ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಜೊತೆ ಮತ್ತೆ ವಕ್ಕರಿಸಿದ ಎಬೋಲಾ: ಆಫ್ರಿಕಾದಲ್ಲಿ ಚಿಂತಾಜನಕ ಸ್ಥಿತಿ

|
Google Oneindia Kannada News

ಪ್ಯಾರಿಸ್, ಜೂನ್ 2: ಅತ್ಯಂತ ಭೀಕರ ಎಬೋಲಾ ವೈರಸ್ ನಿರ್ಮೂಲನೆಗಾಗಿ ಕಳೆದ 20 ತಿಂಗಳಿನಿಂದ ನಡೆಯುತ್ತಿದ್ದ ಸತತ ಹೋರಾಟ ವಿಫಲವಾಗಿದೆ.

ಆಫ್ರಿಕಾ ಖಂಡ ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋ (ಡಿಆರ್‍ಸಿ) ಕಾಂಗೋ ದೇಶದ ಉತ್ತರ ಭಾಗದಲ್ಲಿ ಮತ್ತೆ ಕಿಲ್ಲರ್ ಎಬೋಲಾ ವೈರಸ್ ಪತ್ತೆಯಾಗಿದೆ.

ನವದೆಹಲಿಯಲ್ಲಿ ಮೊದಲ ಎಬೋಲಾ ಪ್ರಕರಣ ಪತ್ತೆನವದೆಹಲಿಯಲ್ಲಿ ಮೊದಲ ಎಬೋಲಾ ಪ್ರಕರಣ ಪತ್ತೆ

2018ರಲ್ಲಿ 2243 ಮಂದಿ ಎಬೋಲಾಗೆ ಬಲಿಯಾಗಿದ್ದರು. ಕೇವಲ ಕೊವಿಡ್ 19ನಿಂದ ಮಾತ್ರ ಜನರ ಉಸಿರಿಗೆ ಕುತ್ತಲ್ಲ ಎಬೋಲಾದಿಂದಲೂ ಜನರು ಮೃತಪಡುತ್ತಾರೆ ಎನ್ನುವುದು ಸಾಬೀತಾಗಿದೆ. 1976ರಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು.

ಮತ್ತೆ ಎಬೋಲಾ ದಾಳಿಯ ಆತಂಕ

ಮತ್ತೆ ಎಬೋಲಾ ದಾಳಿಯ ಆತಂಕ

ಇದರಿಂದ ಈ ಖಂಡದಲ್ಲಿ ಮತ್ತೆ ಎಬೋಲಾ ವೈರಸ್ ದಾಳಿಯ ಆತಂಕ ಸೃಷ್ಟಿಯಾಗಿದ್ದು, ಆಫ್ರಿಕನ್ನರು ಭಯಭೀತರಾಗಿದ್ದಾರೆ. ಎಬೋಲಾದಿಂದ ಆಫ್ರಿಕಾ ಸಂಪೂರ್ಣ ಮುಕ್ತವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಲು ಸಜ್ಜಾಗುತ್ತಿರುವ ಸಂದರ್ಭದಲ್ಲೇ ಮತ್ತೆ ಎಬೋಲಾ ವೈರಸ್ ಪ್ರಕರಣ ಪತ್ತೆಯಾಗಿರುವುದು ವಿಶ್ವಕ್ಕೂ ಕಳವಳಕಾರಿಯಾಗಿದೆ.

ಎಬೋಲಾ ಮಹಾಮಾರಿ ಮುಕ್ತವಾಗಿದೆ ಎಂದಿದ್ದ ಆರೋಗ್ಯ ಸಂಸ್ಥೆ

ಎಬೋಲಾ ಮಹಾಮಾರಿ ಮುಕ್ತವಾಗಿದೆ ಎಂದಿದ್ದ ಆರೋಗ್ಯ ಸಂಸ್ಥೆ

ಇಂದು ಈ ಕುರಿತು ಪ್ಯಾರಿಸ್‍ನಲ್ಲಿ ಹೇಳಿಕೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ಅಧಾನೋಮಿ ಘೆಬ್ರಿಯಾಸೊಸ್ ಮತ್ತೆ ಎಬೋಲಾ ಸೋಂಕು ಪತ್ತೆಯಾಗಿರುವುದರಿಂದ ಈ ಮಹಾಮಾರಿ ಸಂಪೂರ್ಣ ಮುಕ್ತವಾಗಿದೆ ಎಂದು ಘೋಷಿಸಲು ಸಾಧ್ಯವಾಗದೇ ಇರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಆತಂಕದಿಂದ ನುಡಿದಿದ್ದಾರೆ.

ಕೊರೊನಾಗಿಂತಲೂ ಮೊದಲು ವೈದ್ಯಕೀಯ ಲೋಕಕ್ಕೆ ಎಬೋಲಾ ಸವಾಲುಕೊರೊನಾಗಿಂತಲೂ ಮೊದಲು ವೈದ್ಯಕೀಯ ಲೋಕಕ್ಕೆ ಎಬೋಲಾ ಸವಾಲು

1976ರಲ್ಲಿ ಕಂಡು ಬಂದಿದ್ದ ಸೋಂಕು

1976ರಲ್ಲಿ ಕಂಡು ಬಂದಿದ್ದ ಸೋಂಕು

1976ರಲ್ಲಿ ಕಾಂಗೋದ ಉತ್ತರ ಭಾಗದಲ್ಲಿ ಪ್ರಥಮ ಎಬೋಲಾ ಸೋಂಕು ಕಂಡು ಬಂದಿತು. ಇದನ್ನು ಆರಂಭದಲ್ಲಿ ಝೈರೇ ಎಂದು ಕರೆಯಲಾಗುತ್ತಿತ್ತು. ಎಬೋಲಾ ನದಿ ದಂಡೆ ಪಕ್ಕದ ವಸತಿ ಪ್ರದೇಶದಲ್ಲಿ ಮೊದಲ ಬಾರಿಗೆ ಈ ಸೋಂಕು ಪತ್ತೆಯಾದ ಕಾರಣ ಇದಕ್ಕೆ ಎಬೋಲಾ ಎಂದು ಹೆಸರಿಡಲಾಯಿತು.

ಇದು ಬಾವುಲಿಗಳಿಂದ ಹರುಡುವ ಸೋಂಕು

ಇದು ಬಾವುಲಿಗಳಿಂದ ಹರುಡುವ ಸೋಂಕು

ಇದು ಬಾವಲಿಗಳಿಂದ ಹರಡುವ ಡೆಡ್ಲಿ ವೈರಸ್ ಸೋಂಕು. ಈ ಸೋಂಕು ತಗುಲಿರುವ ಬಾವಲಿಗಳಿಗೆ ಯಾವುದೇ ಅಪಾಯವಿಲ್ಲ. ಬದಲಿಗೆ ಸಾಂಕ್ರಾಮಿಕ ರೋಗವನ್ನು ಹಬ್ಬಿಸುತ್ತವೆ.ಬಾವಲಿಗಳು, ಕಾಡು ಪ್ರಾಣಿಗಳಾದ ಚಿಂಪಾಂಜಿ, ಗೋರಿಲ್ಲಾ, ಮಂಗ, ಜಿಂಕೆ, ಮುಳ್ಳಂದಿ, ಕಾಡು ಹಂದಿ ಇತರ ಪ್ರಾಣಿಗಳಿಗೆ ಕಚ್ಚಿದಾಗ ರೋಗ ವ್ಯಾಪಿಸುತ್ತದೆ.

ಆಫ್ರಿಕನ್ನರು ಇಂತಹ ವನ್ಯಜೀವಿಗಳನ್ನು ಭೇಟೆಯಾಡಿ ಭಕ್ಷಿಸುವುದರಿಂದ ಸೋಂಕು ಹಬ್ಬುತ್ತದೆ. ಆರಂಭದಲ್ಲಿ ಜ್ವರ ಕಾಣಿಸಿಕೊಂಡು ದೇಹವು ಅತ್ಯಂತ ಕುರೂಪ ರೀತಿಯಲ್ಲಿ ವಿಕಾರಗೊಂಡು ರೋಗಿಗಳನ್ನು ನೋಡಲು ಭಯವಾಗುವಂತಹ ಅತ್ಯಂತ ಕ್ರೂರ ಸೋಂಕು ಇದಾಗಿದೆ.

ಆಫ್ರಿಕಾದಲ್ಲಿ ಅದರಲ್ಲೂ ಕಾಂಗೋದಲ್ಲಿ ಅನೇಕರು ಈ ಹಿಂದೆ ಡೆಡ್ಲಿ ಎಬೋಲಾಗೆ ಬಲಿಯಾಗಿದ್ದಾರೆ.

English summary
A second Ebola outbreak has hit Congo as the country struggles to cope with coronavirus and the world's largest measles outbreak, health officials have announced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X