ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ಬಾರಿಗೆ ಕಪ್ಪು ಕುಳಿಯ ಚಿತ್ರ ಬಿಡುಗಡೆ, ಐನ್ ಸ್ಟೀನ್ ಲೆಕ್ಕಾಚಾರ ನಿಜ!

|
Google Oneindia Kannada News

ಇದೇ ಮೊದಲ ಬಾರಿಗೆ ವಿಜ್ಞಾನಿಗಳು ಕಪ್ಪು ಕುಳಿಯ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಇದು ಬಹಳ ಬಿಸಿ ಆಗಿದ್ದು, ಅದರ ತುದಿಯಲ್ಲಿ ನೆರಳು ಕಂಡುಬರುತ್ತಿದೆ. ಸುತ್ತಲು ಹಬ್ಬಿರುವ ಬೆಳಕು ಅದ್ಭುತವಾಗಿ ಕಾಣುತ್ತದೆ. ಜಗತ್ತಿನಾದ್ಯಂತ ಇರುವ ಎಂಟು ರೇಡಿಯೋ ಟೆಲಿಸ್ಕೋಪ್ ಮೂಲಕ ಮಾಹಿತಿ ಕಲೆಹಾಕಲಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಖಗೋಳತಜ್ಞರು ಈ ಚಿತ್ರವನ್ನು ರೂಪಿಸಿದ್ದು, ದೊಡ್ಡ ಕಪ್ಪು ಕುಳಿಯ ಸುತ್ತ ಬೆಳಕು ಕಂಗೊಳಿಸುತ್ತಿದೆ. ಬೆಳಕು ಹೀರಿಕೊಳ್ಳುವ ಈ ದೈತ್ಯದ ಬಗ್ಗೆ ಶತಮಾನದ ಹಿಂದೆಯೇ ಐನ್ ಸ್ಟೀನ್ ತಿಳಿಸಿದ್ದರು. ದಶಕಗಳ ಕಾಲ ಇದನ್ನು ಪರಿಶೀಲಿಸಿ ಖಾತ್ರಿ ಪಡಿಸಲಾಗಿದೆ. ಈ ಕಪ್ಪು ಕುಳಿ ನೋಡಲು ಉರಿಯುವ ಕಿತ್ತಲೆ, ಹಳದಿ ಹಾಗೂ ಕಪ್ಪು ಉಂಗುರದಂತೆ ಕಂಡುಬರುತ್ತದೆ.

ನಾವು ಏನನ್ನು ನೊಡಲು ಸಾಧ್ಯವಿಲ್ಲ ಅಂದುಕೊಂಡಿದ್ದೆವೋ ಅದನ್ನು ನೋಡಿದ್ದೇವೆ. ಕಪ್ಪು ಕುಳಿಯನ್ನು ನೋಡಿ, ಚಿತ್ರ್ ತೆಗೆದಿದ್ದೇವೆ. ಅದು ಇಲ್ಲಿದೆ ಎಂದು ಹಾರ್ವರ್ಡ್ ನ ಶೆಪೆರ್ಡ್ ಡೊಯಿಲೆಮನ್ ಹೇಳಿದ್ದಾರೆ.

Scientists reveal first image ever made of a black hole

ಸಣ್ಣ ಪ್ರಮಾಣದ ಕಪ್ಪು ಕುಳಿಗಳಾದರೆ ಪತನವಾಗುವ ನಕ್ಷತ್ರದಿಂದ ಬರುತ್ತದೆ. ಆದರೆ ದೊಡ್ಡ ಪ್ರಮಾಣದ ಕಪ್ಪು ಕುಳಿಯ ಮೂಲ ನಿಗೂಢವಾಗಿದೆ. ಇವು ಬಹುತೇಕ ಗ್ಯಾಲಕ್ಸಿಗಳ ಮಧ್ಯದಲ್ಲಿರುತ್ತದೆ. ನಮ್ಮ ಗ್ಯಾಲಕ್ಸಿಯಲ್ಲೂ ಇದೆ. ಆವು ಎಷ್ಟು ಒತ್ತೊತ್ತಾಗಿ ಇರುತ್ತವೆ ಅಂದರೆ, ಅದರ ಗುರುತ್ವಾಕರ್ಷಣ ಬಲದಿಂದ ತಪ್ಪಿಸಿಕೊಂಡು ಬೆಳಕು ಕೂಡ ಮುಂದೆ ಸಾಗಲು ಸಾಧ್ಯವಿಲ್ಲ.

ಮೂರು ವರ್ಷಗಳ ಹಿಂದೆ ವಿಜ್ಞಾನಿಗಳು ತೀರಾ ಸೂಕ್ಷ್ಮವಾದ ಪರಿಶೀಲನಾ ವ್ಯವಸ್ಥೆ ಬಳಸಿ, ಗುರುತ್ವಾಕರ್ಷಣ ತರಂಗ ಸೃಷ್ಟಿಸುವ ಎರಡು ಚಿಕ್ಕ ಕಪ್ಪು ಕುಳಿ ಒಂದಾಗುವ ಶಬ್ದ ಕೇಳಿಸಿಕೊಂಡಿದ್ದರು. ಐನ್ ಸ್ಟೀನ್ ನುಡಿದಂತೆಯೇ ಅದು ಇತ್ತು. ಹೊಸ ಚಿತ್ರವನ್ನು ಜಗತ್ತಿನ ಹಲವು ಪತ್ರಿಕಾ ಗೋಷ್ಠಿಗಳಲ್ಲಿ ಘೋಷಣೆ ಮಾಡಲಾಗಿತ್ತು.

English summary
Scientists on Wednesday revealed the first image ever made of a black hole, depicting its hot, shadowy edges where light bends around itself in a cosmic funhouse effect.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X