ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಹಿಂದೂ ದೇವಾಲಯದಲ್ಲಿ ಧಾರ್ಮಿಕ ಆಚರಣೆ ತಡೆದ ಭದ್ರತಾ ಸಿಬ್ಬಂದಿ: ದೂರು ದಾಖಲು

|
Google Oneindia Kannada News

ಇಸ್ಲಾಮಾಬಾದ್, ಮಾರ್ಚ್ 29: ನೆರೆಯ ಪಾಕಿಸ್ತಾನದ ಪುರಾತನ ಶಿವ ದೇವಾಲಯವೊಂದರಲ್ಲಿ ಭಕ್ತರು ಧಾರ್ಮಿಕ ಆಚರಣೆ ಮಾಡುವುದನ್ನು ಭದ್ರತಾ ಸಿಬ್ಬಂದಿ ನಿಲ್ಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ದೂರು ದಾಖಲಿಸಲಾಗಿದೆ.

ವಾಯುವ್ಯ ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಹಿಂದೂ ಸಮುದಾಯದ ಇಬ್ಬರು ಸದಸ್ಯರು ದೇವಾಲಯದ ಭದ್ರತಾ ಸಿಬ್ಬಂದಿಯ ವಿರುದ್ಧ ದೂರು ಸಲ್ಲಿಸಿದ್ದಾರೆ, ಅಲ್ಲಿ ಭಕ್ತರಿಗೆ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲು ಅವಕಾಶ ನೀಡುತ್ತಿಲ್ಲ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ತಿಳಿಸಿದೆ.

ಗಾಂಧಿಯಾನ್ ಪ್ರದೇಶದ ಮನ್ಸೆಹ್ರಾ ಜಿಲ್ಲೆಯ ದೇವಾಲಯದ ಭದ್ರತಾ ಸಿಬ್ಬಂದಿ ವಿರುದ್ಧ ಶಾಮ್ ಲಾಲ್ ಮತ್ತು ಸಾಜಿನ್ ಲಾಲ್ ಶನಿವಾರ ದೂರು ದಾಖಲಿಸಿದ್ದಾರೆ.

Security Guards Stopped Religious Ritual At A Hindu Temple In Pakistan: Complaint Lodged

ಶಾಮ್ ಮತ್ತು ಸಾಜಿನ್ ತಮ್ಮ ದೂರಿನಲ್ಲಿ, "ಮಂದಿರದಲ್ಲಿ (ದೇವಾಲಯ) ಧಾರ್ಮಿಕ ವಿಧಿ-ವಿಧಾನಗಳಿಂದ ಆರಾಧಕರನ್ನು ತಡೆಯುವುದು ಈ ನೆಲದ ಕಾನೂನಿಗೆ ವಿರುದ್ಧವಾಗಿದೆ' ಎಂದು ತಿಳಿದರು.

ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ಇವರಿಬ್ಬರು ದೂರುದಾರರು ಹಜಾರಾ ವಿಭಾಗದ ಉಪ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಅವರನ್ನು ಕೋರಿದ್ದರು. ಇನ್ಸ್‌ಪೆಕ್ಟರ್ ಜನರಲ್ ಮಧ್ಯಪ್ರವೇಶದಿಂದ ಭಕ್ತರು ದೇವಾಲಯದಲ್ಲಿ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಬಹುದಾಗಿದೆ.

ಆಡಳಿತಾರೂಢ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಸೆನೆಟರ್ ಗುರುದೀಪ್ ಸಿಂಗ್, ತಾತ್ಕಾಲಿಕ ವಿಧಾನಸಭೆಯ ಸದಸ್ಯ ರವಿ ಕುಮಾರ್ ಮತ್ತು ಬಾಫಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅವರನ್ನು ದೂರಿನಲ್ಲಿ ಪಾರ್ಟಿಯನ್ನಾಗಿ ಮಾಡಲಾಗಿದೆ.

English summary
A complaint has been filed that security personnel have stopped religious rituals at an ancient Shiva temple in Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X