ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಕಾಟ್ಲೆಂಡ್ ಒಂದು ಸ್ವತಂತ್ರ ದೇಶವಾಗಬೇಕೆ? NO

By Mahesh
|
Google Oneindia Kannada News

ಲಂಡನ್, ಸೆ.19: ಬ್ರಿಟನ್‌ನಿಂದ ಪ್ರತ್ಯೇಕಗೊಂಡು ಸ್ಕಾಟ್ಲೆಂಡ್ ಒಂದು ಸ್ವತಂತ್ರ ದೇಶವಾಗಬೇಕೆ? ಎಂಬ ಬಿಲಿಯನ್ ಡಾಲರ್ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಅಖಂಡ ಯುನೈಟೆಡ್ ಕಿಂಗ್ಡಮ್ ಭಾಗವಾಗಿ ಸ್ಕಾಟ್ಲೆಂಡ್ ಮುಂದುವರೆಯಲಿ ಎಂದು ಜನಾಭಿಪ್ರಾಯ ಸಿಕ್ಕಿದೆ. ಇಂಗ್ಲೆಂಡ್ ಹಾಗೂ ಸ್ಕಾಟ್ಲೆಂಡ್ ಪ್ರಜೆಗಳಲ್ಲದೆ ವಿಶ್ವದ ಎಲ್ಲೆಡೆ ಕುತೂಹಲದಿಂದ ಕಾಯುತ್ತಿದ್ದ ಫಲಿತಾಂಶ ಶುಕ್ರವಾರ ಹೊರಬಿದ್ದಿದೆ.

ಸುಮಾರು ಮುನ್ನೂರಕ್ಕೂ ಅಧಿಕ ವರ್ಷಗಳಿಂದ ಯುನೈಟೆಡ್ ಕಿಂಗ್‍ಡಮ್ (ಯುಕೆ) ಒಕ್ಕೂಟದ ಅಂಗವಾಗಿದ್ದ ಸ್ಕಾಟ್ಲೆಂಡ್ ಅನ್ನು ಸ್ವತಂತ್ರ ರಾಷ್ಟ್ರವಾಗುವ ಕನಸು ಈಡೇರಲು ಇನ್ನೂ ಕಾಲ ಕೂಡಿ ಬಂದಿಲ್ಲ.

ಜನಾಭಿಪ್ರಾಯ ಸಂಗ್ರಹದ ವೇಳೆ ಶೇ.55.4ರಷ್ಟು ಜನ ಬ್ರಿಟನ್‍ನಲ್ಲೇ ಉಳಿಯಬೇಕೆಂಬ ಅಪೇಕ್ಷೆ ವ್ಯಕ್ತಪಡಿಸಿದ್ದರೆ. ಸ್ವತಂತ್ರ ರಾಷ್ಟ್ರದ ಪರ ಶೇ.44.7ರಷ್ಟು ಜನ ಮತ ಚಲಾಯಿಸಿದ್ದಾರೆ. 32 ಪ್ರಾಂತ್ಯಗಳಲ್ಲಿ ಶೇ 84.6ರಷ್ಟು ಮತದಾನ ನಡೆದಿದ್ದು 28 ಪ್ರಾಂತ್ಯಗಳ ಜನತೆ NO ಎಂಬ ಬಟನ್ ಒತ್ತಿದ್ದಾರೆ. ಸ್ಕಾಟ್ಲೆಂಡ್ ಹಾಗೂ ಇಂಗ್ಲೆಂಡ್ ನಡುವೆ ಇದು 'new and fair settlement' ಎಂದು ಇಂಗ್ಲೆಂಡ್ ಪ್ರಧಾನಿ ಡೇವಿಡ್ ಕೆಮರೂನ್ ಪ್ರತಿಕ್ರಿಯಿಸಿದ್ದಾರೆ.

ಸ್ಕಾಟ್ಲೆಂಡ್ ದೇಶಾದ್ಯಂತ 579 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ನಿನ್ನೆ ಮಧ್ಯರಾತ್ರಿ 1.30ರವರೆಗೂ ನಡೆದ ಮತದಾನ ಪ್ರಕ್ರಿಯೆಯ ಫಲಿತಾಂಶಕ್ಕಾಗಿ ಎಲ್ಲರೂ ಕಾದಿದ್ದರು. ಶುಕ್ರವಾರ ಮತ ಎಣಿಕೆ ನಡೆಸಲಾಗಿದ್ದು, ಯುಕೆ ಒಕ್ಕೂಟದ ಅಂಗವಾಗಿ ಸ್ಕಾಟ್ಲೆಂಡ್ ಮುಂದುವರೆಯಲಿ ಎಂದು ಜನ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಈ ಕುರಿತಂತೆ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ. [ನೂರಾರು ಸಮೀಕ್ಷೆಗಳು ಹೇಳಿದ್ದೇನು?]

Scotland votes “no” on independence, will remain in the UK

ಜನಾಭಿಪ್ರಾಯ ಸಂಗ್ರಹಕ್ಕೂ ಮುನ್ನ ನಡೆದ ಹಲವಾರು ಮತ ಸಮೀಕ್ಷೆಗಳು ಕೂಡ ಸ್ಕಾಟ್ಲೆಂಡ್, ಬ್ರಿಟನ್ ಒಕ್ಕೂಟದಲ್ಲೇ ಉಳಿಯಲಿದೆ ಎಂದು ಭವಿಷ್ಯ ನುಡಿದಿದ್ದರು. ಬಿಬಿಸಿ ಕೂಡ ಇದೇ ಭವಿಷ್ಯವನ್ನು ದೃಢಪಡಿಸಿತ್ತು. ಅದಕ್ಕೆ ತಕ್ಕಂತೆ ಬ್ರಿಟನ್ ಒಕ್ಕೂಟದಿಂದ ಪ್ರತ್ಯೇಕಗೊಳ್ಳುವ ಸ್ಕಾಟ್ಲೆಂಡ್ ನ ಆಸೆಗೆ ತಣ್ಣೀರೆರಚಿದಂತಾಗಿದೆ. ಅಂತೂ ಸ್ಕಾಟ್ಲೆಂಡ್ ಇನ್ನು ಮುಂದೆಯೂ ಯುನೈಟೆಡ್ ಕಿಂಗ್ಡಮ್ ನ ಒಕ್ಕೂಟ ರಾಷ್ಟ್ರವಾಗಿಯೇ ಉಳಿಯಲಿದೆ.

ಸ್ಕಾಟೀಷ್ ನ್ಯಾಷನಲ್ ಪಾರ್ಟಿ ನಾಯಕ ಅಲೆಕ್ಸ್ ಸಾಲ್ಮಂಡ್ ಅವರು ಪ್ರತ್ಯೇಕವಾದಿಗಳ ಗುಂಪಿನ ಮುಖಂಡರಾಗಿ ಜನಾಭಿಪ್ರಾಯ ಸಂಗ್ರಹದಲ್ಲಿ ತೊಡಗಿದ್ದಾರೆ. ಇದರ ವಿರುದ್ಧವಾಗಿ ಬ್ರಿಟಿಷ್ ಸಂಸ್ಥಾನದ ಮಾಜಿ ವಿತ್ತ ಸಚಿವ ಅಲಿಸ್ಟರ್ ಡಾರ್ಲಿಂಗ್ ಅವರು 'ಬೆಟರ್ ಟುಗೆದರ್ ' ಎಂಬ ಅಭಿಯಾನ ಹಮ್ಮಿಕೊಂಡು ಐಕ್ಯಮತ ಸಂದೇಶ ಸಾರಿದ್ದರು.

ಅಕ್ಟೋಬರ್ 2012ರಲ್ಲಿ ಬ್ರಿಟಿಷರ ಪ್ರಧಾನಿ ಡೇವಿಡ್ ಕೆಮರೂನ್ ಹಾಗೂ ಸ್ಕಾಟ್ಲೆಂಡ್ ನ ಪ್ರಥಮ ಸಚಿವ ಅಲೆಕ್ಸ್ ಸಾಲ್ಮೊಂಡ್ ಅವರ ಜೊತೆ ಎಡಿನ್ ಬರೋ ಒಪ್ಪಂದ ಏರ್ಪಟ್ಟಿತು. ಅದರಂತೆ 2014ರ ಚಳಿಗಾಲದಲ್ಲಿ ಸ್ಕಾಟ್ಲೆಂಡಿಗೆ ಪ್ರತ್ಯೇಕ ರಾಷ್ಟ್ರ ಸ್ಥಾನಮಾನ ನೀಡುವ ಬಗ್ಗೆ ಒಪ್ಪಂದಕ್ಕೆ ಬರಲಾಯಿತು. ಅದರಂತೆ should Scotland be an independent country ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗಲಾಯಿತು. ಇದಕ್ಕೆ ಉತ್ತರ NO ಎಂದು ಸಿಕ್ಕಿದೆ.

English summary
Scotland votes "no" on independence, will remain in the UK. Scottish voters have resoundingly rejected independence, deciding to remain part of the United Kingdom after a historic referendum that shook the country to its core.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X