ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷದ ನಂತರ ಭೂಮಿಗೆ ಬಂದವನ ಮೊದಲ ದಿನದ ಅನುಭವ

|
Google Oneindia Kannada News

ವಾಷಿಂಗ್ ಟನ್ ಡಿಸಿ, ಮಾರ್ಚ್, 03: ಓ ಹೋ...ಸೂರ್ಯೋದಯವೆಂದರೆ ಹೀಗೆ ಇರುತ್ತದೆಯೇ? ಬೆಳಗಿನ ತಿಂಡಿಯನ್ನು ತಿನ್ನಲೇ ಬೇಕೆ? ಹೂವಿನ ಅಂದಕ್ಕೆ ಸಾಟಿ ಯಾವುದು? ಅರೇ ಇದೇನು ಅಸಂಬದ್ಧ ಪ್ರಶ್ನೆಗಳನ್ನು ಕೇಳುತ್ತಿದ್ದೇವೆ ಎಂದು ಅಂದುಕೊಳ್ಳಬೇಡಿ.

ನಾವು ಸ್ಕಾಟ್ ಕೆಲ್ಲಿಯ ರೀತಿ ಮಾತನಾಡುತ್ತಿದ್ದೇವೆ. 340 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದು ಬಂದ ಅಮೆರಿಕದ ಸ್ಕಾಟ್ ಕೆಲ್ಲಿ ವರ್ಷದ ನಂತರ ಭೂಮಿಯ ಮೇಲಿನ ಸೂರ್ಯೋದಯವನ್ನು ಗುರುವಾರ ಆಸ್ವಾದಿಸಿದರು.[ಚಿತ್ರಗಳು: ವರ್ಷದ ನಂತರ ಭೂಮಿಗೆ ಬಂದ ಗಗನಯಾತ್ರಿ]

ಪರ ಊರಿನಲ್ಲೋ, ಮಹಾನಗರಿಯಲ್ಲೋ ವಾಸವಿರುವ ನಮಗೆ ತಿಂಗಳ ನಂತರ ಮನೆಗೆ ಹೋದಾಗ ಗೊತ್ತಿಲ್ಲದೇ ಕಣ್ಣಲ್ಲಿ ನೀರು ಜಿನುಗುತ್ತದೆ. ಬಾಲ್ಯ, ಅಡ್ಡಾಡಿದ ದಾರಿ, ಹತ್ತಿದ ಮರ, ಕಿತ್ತ ಕಾಯಿ ಎಲ್ಲವೂ ನೆನಪಾಗುತ್ತದೆ. ಇನ್ನು ಇಡೀ ಕುಟುಂಬವನ್ನು, ಅಷ್ಟೆ ಏಕೆ ಊರನ್ನು , ನಾಡನ್ನು , ಇಡೀ ಭೂಮಿಯನ್ನೇ ತೊರೆದು ವರ್ಷ ಕಾಲ ಅಂತರಿಕ್ಷದಲ್ಲಿ ಇದ್ದು ವಾಪಸ್ ಬಂದವನಿಗೆ ಹೇಗನ್ನಿಸಿರಬೇಕು.

ಬಾಹ್ಯಾಕಾಶದಲ್ಲಿ ಸುಮಾರು ಒಂದು ವರ್ಷ ಕಳೆದ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ನಾಸಾ) ವಿಜ್ಞಾನಿ ಸ್ಕಾಟ್ ಕೆಲ್ಲಿ ಬುಧವಾರ ಮಾರ್ಚ್ 2 ರಂದು ಭೂಮಿಗೆ ಬಂದಿಳಿದಿದ್ದರು. ಬಂದಿಳಿದ ಮೇಲೆ ನಡೆಯುತ್ತಿರುವ ದಿನಚರಿಯ ಒಂದೊಂದು ಘಟನಾವಳಿಗಳನ್ನು ಟ್ವಿಟರ್ ನಲ್ಲಿ ದಾಖಲಿಸುತ್ತ ತನ್ನ ಅನುಭವ ಹಂಚಿಕೊಂಡಿದ್ದಾರೆ. ಸ್ಕಾಟ್ ಕೆಲ್ಲಿ ನಿಮಗೊಂದು ಸಲಾಂ.. ಅವರ ಅವರ ಮಾತುಗಳಲ್ಲೆ ಭೂಮಿಯ ಮೇಲಿನ ಮೊದಲ ದಿನದ ಅನುಭವ ಕೇಳಿಕೊಂಡು ಬನ್ನಿ...

ಭೂಮಿಯ ಮೇಲೆ ಹೂವಿನ ಅಂದ

ಭೂಮಿಯ ಮೇಲೆ ಹೂವಿನ ಅಂದ

ಬಾಹ್ಯಾಕಾಶದಿಂದ ಬಂದಿಳಿದ ನನಗೆ ಕಜಕಿಸ್ತಾನದಲ್ಲಿ ನೀಡಿದ ಹೋವಿನ ಅಂದ ಹೇಗೆ ವರ್ಣಿಸಲು ಸಾಧ್ಯ?

ಅಧ್ಯಕ್ಷರೇ ಧನ್ಯವಾದ

ಅಧ್ಯಕ್ಷರೇ ಧನ್ಯವಾದ

ಅಧ್ಯಕ್ಷರೇ ಇಷ್ಟು ದಿನ ನೀವು ನೀಡಿದ ಸಹಕಾರಕ್ಕೆ ಧನ್ಯವಾದ. ನಾನು ಮನೆಗೆ ತೆರಳುತ್ತಿದ್ದೇನೆ.

ಸ್ವಾದ ಹೆಚ್ಚಿಸಿದ ಸಲಾಡ್

ಸ್ವಾದ ಹೆಚ್ಚಿಸಿದ ಸಲಾಡ್

ಭೂಮಿಗೆ ಬಂದಿಳಿದ ನನಗೆ ಸಿಕ್ಕ ಮೊದಲ ಸಲಾಡ್ ನಿಜಕ್ಕೂ ರುಚಿಕರವಾಗಿತ್ತು.

ಭೂಮಿಯ ಮೇಲೆ ಹಜ್ಜೆ

ಭೂಮಿಯ ಮೇಲೆ ಹಜ್ಜೆ

ಭೂಮಿಯ ಮೇಲೆ ಈಗಷ್ಟೇ ಹೆಜ್ಜೆ ಇಟ್ಟು ನನ್ನ ಮನೆ ಕಡೆ ಪ್ರಯಾಣ ಮಾಡುತ್ತಿದ್ದೇನೆ.

ಅಂತರಿಕ್ಷದಲ್ಲಿ ಕೊನೆ ಸೂರ್ಯಾಸ್ತ

ಬಾಃfಯಾಕಾಶ ನಿಲ್ಲಾಣವನ್ನು ತೊರೆಯುವ ಮುನ್ನ ಅಂತರಿಕ್ಷದಲ್ಲಿ ನಾನು ಕಂಡ ಕೊನೆಯ ಸೂರ್ಯಾಸ್ತವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ವರ್ಷದ ನಂತರ ಕುಟುಂಬದೊಂದಿಗೆ

ವರ್ಷದ ನಂತರ ಕುಟುಂಬದವರನ್ನು ಭೇಟಿಯಾದ ಕೆಲ್ಲಿ... ಇದನ್ನು ಹೇಳಲು ನಮ್ಮ ಬಳಿ ಪದಗಳಿಲ್ಲ..

English summary
After year in space Scoot Kelly reunited with relatives. He shared his first day Experience in earth through twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X