕೊಂಡವರೇ ಹೆಚ್ಚು

ಹೊಸದಾಗಿ ಕೊಂಡುಕೊಂಡವರೇ ಹೆಚ್ಚು

ಸೆಕ್ಸ್ ಟಾಯ್ಸ್ ದಿಡೀರ್ ಮಾರಾಟದ ಏರಿಕೆ ಬಗ್ಗೆ ನ್ಯೂಜಿಲ್ಯಾಂಡ್‌ನ ಸೆಕ್ಸ್ ಟಾಯ್ಸ್ ಅಂಗಡಿಯೊಂದರ ಮಾಲೀಕರು ಮಾತನಾಡಿದ್ದಾರೆ. ಲಾಕ್‌ಡೌನ್‌ ಘೋಷಣೆ ಆದಾಗ ಅನೇಕರು ಅಂಗಡಿಗೆ ಬಂದು ಸೆಕ್ಸ್ ಟಾಯ್ಸ್ ಖರೀದಿ ಮಾಡಿದರು. ಅವರಲ್ಲಿ ಅಧಿಕ ಸಂಖ್ಯೆಯಲ್ಲಿ ಹೊಸಬರು ಹಾಗೂ ಮೊದಲ ಬಾರಿಗೆ ಬಳಕೆ ಮಾಡುವವರು ಇದ್ದರು ಎಂದಿದ್ದಾರೆ. ಮೊದಲ ಬಾರಿಗೆ ಬಳಸುವ ಸೆಕ್ಸ್ ಆಡಿಕೆಗಳು ಹೆಚ್ಚು ಮಾರಾಟ ಆಗಿವೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಲೈಂಗಿಕತೆ: ಕೌಟುಂಬಿಕ ಆರೋಗ್ಯ ಸಮೀಕ್ಷೆ ಹೇಳುವುದು ಹೀಗೆಭಾರತದಲ್ಲಿ ಲೈಂಗಿಕತೆ: ಕೌಟುಂಬಿಕ ಆರೋಗ್ಯ ಸಮೀಕ್ಷೆ ಹೇಳುವುದು ಹೀಗೆ

ಕಾರಣ ಏನು?

ಕಾರಣ ಏನು?

ಲಾಕ್‌ಡೌನ್‌ ನಲ್ಲಿ ಅನಗತ್ಯವಾಗಿ ಹೊರಗೆ ಹೋಗುವಂತೆ ಇರುವುದಿಲ್ಲ. ಈ ವೇಳೆ ಬಾಯ್ ಫ್ರೆಂಡ್ ಹಾಗೂ ಗರ್ಲ್ ಫ್ರೆಂಡ್‌ಗಳನ್ನು ಭೇಟಿ ಮಾಡಲು ಆಗುವುದಿಲ್ಲ. ಡೇಟಿಂಗ್ ಮಾಡುವವರು ಸಹ ಕೆಲಕಾಲ ಅದನ್ನು ಮುಂದಕ್ಕೆ ಹಾಕಿಕೊಳ್ಳಬೇಕಾಗಿದೆ. ಲಿವಿಂಗ್ ಟುಗೆದರ್‌ನಲ್ಲಿದ್ದ ಎಷ್ಟೋ ಜೋಡಿಗಳು ಸಹ ಲಾಕ್‌ಡೌನ್‌ನಿಂದ ಬೇರೆ ಬೇರೆ ಕಡೆ ಇದ್ದಾರೆ. ಹೀಗಾಗಿ, ಸಾಕಷ್ಟು ಮಂದಿ ಲೈಂಗಿಕ ಸುಖ ಅನುಭವಿಸಲು ಸೆಕ್ಸ್ ಟಾಯ್ಸ್ ಮೊರೆ ಹೋಗಿದ್ದಾರೆ ಎನ್ನುವುದು ವೈದ್ಯರೊಬ್ಬರ ಮಾತು.

ಕಾಂಡೋಮ್ ಮಾರಾಟ ಸಹ ಹೆಚ್ಚಾಗಿದೆ

ಕಾಂಡೋಮ್ ಮಾರಾಟ ಸಹ ಹೆಚ್ಚಾಗಿದೆ

ಸೆಕ್ಸ್ ಟಾಯ್ಸ್ ಗಳ ಜೊತೆಗೆ ಲಾಕ್‌ಡೌನ್ ಸಮಯದಲ್ಲಿ ಕಾಂಡೋಮ್ ಮಾರಾಟ ಕೂಡ ಹೆಚ್ಚಾಗಿದೆ. ಕೆಲಸದ ಒತ್ತಡದಿಂದ ತಮ್ಮ ಸಂಗತಿಗೆ ಸರಿಯಾಗಿ ಸಮಯ ನೀಡಲು ಆಗುತ್ತಿರಲಿಲ್ಲ, ಎನ್ನುವವರು ಲಾಕ್‌ಡೌನ್ ಸಮಯವನ್ನು ಬಳಸಿಕೊಳ್ಳುತ್ತಿದ್ದಾರೆ. ಒಬ್ಬನೊಬ್ಬರು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಸಂಗತಿಗಳ ನಡುವೆ ಲೈಂಗಿಕ ಕ್ರಿಯೆ ಹೆಚ್ಚಾಗಿದ್ದು, ಕಾಂಡೋಮ್ ಮಾರಾಟ ಸಂಖ್ಯೆ ಏರಿಕೆಯಾಗಿದೆ. ನ್ಯೂಜಿಲ್ಯಾಂಡ್ ಮಾತ್ರವಲ್ಲದೆ, ಆಸ್ಟ್ರೇಲಿಯಲ್ಲಿಯೂ ಸೆಕ್ಸ್ ಟಾಯ್ಸ್ ಹಾಗೂ ಕಾಂಡೋಮ್ ಎರಡರಷ್ಟು ಹೆಚ್ಚು ಮಾರಾಟವಾಗಿದೆ.

English summary
Sex toys sales triple during lockdown in New Zealand. People are buying sex toys to pass lockdown their time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X