ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೋಟುದ್ದದ ಈ ಬಾಲಕಿ ಎತ್ತುವ ಭಾರ ಅಷ್ಟಿಷ್ಟಲ್ಲ...

|
Google Oneindia Kannada News

ಪ್ರತಿ ದಿನ ವ್ಯಾಯಾಮ ಮಾಡಲು ಹೆಣಗಾಡುವವರೇ ಹೆಚ್ಚು ಮಂದಿ. ಆದರೆ ಏಳು ವರ್ಷದ ಈ ಬಾಲಕಿ ವ್ಯಾಯಾಮ ಮಾಡುವುದನ್ನು ನೋಡಿದರೆ ನಿಬ್ಬೆರಗಾಗುವುದು ಗ್ಯಾರಂಟಿ. ಈ ಪುಟ್ಟ ಹುಡುಗಿ ವ್ಯಾಯಾಮ ಮಾಡುವ, ಭಾರ ಎತ್ತುವ ಫೋಟೊ, ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಕೆನಡಾದ ಈ ಬಾಲಕಿ ಹೆಸರು ರೋರಿ ವ್ಯಾನ್ ಅಲ್ಫ್. ನಾಲ್ಕು ಅಡಿ ಉದ್ದವಿರುವ ರೋರಿ ವ್ಯಾಯಾಮ ಮಾಡುವುದನ್ನು ನೋಡುವುದೇ ಸೋಜುಗ. ಬರೀ ವ್ಯಾಯಾಮ ಅಲ್ಲ, ವೇಟ್ ಲಿಫ್ಟಿಂಗ್ ನಲ್ಲಿ ಸಾಧನೆಯನ್ನೂ ಮಾಡಬೇಕೆಂಬುದು ಪುಟ್ಟ ಹುಡುಗಿಯ ಕನಸು. ಆಕೆಯ ವಯಸ್ಸಿಗೆ ಅಸಾಧ್ಯವೆನಿಸುವಷ್ಟು ಭಾರವನ್ನು ಎತ್ತಿ ಚಾಂಪಿಯನ್ ಎಂದೂ ಕರೆಸಿಕೊಂಡಿದ್ದಾಳೆ.

ವೈರಲ್ ವಿಡಿಯೋ; ಗಾಳಿಪಟದೊಂದಿಗೇ ಮೇಲೆ ಹಾರಿದ ಬಾಲಕವೈರಲ್ ವಿಡಿಯೋ; ಗಾಳಿಪಟದೊಂದಿಗೇ ಮೇಲೆ ಹಾರಿದ ಬಾಲಕ

ಮೂರನೇ ತರಗತಿಯ ವಿದ್ಯಾರ್ಥಿನಿ ಆದ ರೋರಿ ದಿನವೂ ಒಂದಿಷ್ಟು ಸಮಯವನ್ನು ವೇಟ್ ಲಿಫ್ಟಿಂಗ್ ಅಭ್ಯಾಸಕ್ಕೆಂದೇ ಮೀಸಲಿಡುತ್ತಾಳೆ. ಈ ತಾಲೀಮಿನಿಂದಲೇ, 80 ಕೆ.ಜಿ ಡೆಡ್ ಲಿಫ್ಟ್ ಹಾಗೂ ಸ್ಕ್ವಾಟ್ ನಲ್ಲಿ 61 ಕೆ.ಜಿ. ಭಾರವನ್ನು ಸಲೀಸಾಗಿ ಎತ್ತುವಂತೆ ಆಗಿದ್ದಾಳೆ.

Seven Year Old Girl From Canada Deadlift 80 KGs

ಐದನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ ರೋರಿ ಭಾರ ಎತ್ತುವ ತಾಲೀಮು ಆರಂಭಿಸಿದಳು. ಜಿಮ್ನಾಸ್ಟಿಕ್ ಕ್ಲಾಸ್ ನಲ್ಲಿ ಈ ಕುರಿತು ತಿಳಿದುಕೊಂಡು ವೇಟ್ ಲಿಫ್ಟಿಂಗ್ ಆರಂಭಿಸಿದಳು.

ಅಮೆರಿಕದಲ್ಲಿ ನಡೆದ ಯೂತ್ ನ್ಯಾಷನಲ್ ಚಾಂಪಿಯನ್ ಷಿಪ್ ನಲ್ಲಿ 11 ವರ್ಷದೊಳಗಿನವರ ಸ್ಪರ್ಧೆಯಲ್ಲಿ 30 ಕೆ.ಜಿ ಭಾರ ಹೊತ್ತು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾಳೆ. ಅತಿ ಕಿರಿಯ ವಯಸ್ಸಿನ ಯೂತ್ ನ್ಯಾಷನಲ್ ಚಾಂಪಿಯನ್ ಎಂದೂ ಈಕೆಗೆ ಶಹಬ್ಭಾಸ್ ಗಿರಿ ಸಿಕ್ಕಿದೆ. ರೋರಿಯ ಈ ಚಮತ್ಕಾರಕ ವ್ಯಾಯಾಮಕ್ಕೆ ಸಾಕಷ್ಟು ಮಂದಿ ಫಿದಾ ಆಗಿದ್ದಾರೆ. ಇನ್ ಸ್ಟಾಗ್ರಾಂ ಖಾತೆಯನ್ನೂ ಹೊಂದಿರುವ ರೋರಿಗೆ ಲಕ್ಷ ಮಂದಿ ಫಾಲೊವರ್ಸ್ ಕೂಡ ಇದ್ದಾರೆ.

ತನ್ನ ಈ ಸಾಧನೆ ಬಗ್ಗೆ ಮಾತನಾಡುವ ರೋರಿ "ನನಗೆ ಗಟ್ಟಿಯಾಗಿರಬೇಕು ಎಂದು ಇಷ್ಟ. ವ್ಯಾಯಾಮ ಮಾಡುವಾಗ ನಾನು ಬೇರೆ ಏನನ್ನೂ ಯೋಚಿಸುವುದಿಲ್ಲ. ಬರೀ ಗುರಿಯೆಡೆಗೆ ನನ್ನ ಮನಸ್ಸು ಇಟ್ಟುಕೊಳ್ಳುತ್ತೇನೆ. ಪ್ರತಿ ಬಾರಿಯೂ ಹಿಂದಿನ ಬಾರಿಗಿಂತ ಹೆಚ್ಚು ಭಾರ ಎತ್ತಲು ಪ್ರಯತ್ನಿಸುತ್ತಲೇ ಇರುತ್ತೇನೆ" ಎನ್ನುತ್ತಾಳೆ.

English summary
Rory van Ulft, a seven-year-old girl from Canada, is just four feet tall and she can deadlift 80 kgs
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X