ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈಕಲ್ ಬಿಟ್ಟು 159 ಸೀಟುಗಳನ್ನು ಮಾತ್ರ ಕದ್ದ ವೃದ್ಧ ಕಾರಣವೇನು?

|
Google Oneindia Kannada News

ಟೊಕಿಯೋ, ಅಕ್ಟೋಬರ್ 16: ಸೈಕಲ್ ಬಿಟ್ಟು ಕೇವಲ ಸೈಕಲ್ ಸೀಟುಗಳನ್ನು ಮಾತ್ರ ಕದಿಯುತ್ತಿದ್ದ ವೃದ್ಧನನ್ನು ಪೊಲೀಸರು ಟೊಕಿಯೋದಲ್ಲಿ ಬಂಧಿಸಿದ್ದಾರೆ.

ಇದುವರೆಗೂ ಆತ 159ಕ್ಕೂ ಹೆಚ್ಚು ಸೈಕಲ್ ಸೀಟುಗಳನ್ನು ಕಳವು ಮಾಡಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಆತ ಕಳ್ಳನೇ ಅಥವಾ ಸೀಟುಗಳನ್ನು ಮಾತ್ರ ಕದಿಯುವ ಕಾಯಿಲೆ ಇದೆಯೇ ಎಂದುಕೊಳ್ಳಬೇಡಿ.

ಕಳೆದ ಒಂದು ವರ್ಷಗಳ ಹಿಂದೆ ಅವರ ಸೈಕಲ್‌ನ ಸೀಟನ್ನು ಯಾರೋ ಕದ್ದಿದ್ದ ಕಾರಣ ಸೇಡು ತೀರಿಸಿಕೊಳ್ಳಲು ಕಳೆದ ಒಂದು ವರ್ಷದಿಂದ ಸೈಕಲ್ ಸೀಟು ಕದಿಯುತ್ತಿದ್ದರು ಎಂದು ತಿಳಿದುಬಂದಿದೆ.

Senior Citizen Steals 159 Bicycle Seats

2018ರಲ್ಲಿ ನನ್ನ ಬೈಸಿಕಲ್​ ಸೀಟ್​ ಕಳುವಾದಾಗ ನಾನು ಇನ್ನೊಂದು ಸೀಟ್​ ಕೊಂಡುಕೊಂಡೆ ಆದರೆ, ಕಳುವಾದಾಗ ಆಗುವ ನೋವಿನ ಅನುಭವ ಇತರರಿಗೂ ಆಗಲಿ ಎಂಬ ಉದ್ದೇಶದಿಂದ ಹಾಗೂ ಸೇಡು ತೀರಿಸಿಕೊಳ್ಳಲು ಸೀಟ್​ ಕಳುವು ಮಾಡಲು ಆರಂಭಿಸಿದ್ದಾಗಿ ಹಟೋರಿ ಪೊಲೀಸರಿಗೆ ತಿಳಿಸಿದ್ದಾನೆ.

ಅಕಿಯೋ ಹಟೋರಿ (61) ಬಂಧಿತ. ಕೆಲವರು ನಿಲ್ಲಿಸಿದ್ದ ಬೈಸಿಕಲ್​ಗಳಿಂದ ಸೀಟ್​ಗಳನ್ನು ಕಳವು ಮಾಡಿ ತನ್ನ ಬ್ಯಾಗ್​ನೊಳಗೆ ಹಾಕಿಕೊಂಡು ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.

ವಿಡಿಯೋ ತುಣುಕು ಪರಿಶೀಲಿಸಿದ ತನಿಖಾಧಿಕಾರಿಗಳು ಆರೋಪಿ ಹಟೋರಿ ನಿವಾಸವನ್ನು ಪತ್ತೆಹಚ್ಚಿ ದಾಳಿ ನಡೆಸಿದಾಗ ರಹಸ್ಯ ಸ್ಥಳದಲ್ಲಿ 159 ಸೀಟ್​ಗಳನ್ನು ಅಡಗಿಸಿಟ್ಟಿದ್ದು ಕಂಡುಬಂದಿದೆ.

English summary
A senior citizen from Tokyo was arrested last week by the Japanese police for allegedly stealing no less than 159 bicycle seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X