ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್ ಚುನಾವಣೆ: ಇ ಮತಯಂತ್ರಕ್ಕೆ ಹ್ಯಾಕಿಂಗ್ ಭೀತಿ

ಇರಾಕಿ ಉಗ್ರ ಸಂಘಟನೆ ಐಸೀಸ್ ನ ದಾಳಿಯನ್ನು ಮೆಟ್ಟಿ ನಿಲ್ಲಬಹುದಾದರೂ ಈ ಹ್ಯಾಕರ್ಸ್ ದಾಳಿ ತಡೆಯಲು ಸಾಧ್ಯವಿಲ್ಲ ಎಂದು ಇ ವೋಟಿಂಗ್ ಯಂತ್ರದ ದೋಷವನ್ನು ಸಂಸ್ಥೆಯೊಂದು ಎತ್ತಿ ತೋರಿಸಿದೆ.

By Mahesh
|
Google Oneindia Kannada News

ನ್ಯೂಯಾರ್ಕ್, ನವೆಂಬರ್ 08: ವಿಶ್ವದ ಗಮನ ಸೆಳೆದಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಹ್ಯಾಕರ್ ಗಳ ಭೀತಿ ಎದುರಾಗಿದೆ. ಇರಾಕಿ ಉಗ್ರ ಸಂಘಟನೆ ಐಸೀಸ್ ನ ದಾಳಿಯನ್ನು ಮೆಟ್ಟಿ ನಿಲ್ಲಬಹುದಾದರೂ ಈ ಹ್ಯಾಕರ್ಸ್ ದಾಳಿ ತಡೆಯಲು ಸಾಧ್ಯವಿಲ್ಲ ಎಂದು ಇ ವೋಟಿಂಗ್ ಯಂತ್ರದ ದೋಷವನ್ನು ಸಂಸ್ಥೆಯೊಂದು ಎತ್ತಿ ತೋರಿಸಿದೆ.

ಭಾರತದಲ್ಲಿದ್ದಂತೆ ಇಲೆಕ್ಟ್ರಾನಿಕ್ ಮತ ಯಂತ್ರ(ಇವಿಎಂ) ವನ್ನು ಅಮೆರಿಕನ್ನರು ಬಳಸುವುದಿಲ್ಲ ಅವರದ್ದೇನಿದ್ದರೂ ಮತಪತ್ರಗಳ ಮೇಲೆ ನಂಬಿಕೆ. ಅದೇ ಹೆಚ್ಚು ಸುರಕ್ಷಿತವೆಂದು ನಂಬಿದ್ದಾರೆ. ಜತೆಗೆ ಇ ವೋಟಿಂಗ್ ಮಷಿನ್ ಗಳಿರುತ್ತದೆ.

ಥರಾವರಿ ತಂತ್ರಜ್ಞಾನ ಬಳಕೆ ಮಾಡಿ 50 ರಾಜ್ಯಗಳಲ್ಲಿ ಮತ ಹಾಕಲಾಗುತ್ತದೆ. ಸರಿ ಸುಮಾರು 32.2 ಕೋಟಿ ಜನಸಂಖ್ಯೆಯಲ್ಲಿ ಸುಮಾರು 12 ಕೋಟಿ ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಲಿದ್ದಾರೆ. [ಟ್ರಂಪ್ ಗೆಲುವಿಗಾಗಿ ಎನ್ನಾರೈಗಳಿಂದ ವಿಶೇಷ ಪೂಜೆ!]

ಆದರೆ, ಇ ವೋಟಿಂಗ್ ಯಂತ್ರದಲ್ಲಿರುವ ಆಂತರಿಕ ಫ್ಲಾಶ್ ಮೆಮೊರಿ ಕಾರ್ಡ್(reflashing-the PCMCIA card) ಗಳಲ್ಲಿರುವ ಮಾಹಿತಿಯನ್ನು ಸುಲಭವಾಗಿ ತಿರುಚಬಹುದು, ಅಳಿಸಬಹುದು, ಹಾಳುಗೆಡವಬಹುದು ಎಂದು ಸೆಕ್ಯೊಯಿಯಾ ಎವಿಸಿ ಎಡ್ಜ್ ಸಂಸ್ಥೆ (Sequoia) ವಿಡಿಯೋ ಮೂಲಕ ಪ್ರಾತ್ಯಕ್ಷಿಕೆ ನೀಡಿದೆ. [ಕಟ್ಟಕಡೆಯ ಸಮೀಕ್ಷೆಯಲ್ಲಿ ಹಿಲರಿ ಕ್ಲಿಂಟನ್ ಜಯಭೇರಿ!]

U.S. presidential election 2016: Security vendor Cylance demonstrates hack of U.S. e-voting machine.

ಕಣದಲ್ಲಿರುವ ಡೆಮಾಕ್ರಟ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಮತ್ತು ರಿಪಬ್ಲಿಕನ್ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ನಡುವೆ ತೀವ್ರ ಪೈಪೋಟಿ, ಅಮೆರಿಕದ 45ನೇ ಅಧ್ಯಕ್ಷರಾಗಿ ಯಾರು ಆಯ್ಕೆಯಾಗುತ್ತಾರೆ ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣಕ್ಕಾಗಿ ಎಲ್ಲರೂ ಕಾದು ನೋಡುವಾಗ ಹ್ಯಾಕಿಂಗ್ ಸಮಸ್ಯೆ ಕಾಡಲಿದೆಯೆ? ಎಂಬ ಪ್ರಶ್ನೆಗೆ ತಜ್ಞರು ಉತ್ತರಿಸಿ, ಇದರಿಂದ ಅಂಥ ಸಮಸ್ಯೆ ಏನೂ ಆಗುವುದಿಲ್ಲ ಎಂದಿದ್ದಾರೆ.

50 ರಾಜ್ಯಗಳ 13 ರಾಜ್ಯಗಳು ಇ ವೊಟಿಂಗ್ ವ್ಯವಸ್ಥೆ ಹೊಂದಿವೆ. ಈ ಪೈಕಿ ಅರಿಜೋನಾ,ವಿಸ್ಕೊನ್ಸಿನ್ ಪ್ರಮುಖವಾಗಿವೆ. ಈ ಚುನಾವಣೆಯಲ್ಲಿ ಸುಮಾರು 12 ಕೋಟಿ ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಲಿದ್ದಾರೆ.

48ನೇ ಉಪಾಧ್ಯಕ್ಷ ಸ್ಥಾನಕ್ಕಾಗಿ ಡೆಮಾಕ್ರಟ್ ಪಕ್ಷದಿಂದ ಟಿಮ್ ಕೇನ್ ಮತ್ತು ರಿಪಬ್ಲಿಕನ್ ಉಮೇದುವಾರರಾಗಿ ಮೈನ್ ಪೆನ್ಸ್ ಕಣದಲ್ಲಿದ್ದಾರೆ. ಒಂದು ವೇಳೆ ಚುನಾವಣೆ ಫಲಿತಾಂಸ ಏರು ಪೇರಾದರೆ ಕಾನೂನು ಹೋರಾಟ ನಡೆಸುವುದಾಗಿ ಟ್ರಂಪ್ ಹೇಳಿಕೆ ನೀಡಿದ್ದಾರೆ. ಆದರೆ, ಇ ವೊಟಿಂಗ್ ವ್ಯವಸ್ಥೆ ಲೋಪ ದೋಷದ ಬಗ್ಗೆ ಯಾಕೋ ಅವರಿಗೂ ತಿಳಿದ್ದಂತಿಲ್ಲ. ಒಂದು ವೇಳೆ ಹ್ಯಾಕ್ ಆದರೂ ಹೆಚ್ಚಿನ ಪರಿಣಾಮ ಬೀರದೆ ಇರಬಹುದು ಆದರೆ, ಅಮೆರಿಕದ ಮತದಾನ ವ್ಯವಸ್ಥೆಯ ಪ್ರತಿಷ್ಠೆಗೆ ಭಾರಿ ಪೆಟ್ಟು ಬೀಳುವುದರಲ್ಲಿ ಸಂಶಯವಿಲ್ಲ.

English summary
U.S. presidential election 2016: Security vendor demonstrates hack of U.S. e-voting machine. The Cylance hack demonstrated a theoretical vulnerability described in research going back a decade
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X