ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಗ ಕೊವಿಡ್ 19 ಲಕ್ಷಣ ಜ್ವರ ಮಾತ್ರ ಅಲ್ಲ , ವಿಜ್ಞಾನಿಗಳು ಹೇಳಿದ್ದೇನು?

|
Google Oneindia Kannada News

ಲಾಸ್ ಏಂಜಲೀಸ್, ಆಗಸ್ಟ್ 15: ಕೊವಿಡ್ 19 ರೋಗದಲ್ಲಿ ಮೊದಲು ಕಾಣಿಸಿಕೊಳ್ಳುವ ಲಕ್ಷಣಗಗಳ ಕುರಿತು ವಿಜ್ಞಾನಿಗಳು ಹೊಸ ಪಟ್ಟಿಯನ್ನು ತಯಾರಿಸಿದ್ದು, ಇದು ಬೇರೆ ಕಾಯಿಲೆಗಳನ್ನು ರೋಗಿಗಳು ತ್ವರಿತವಾಗಿ ಆರೈಕೆಯನ್ನು ಪಡೆಯಲು ಸಹಾಯ ಮಾಡುತ್ತದೆ.

Recommended Video

ರಷ್ಯಾ ಅಧ್ಯಕ್ಷ ಪುಟಿನ್ ನಡೆ ಬಗ್ಗೆ ಪಾಶ್ಚಿಮಾತ್ಯ ದೇಶಗಳ ಮುನಿಸು | Oneindia Kannada

ಫ್ರಾಂಟಿಯರ್ಸ್ ಇನ್ ಪಬ್ಲಿಕ್ ಹೆಲ್ತ್‌ನಲ್ಲಿ ಪ್ರಕಟವಾದ ಅಧ್ಯಯನದ ವರದಿ ಪ್ರಕಾರ ಕೊವಿಡ್ ರೋಗಿಗಳಲ್ಲಿ ಮೊದಲು ಜ್ವರ, ನಂತರ ಕೆಮ್ಮು, ಸ್ನಾಯು ನೋವು ಮತ್ತು ವಾಕರಿಕೆ , ವಾಂತಿ ಮತ್ತು ಅತಿಸಾರ ಹೀಗೆ ಕ್ರಮವಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಲಕ್ಷಣ ಕಾಣಿಸಿಕೊಂಡ ಬಳಿಕ ದೇಹದೊಳಗೆ ಕೊರೊನಾ ಸೋಂಕು ಎಷ್ಟು ದಿನ ಇರುತ್ತೆ? ಲಕ್ಷಣ ಕಾಣಿಸಿಕೊಂಡ ಬಳಿಕ ದೇಹದೊಳಗೆ ಕೊರೊನಾ ಸೋಂಕು ಎಷ್ಟು ದಿನ ಇರುತ್ತೆ?

ಆರಂಭಿಕವಾಗಿ ಅತಿಸಾರವಿದ್ದರೆ ಅದೂ ಕೂಡ ರೋಗದ ಲಕ್ಷಣವನ್ನೇ ಸೂಚಿಸುತ್ತದೆ. ಅತಿಸಾರದ ಬಳಿಕ ನ್ಯುಮೋನಿಯಾ ಅಥವಾ ಉಸಿರಾಟದ ತೊಂದರೆ ಕಾಣಿಸುತ್ತದೆ.
ಆದರೆ ಕೊರೊನಾ ಸೋಂಕಿತರಲ್ಲಿ ಅತಿಯಾಗಿ ಜ್ವರ ಕಾಣಿಸಿಕೊಂಡಿದೆ. ಕಡಿಮೆ ಪ್ರಮಾಣದ ರೋಗಿಗಳಲ್ಲಿ ಅತಿಸಾರ ಲಕ್ಷಣವಿರುವುದು ಕಂಡುಬಂದಿದೆ.

Scientists Say Theyve Decoded The Order Of COVID-19 Symptoms

ದಕ್ಷಿಣ ಕ್ಯಾಲಿಫೋರ್ನಿಯಾದ ಔಷಧ ಮತ್ತು ಬಯೋಮೆಡಿಕಲ್ ಎಂಜಿನಿಯರಿಂಗ್ ಪ್ರಾಧ್ಯಾಪಕರು ನೀಡಿರುವ ಮಾಹಿತಿ ಪ್ರಕಾರ ಸಾಮಾನ್ಯ ಜ್ವರದಂತಹ ಲಕ್ಷಣಗಳು ಕಂಡು ಬಂದರೂ ಕೂಡ ವೈದ್ಯರ ಬಳಿ ಹೋಗಲೇಬೇಕಿದೆ.

ರೋಗಿಗಳ ಆರೈಕೆಗೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಅವರ ಸ್ಥಿತಿ ಹದಗೆಡದಂತೆ ತಡೆಯಲು ಏನು ಮಾಡಬೇಕು ಎಂದು ಆಲೋಚಿಸಬೇಕು.

ಸಾಂಕ್ರಾಮಿಕ ರೋಗದ ಆರಂಭಕ್ಕಿಂತಲೂ ಈಗ ಉತ್ತಮ ಚಿಕಿತ್ಸೆ ಲಭ್ಯವಿದೆ. ರೋಗವನ್ನು ಮೊದಲೇ ಗುರುತಿಸಲು ಸಾಧ್ಯವಾಗುತ್ತಿರುವುರಿಂದ ಆಸ್ಪತ್ರೆಗೆ ಬೇಗ ದಾಖಲಾಗಬಹುದಾಗಿದೆ.

ಇನ್‌ಫ್ಲುಯೆನ್ಜಾ ಹಾಗೂ ಕೊರೊನಾ ಲಕ್ಷಣವನ್ನು ಹೋಲಿಕೆ ಮಾಡಲಾಯಿತು. ಅಮೆರಿಕದ 2470 ಫ್ಲೂಗೆ ಸಂಬಂಧಿಸಿದ ಪ್ರಕರಣವನ್ನು ಗಮನಿಸಲಾಗಿದೆ. ಅಮೆರಿಕ, ಯುರೋಪ್ ನಲ್ಲಿ 1994 ರಿಂದ 1998ರವರೆಗೆ 2470 ಪ್ರಕರಣಗಳು ಪತ್ತೆಯಾಗಿವೆ.

ಲಕ್ಷಣಗಳ ಕುರಿತು ಮಾತನಾಡುವುದಾದರೆ ಪ್ರತಿಯೊಂದು ರೋಗದ ಲಕ್ಷಣಗಳು ವಿಭಿನ್ನವಾಗಿರುತ್ತದೆ. ಯಾರಾದರೂ ಕೊವಿಡ್ ಅಥವಾ ಬೇರೆ ರೋಗವನ್ನು ಹೊಂದಿದ್ದಾರೆ ಎಂಬುದನ್ನು ಬಹುಬೇಗ ಗುರುತಿಸಬಹುದಾಗಿದೆ. ಇದು ಚಿಕಿತ್ಸೆಗೆ ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

ಕೊವಿಡ್ 19, ಸಾರ್ಸ್, ಮರ್ಸ್ ರೋಗದ ಪ್ರಮುಖ ಎರಡು ಲಕ್ಷಣಗಳು ಜ್ವರ ಹಾಗೂ ಕಫ, ಕೆಲವೊಂದು ಬಾರಿ ವಾಂತಿ ಕೂಡ ಆಗುತ್ತದೆ.

English summary
Scientists have found the likely order in which COVID-19 symptoms first appear, an advance that may help clinicians rule out other diseases, and help patients seek care promptly or decide sooner to self-isolate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X