• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ಯಾಲಿಫೋರ್ನಿಯಾದಲ್ಲಿ ಸೆಲ್ಫಿ ಹುಚ್ಚಿಗೆ ಬಲಿಯಾದರೇ ಭಾರತದ ದಂಪತಿ?

|

ನ್ಯೂಯಾರ್ಕ್, ಅಕ್ಟೋಬರ್ 31: 'ಜೀವಕ್ಕಿಂತ ಒಂದು ಫೋಟೋ ಹೆಚ್ಚೆ?' ಅಪಾಯಕಾರಿ ಜಾಗಗಳಲ್ಲಿ ಸೆಲ್ಫಿ ಕ್ಲಿಕ್ಕಿಸುವ ಬಗ್ಗೆ ಇಂಥ ಪ್ರಶ್ನೆ ಕೇಳಿದ್ದ ಮೀನಾಕ್ಷಿ ಎಂಬ ಮಹಿಳೆ ಸೆಲ್ಫಿ ಹುಚ್ಚಿಗೇ ಬಲಿಯಾದದ್ದು ವಿಪರ್ಯಾಸವೋ, ದುರಂತವೋ?!

ಹೌದು, ಅಮೆರಿಕದ ಕ್ಯಾಲಿಫೋರ್ನಿಯಾದ ಯೂಸೆಮೈಟ್ ನ್ಯಾಶ್ನಲ್ ಪಾರ್ಕ್ ಎಂಬಲ್ಲಿ 800 ಅಡಿ ಎತ್ತರದಿಂದ ಬಿದ್ದು ಭಾರತೀಯ ದಂಪತಿ ಸಾವನ್ನಪ್ಪಿದ ಘಟನೆಗೆ ಹೊಸ ತಿರುವು ಸಿಕ್ಕಿದೆ.

ಅದೇ ತಮ್ಮ ಕೊನೆಯ ಪ್ರವಾಸ ಎಂಬ ಸೂಚನೆ ಆ ದಂಪತಿಗೆ ಸಿಕ್ಕೇ ಇರಲಿಲ್ಲ!

ದಂಪತಿಯ ಸಾವಿಗೆ ಅವರ ಸೆಲ್ಫಿ ಹುಚ್ಚೇ ಕಾರಣ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. 800 ಅಡಿ ಎತ್ತರದ ಪ್ರದೇಶದಲ್ಲಿ ಮೇಲಿಂದ ಮೇಲೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಈ ದಂಪತಿ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ.

ವಿಪರ್ಯಾಸ ಎಂದರೆ, 'ಆಯಕಟ್ಟಿನ ಪ್ರದೇಶಗಳಲ್ಲಿ ಸೆಲ್ಫಿ ಕ್ಲಿಕ್ಕಿಸುವುದು ಎಷ್ಟು ಅಪಾಯ ಗೊತ್ತೆ? ಆ ಗಾಳಿಯ ಪ್ರಚಂಡ ಶಕ್ತಿಯ ಅರಿವಿದೆಯಾ? ಒಂದು ಜೀವಕ್ಕಿಂತ ಫೋಟೋ ಹೆಚ್ಚೆ?' ಎಂದು ತಿಂಗಳ ಮೊದಲಷ್ಟೇ ಪ್ರಶ್ನಿಸಿದ್ದ ಮೀನಾಕ್ಷಿಯೇ ಆ ಒಂದು ಫೋಟೋ ಹುಚ್ಚಿಗೆ ಬಲಿಯಾಗಿದ್ದಾರೆ, ಪತಿಯೂ ಸಹ!

ದಂಪತಿಯನ್ನು ಬಲಿತೆಗೆದುಕೊಂಡ ಸಾಹಸ ಪ್ರವಾಸದ ಹುಚ್ಚು

ದಂಪತಿಯನ್ನು ಬಲಿತೆಗೆದುಕೊಂಡ ಸಾಹಸ ಪ್ರವಾಸದ ಹುಚ್ಚು

ಅಮೆರಿಕದ ಕ್ಯಾಲಿಫೋರ್ನಿಯಾದ ಯೂಸೆಮೈಟ್ ನ್ಯಾಶ್ನಲ್ ಪಾರ್ಕ್ ಅ.25 ರಂದು ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು. ಶವಗಳು ಸಿಕ್ಕಿದ್ದರೂ ಅದು ಯಾರ ಶವ ಎಂಬ ಗುರುತು ಸಿಕ್ಕಿರಲಿಲ್ಲ. ತನಿಖೆಯ ನಂತರ ವಿಷ್ಣು ವಿಶ್ವನಾಥ್(29) ಮತ್ತು ಮೀನಾಕ್ಷಿ ಮೂರ್ತಿ(30) ಎಂಬ ಭಾರತೀಯ ದಂಪತಿಯ ಶವ ಎಂಬುದು ಪತ್ತೆಯಾಗಿತ್ತು. ಸಾಹಸದ ಪ್ರವಾಸವೆಂದರೆ ಹುಚ್ಚುಹಿಡಿಯುವಷ್ಟು ಇಷ್ಟಪಡುತ್ತಿದ್ದ ದಂಪತಿಯನ್ನು ಆ ಹುಚ್ಚೇ ಬಲಿತೆಗೆದುಕೊಂಡಿದ್ದು ವಿಪರ್ಯಾಸ!

ಸೆಲ್ಫಿ ಬಗ್ಗೆ ಎಚ್ಚರಿಕೆ!

ಸೆಲ್ಫಿ ಬಗ್ಗೆ ಎಚ್ಚರಿಕೆ!

ತಿಂಗಳ ಹಿಂದಷ್ಟೇ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಸೆಲ್ಫಿ ಹುಚ್ಚಿನ ಬಗ್ಗೆ ಬರೆದುಕೊಂಡಿದ್ದ ಮೀನಾಕ್ಶಃಇ, 'ನಾವೆಲ್ಲರೂ ಅಪಾಯಕಾರಿ ಜಾಗಗಳಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದ್ದೇವೆ. ಆದರೆ ಆಯಕಟ್ಟಿನ, ಅಪಾಯಕಾರಿ ಪ್ರದೇಶಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದರ ದುರಂತದ ಬಗ್ಗೆ ನಮಗೆ ಅರಿವಿಲ್ಲ. ಗಾಳಿಯ ಪ್ರಚಂಡ ಶಕ್ತಿಯ ಬಗ್ಗೆ ಗೊತ್ತೆ? ನಮ್ಮ ಜೀವಕ್ಕಿಂತ ಒಂದು ಫೋಟೋ ಹೆಚ್ಚೇ?' ಎಂದು ಮೀನಾಕ್ಷಿ ಪ್ರಶ್ನಿಸಿದ್ದರು. ಆದರೆ ಅದೇ ಒಂದು ಫೋಟೋ ಹುಚ್ಚಿಗೆ ಅವರೇ ಬಲಿಯಾದರು!

ಕ್ಯಾಲಿಫೋರ್ನಿಯಾ: 800 ಅಡಿ ಎತ್ತರದಿಂದ ಬಿದ್ದು ಸಾವಿಗೀಡಾದ ಭಾರತೀಯ ದಂಪತಿ

ಪ್ರವಾಸ, ಪಿಂಕ್ ಮತ್ತು ಸಂಭ್ರಮ!

ಪ್ರವಾಸ, ಪಿಂಕ್ ಮತ್ತು ಸಂಭ್ರಮ!

ಮೀನಾಕ್ಷಿ ತಮ್ಮನ್ನು ಪರಿಚಯಿಸಿಕೊಳ್ಳುತ್ತಿದ್ದುದೇ ಮಿನಾಕ್ಸಿ ಎಂದು! ಪ್ರತಿದಿನವೂ ಮುಂದಿನ ಪ್ರವಾಸ ಎಲ್ಲಿಗೆ ಎಂದೇ ಯೋಚಿಸುತ್ತ ಕೂರುತ್ತಿದ್ದ ಮೀನಾಕ್ಷಿಗೆ ಪ್ರವಾಸವೊಂದಿದ್ದರೆ ಊಟವೂ ಬೇಕಿಲ್ಲ! ಪಿಂಕ್ ಕಲರ್ ಅಂದ್ರೆ ಪ್ರಾಣ. ಅದಕ್ಕೆಂದೇ ತಮ್ಮ ಕೂದಲಿಗೂ ಪಿಂಕ್ ಕಲರ್ ಹಾಕಿಸಿಕೊಂಡಿದ್ದರು! ಜೀವನದ ಪ್ರತಿ ಕ್ಷಣವನ್ನೂ ಸಂಭ್ರಮಿಸುವ ಆಸೆ ಅವರದ್ದು. ಅಂತೆಯೇ ಪತ್ನಿಯ ಎಲ್ಲಾ ಆಸೆಗಳನ್ನೂ ಅತ್ಯಂತ ಸಂತಸದಿಂದ ಪೂರೈಸುತ್ತಿದ್ದ ಪತಿ ವಿಷ್ಣು. ಇಬ್ಬರದೂ ನೋಡುವವರು ಹೊಟ್ಟೆಕಿಚ್ಚು ಪಡುವಂಥ ದಾಂಪತ್ಯ!

ಪ್ರವಾಸೀ ಕಥನಕ್ಕಾಗಿಯೇ ಬ್ಲಾಗ್!

ಪ್ರವಾಸೀ ಕಥನಕ್ಕಾಗಿಯೇ ಬ್ಲಾಗ್!

ಪ್ರವಾಸವೆಂದರೆ ಸಾಕು ಜೀವಬಿಡುತ್ತಿದ್ದ ಈ ದಂಪತಿ 'ಹಾಲಿಡೇಸ್ ಅಂಡ್ ಹ್ಯಾಪಿ ಎವ್ವರ್ ಆಫ್ಟರ್ಸ್' ಎಂಬ ಬ್ಲಾಗ್ ಆರಂಭಿಸಿ, ತಮ್ಮ ಪ್ರವಾಸದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಒಂದೇ ಕಾಲೇಜಿನಲ್ಲಿ ಓದುತ್ತಿದ್ದ ಈ ಜೋಡಿ, ಪ್ರೀತಿಸಿ ಮದುವೆಯಾಗಿದ್ದರು. ನಂತರ ಒಟ್ಟಿಗೇ ಸಾಫ್ಟ್ ವೇರ್ ಇಂಜಿನಿಯರ್ ಗಳಾದ ಇವರು 2014 ರಲ್ಲಿ ಮದುವೆಯಾಗಿ ಅಮೆರಿಕದ ಕ್ಯಾಲಿಫೋರ್ನಿಯಾಕ್ಕೆ ತೆರಳಿದ್ದರು. ಆ ನಂತರ ಪ್ರವಾಸವನ್ನೇ ಬದುಕು ಎಂದುಕೊಂಡ ಇವರು, ವಾರಕ್ಕೊಂದು ಪ್ರವಾಸ ಮಾಡುವುದು ಮಾಮೂಲಾಗಿತ್ತು. ಈ ಅನುಭವಗಳನ್ನು ತಮ್ಮ ಬ್ಲಾಗ್ ನಲ್ಲಿ ಹಂಚಿಕೊಳ್ಳುತ್ತಿದ್ದರು.

ಪ್ರಣಯ್ ಪ್ರಣಯಕ್ಕೆ 'ಅಮೃತ' ಸಿಂಚನ ನೀಡಿದ ಲವ್ಲಿ ವಿಡಿಯೋ!

ಪರ್ವತದ ತುದಿಯಲ್ಲಿ ಪ್ರೇಮ ನಿವೇದನೆ!

ಮೀನಾಕ್ಷಿ ಮತ್ತು ವಿಷ್ಣು ಎಂಬ ಲವ್ಲಿ ದಂಪತಿಗಳನ್ನು ಬಲಿತೆಗೆದುಕೊಂಡ ಈ ಅಪಾಯಕಾರಿ ಜಾಗದಲ್ಲೇ ಕಳೆದ ಹದಿನೈದು ದಿನಗಳ ಹಿಂದೆ ಇಬ್ಬರು ಪ್ರೇಮಿಗಳು ನಿಂತಿದ್ದರು. ಅವರು ಪ್ರೇಮ ನಿವೇದನೆಗೆ ಆರಿಸಿಕೊಂಡಿದ್ದ ಜಾಗ ಇದಾಗಿತ್ತು. ಆ 800 ಅಡಿ ಎತ್ತರದ ಬೆಟ್ಟದ ಮೇಲೆ ಇಬ್ಬರೇ ಪ್ರೇಮಿಗಳು ನಿಂತಿರುವುದನ್ನು ಚಾಯಾಗ್ರಾಹಕ ಮ್ಯಾಥ್ಯೂ ಡಿಪ್ಪೆಲ್ ಎಂಬುವವರು ಕ್ಲಿಕ್ಕಿಸಿದ್ದರು. ಆದರೆ ಅವರಿಗೆ ಈ ಚಿತ್ರದಲ್ಲಿರುವವರು ಯಾರು ಎಂಬುದು ಗೊತ್ತಿರಲಿಲ್ಲ. ನಂತರ ಈ ಚಿತ್ರವನ್ನು ಟ್ವಿಟ್ಟರ್ ಮತ್ತು ಇನ್ ಸ್ಟಾಗ್ರಾಂ ನಲ್ಲಿ ಹರಿಬಿಟ್ಟಿದ್ದರು. ಈ ಚಿತ್ರವನ್ನಿ 171000 ಬಾರಿ ರೀಟ್ವೀಟ್ ಮಾಡಲಾಗಿತ್ತು! ಕೆಲದಿನಗಳ ನಂತರ ಚಾರ್ಲಿ ಬೇರ್ ಮತ್ತು ಮೆಲಿಸ್ಸಾ ಎಂಬ ಜೋಡಿ ಈ ಚಿತ್ರ ತಮ್ಮದು ಎಂದು ಪ್ರತಿಕ್ರಿಯೆ ನೀಡಿತ್ತು. ಇದೇ ಅಪಾಯಕಾರಿ ಜಾಗದಿಂದಲೇ ಬಿದ್ದು ಇದೀಗ ಮೀನಾಕ್ಷಿ ಮತ್ತು ವಿಷ್ಣು ಪ್ರಾಣ ಕಳೆದುಕೊಂಡಿದ್ದು ದುರಂತ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
An Indian couple who died after falling 800 feet in an area with steep terrain in California's Yosemite National Park last week were apparently taking a selfie before the tragedy occurred, a media report said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more