ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಲೆ ಹಾರುತ್ತಿದೆ ಸಮುದ್ರದ ನೀರು!: ಪ್ರಕೃತಿ ವಿಸ್ಮಯದ ವೈರಲ್ ವಿಡಿಯೋ

|
Google Oneindia Kannada News

ಟೋರ್ಶವ್ನ್, ಜನವರಿ 11: ಮೇಲಿನಿಂದ ಎಸೆದ ವಸ್ತು ಕೆಳಕ್ಕೆ ಬೀಳಬೇಕು. ಹಾಗೆಯೇ ಜಲಪಾತದಲ್ಲಿ ನೀರು ಮೇಲಿನಿಂದ ಕೆಳಗೆ ಬೀಳುತ್ತದೆಯೇ ವಿನಾ, ಕೆಳಗಿನಿಂದ ಮೇಲೆ ಚಿಮ್ಮುವುದಿಲ್ಲ. ಭೂಮಿಗೆ ಗುರುತ್ವದ ಶಕ್ತಿ ಇರುವುದರಿಂದ ಈ ಪ್ರಕ್ರಿಯೆ ನಡೆಯುತ್ತದೆ.

ಆದರೆ ಜಗತ್ತು ವಿಸ್ಮಯಗಳಿಂದ ಕೂಡಿದೆ. ನಿಸರ್ಗದ ಕೆಲವೊಂದು ವಿಸ್ಮಯಕಾರಿ ಸಂಗತಿಗಳನ್ನು ಭೇದಿಸುವುದು ವಿಜ್ಞಾನಕ್ಕೂ ಸಾಧ್ಯವಾಗಿಲ್ಲ. ಅಂತಹದೇ ಮತ್ತೊಂದು ಪ್ರಕೃತಿಯ ಅಚ್ಚರಿಯ ವಿದ್ಯಮಾನ ಡೆನ್ಮಾರ್ಕ್‌ನ ಫರೋ ಐಲ್ಯಾಂಡ್ಸ್‌ನಲ್ಲಿ ಕಂಡುಬಂದಿದೆ.

ಕೆರೆಯಲ್ಲ ಈ ಬಾರಿ ಸಮುದ್ರದಲ್ಲೇ ಉಕ್ಕುತಿದೆ ವಿಷಕಾರಿ ನೊರೆ! ಕೆರೆಯಲ್ಲ ಈ ಬಾರಿ ಸಮುದ್ರದಲ್ಲೇ ಉಕ್ಕುತಿದೆ ವಿಷಕಾರಿ ನೊರೆ!

ಬೆರುಗು ಮೂಡಿಸುವ ವಿಡಿಯೋದಲ್ಲಿ, ನೀರಿನ ಒಂದು ಭಾಗ ಗುರುತ್ವದ ಶಕ್ತಿಗೆ ವಿರುದ್ಧವಾಗಿ ಚಿಮ್ಮುವುದು ಸೆರೆಯಾಗಿದೆ. ಫರೋ ಐಲ್ಯಾಂಡ್ಸ್‌ನ ಸೌರೊಯ್ ಎಂಬಲ್ಲಿ ನಡೆದು ಸಾಗುತ್ತಿದ್ದ ಸ್ಯಾಮಿ ಜಾಕೋಬ್ಸನ್ (41) ಎಂಬುವವರು ಈ ಅಚ್ಚರಿದಾಯಕ ಮತ್ತು ಕುತೂಹಲಕಾರಿ ದೃಶ್ಯವನ್ನು ಚಿತ್ರೀಕರಿಸಿದ್ದಾರೆ.

470 ಮೀಟರ್‌ ಎತ್ತರಕ್ಕೆ

470 ಮೀಟರ್‌ ಎತ್ತರಕ್ಕೆ

ಸಮುದ್ರದಿಂದ ಏಳುವ ಸುಂಟರಗಾಳಿಯಲ್ಲಿ ಉದ್ದನೆಯ ಪೈಪ್ ಗಾತ್ರದಲ್ಲಿ ನೀರು ಎತ್ತರದ ದಂಡೆಗೂ ಮೇಲಕ್ಕೆ ಮೋಟಾರ್‌ ಪಂಪ್‌ನಿಂದ ಹಾರಿಸಿದಂತೆ ಚಿಮ್ಮುತ್ತದೆ. ಸ್ಯಾಮಿ ಜಾಕೋಬ್ಸನ್ ಸೋಮವಾರ ಈ ವಿಡಿಯೋವನ್ನು ಅವರು ಸೆರೆಹಿಡಿದಿದ್ದಾರೆ. ಈ ನೀರು ಸಮುದ್ರದ ಪಕ್ಕದಲ್ಲಿರುವ ಬಂಡೆಯ ಮೇಲೆ ಸುಮಾರು 470 ಮೀಟರ್‌ ಎತ್ತರಕ್ಕೆ ಚಿಮ್ಮುತ್ತದೆ.

ಶಾರ್ಕ್ ಹೊಟ್ಟೆಯಲ್ಲಿತ್ತು ಈಜಲು ಹೋದ ಪ್ರವಾಸಿಗನ ಕೈಶಾರ್ಕ್ ಹೊಟ್ಟೆಯಲ್ಲಿತ್ತು ಈಜಲು ಹೋದ ಪ್ರವಾಸಿಗನ ಕೈ

ಸುರುಳಿಯಾಕಾರದಲ್ಲಿ ಗಾಳಿ

ಸುರುಳಿಯಾಕಾರದಲ್ಲಿ ಗಾಳಿ

ಈ ಸುಳಿಯು ನೀರಿನ ನಲ್ಲಿಯಂತೆ (ನೀರಸುಳಿಗಂಬ) ಇದೆ. ನೀರಿನ ಮೇಲೆ ಬಿರುಗಾಳಿಯಂತಹ ಸನ್ನಿವೇಶ ಸೃಷ್ಟಿಯಾದಾಗ ಗಾಳಿಯ ಸುರುಳಿಯಾಕಾರದಲ್ಲಿ ಸುತ್ತುವ ಸ್ಥಿತಿ ಉಂಟಾಗುತ್ತದೆ. ಆಗ ಸಮುದ್ರದ ಬದಿಯಲ್ಲಿರುವ ಕಡಿದಾದ ಬಂಡೆಯು ಗಾಳಿಯನ್ನು ವೃತ್ತದ ಆಕಾರದಲ್ಲಿ ಸುತ್ತಿ ಎಸೆಯುತ್ತದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೆಚ್ಚಿನ ನೀರ ಸುಳಿಗಂಬಗಳು ನೀರನ್ನು ಎತ್ತುವುದಿಲ್ಲ. ಏಕೆಂದರೆ ಅವರು ದುರ್ಬಲವಾಗಿರುತ್ತವೆ. ಕೇವಲ ಗಾಳಿಯ ಸ್ತಂಬಗಳನ್ನು ಮಾತ್ರ ಸುತ್ತಾಡಿಸುತ್ತವೆ.

ಸ್ಥಿರತೆ ಕಳೆದುಕೊಂಡ ವಿಡಿಯೋ

ಸ್ಥಿರತೆ ಕಳೆದುಕೊಂಡ ವಿಡಿಯೋ

ಕಾರ್ಯನಿರ್ವಹಣೆಯ ಕೇಂದ್ರದಲ್ಲಿರುವ ನಮಗೆ ಇದು ನೀರಸುಳಿಗಂಬದಂತೆ ಕಾಣಿಸುತ್ತದೆ. ಸಣ್ಣ ಪ್ರಮಾಣದ ಸುಂಟರಗಾಳಿಯೊಂದು ನೀರಿನ ಮೇಲೆ ರಚನೆಯಾದಾಗ ಇದು ಸೃಷ್ಟಿಯಾಗಿರುವಂತೆ ಕಾಣಿಸುತ್ತದೆ. ಭಾರಿ ಮಳೆಯಿಂದ ಈ ಪ್ರದೇಶದಲ್ಲಿ ಹವಾಮಾನ ಸ್ಥಿರತೆ ಕಳೆದುಕೊಂಡಿದೆ. ಇದು ನೀರಸುಳಿಗಂಬ ಹುಟ್ಟಲು ಕಾರಣವಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದು ಅಪರೂಪದ್ದೇನಲ್ಲ

ಇಂತಹ ದೃಶ್ಯಗಳು ಕಣ್ಣಿಗೆ ಸಿಗುವುದು ಬಹಳ ಅಪರೂಪ. ಈ ಘಟನೆ ಅತ್ಯಂತ ನಯನಮನೋಹರವಾಗಿದೆ ಎಂದು ಹಿರಿಯ ಹವಾಮಾನ ತಜ್ಞ ಗ್ರೆಗ್ ಡ್ಯೂಹರ್ಸ್ಟ್ ತಿಳಿಸಿದ್ದಾರೆ.

English summary
A video captured in Faroe Islands a column of water flowing upwards. Experts believe the vortex was a water spout.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X