ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಕಟ್ಟಿಹಾಕುವಲ್ಲಿ ಸಫಲವಾಯಿತೇ ಇಸ್ರೇಲ್: ಲಸಿಕೆ ತಯಾರು?

|
Google Oneindia Kannada News

ಕೊರೊನಾದಿಂದ ಕಂಗೆಟ್ಟಿರುವ ವಿಶ್ವ ಪ್ರಜೆಗಳಿಗೆ ಸಂತಸದ ಸುದ್ದಿಯೊಂದು ಸದ್ಯದಲ್ಲೇ ಹೊರಬೀಳಲಿದೆ. ಭಾರತದ ಮಿತ್ರ ರಾಷ್ಟ್ರ ಇಸ್ರೇಲ್ ಕೊರೊನಾ ವೈರಸ್ ಸೋಂಕಿಗೆ ಶಕ್ತ ಲಸಿಕೆ ಕಂಡು ಹಿಡಿಯುವ ಕಾರ್ಯದಲ್ಲಿ ಪ್ರಗತಿ ಸಾಧಿಸಿದೆ.

ಮಾಹಾಮಾರಿ ಕೋವಿಡ್-19 ಗೆ ಲಸಿಕೆ ಕಂಡು ಹಿಡಿಯುವ ಕಾರ್ಯ ಪೂರ್ಣಗೊಂಡಿದೆ. ಸದ್ಯದಲ್ಲೇ ಇಸ್ರೇಲ್ ನ ವಿಜ್ಞಾನಿಗಳು ಈ ಕುರಿತು ಘೋಷಣೆ ಮಾಡಲಿದ್ದಾರೆ ಎಂದು ಇಸ್ರೇಲ್ ನ ಪ್ರಮುಖ ದಿನಪತ್ರಿಕೆ Ha'aretz ವರದಿ ಮಾಡಿದೆ.

ಸಮಾಧಾನ ತಂದ ಹೊಸ ಸಂಶೋಧನೆ: ಸಕಲ ಜ್ವರಗಳಿಗೂ ಒಂದೇ ಲಸಿಕೆ!ಸಮಾಧಾನ ತಂದ ಹೊಸ ಸಂಶೋಧನೆ: ಸಕಲ ಜ್ವರಗಳಿಗೂ ಒಂದೇ ಲಸಿಕೆ!

ಈಗಾಗಲೇ ವೈರಸ್ ಹೊಂದಿರುವವರಲ್ಲಿ antibodies ಗಳ ಉತ್ಪಾದನೆ ಮತ್ತು ಲಸಿಕೆ ಅಭಿವೃದ್ಧಿ ಸೇರಿದಂತೆ ವೈರಸ್ ನ ಜೈವಿಕ ಕಾರ್ಯವಿಧಾನ ಮತ್ತು ಗುಣಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಇಸ್ರೇಲ್ ನ 'ಇನ್ಸ್ಟಿಟ್ಯೂಟ್ ಫಾರ್ ಬಯೋಲಾಜಿಕಲ್ ರಿಸರ್ಚ್'ನ ವಿಜ್ಞಾನಿಗಳು ಮಹತ್ವದ ಹೆಜ್ಜೆ ಇಟ್ಟಿದ್ದಾರೆ ಎಂದು ವೈದ್ಯಕೀಯ ಮೂಲಗಳಿಂದ ಮಾಹಿತಿ ಪಡೆದು ಇಸ್ರೇಲ್ ನ ದಿನಪತ್ರಿಕೆಯಲ್ಲಿ Ha'aretz ವರದಿ ಪ್ರಕಟಿಸಿದೆ.

ಖಚಿತ ಪಡಿಸದ ಇಸ್ರೇಲ್ ರಕ್ಷಣಾ ಸಚಿವಾಲಯ

ಖಚಿತ ಪಡಿಸದ ಇಸ್ರೇಲ್ ರಕ್ಷಣಾ ಸಚಿವಾಲಯ

'ಕೋವಿಡ್19'ಗೆ ಲಸಿಕೆ ಪರಿಣಾಮಕಾರಿ ಮತ್ತು ಬಳಕೆಗೆ ಸುರಕ್ಷಿತ ಎಂದು ಪರಿಗಣಿಸುವ ಮೊದಲು ಸರಣಿ ಪರೀಕ್ಷೆ ಮತ್ತು ಪ್ರಯೋಗಗಳ ಅವಶ್ಯಕತೆ ಇದೆ ಎಂದು ತನ್ನ ವರದಿಯಲ್ಲಿ ಇಸ್ರೇಲ್ ದಿನಪತ್ರಿಕೆ ತಿಳಿಸಿದೆ. ಆದ್ರೆ ಈ ಲಸಿಕೆಯ ಅಭಿವೃದ್ಧಿ ಬಗ್ಗೆ ಪತ್ರಿಕೆಗೆ ಇಸ್ರೇಲ್ ನ ರಕ್ಷಣಾ ಸಚಿವಾಲಯ ಖಚಿತ ಪಡಿಸಿಲ್ಲ.

ಪ್ರಗತಿ ಸಾಧಿಸಿಲ್ಲ

ಪ್ರಗತಿ ಸಾಧಿಸಿಲ್ಲ

''ಕೊರೊನಾ ವೈರಸ್ ಗೆ ಲಸಿಕೆ ಕಂಡು ಹಿಡಿಯಲು ಅಥವಾ ಪರೀಕ್ಷಾ ಕಿಟ್ ಗಳನ್ನು ಅಭಿವೃದ್ಧಿ ಪಡಿಸಲು 'ಇನ್ಸ್ಟಿಟ್ಯೂಟ್ ಫಾರ್ ಬಯೋಲಾಜಿಕಲ್ ರಿಸರ್ಚ್'ನ ವಿಜ್ಞಾನಿಗಳ ಪ್ರಯತ್ನದಲ್ಲಿ ಯಾವುದೇ ಪ್ರಗತಿಯಿಲ್ಲ. ಲಸಿಕೆ ಕಂಡು ಹಿಡಿಯುವ ಕಾರ್ಯಕ್ಕೆ ಹೆಚ್ಚು ಸಮಯ ಬೇಕು'' ಎಂದು ಇಸ್ರೇಲ್ ದಿನಪತ್ರಿಕೆಗೆ ರಕ್ಷಣಾ ಸಚಿವಾಲಯ ತಿಳಿಸಿದೆ.

ಅನುಭವಿ ಸಂಶೋಧಕರನ್ನು ಒಳಗೊಂಡಿದೆ

ಅನುಭವಿ ಸಂಶೋಧಕರನ್ನು ಒಳಗೊಂಡಿದೆ

''ಇನ್ಸ್ಟಿಟ್ಯೂಟ್ ಫಾರ್ ಬಯೋಲಾಜಿಕಲ್ ರಿಸರ್ಚ್' ವಿಶ್ವಪ್ರಸಿದ್ಧ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಾಗಿದ್ದು, ಇದು ಅನುಭವಿ ಸಂಶೋಧಕರು ಮತ್ತು ವಿಜ್ಞಾನಿಗಳನ್ನೊಳಗೊಂಡಿದೆ. ವೈರಸ್ ಗೆ ವೈದ್ಯಕೀಯ ಪರಿಹಾರವನ್ನು ಸಂಶೋಧಿಸುವ ಮತ್ತು ಅಭಿವೃದ್ಧಿಪಡಿಸುವ ಬಗ್ಗೆ 50 ಕ್ಕೂ ಹೆಚ್ಚು ಅನುಭವಿ ವಿಜ್ಞಾನಿಗಳು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ'' ಎಂದು ಇಸ್ರೇಲ್ ನ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.

ಆದೇಶ ನೀಡಿದ್ದ ಪ್ರಧಾನ ಮಂತ್ರಿ

ಆದೇಶ ನೀಡಿದ್ದ ಪ್ರಧಾನ ಮಂತ್ರಿ

ಫೆಬ್ರವರಿ 1 ರಂದು ಕೋವಿಡ್ -19 ಗೆ ಲಸಿಕೆ ಅಭಿವೃದ್ಧಿಪಡಿಸಲು ಸಂಪನ್ಮೂಲಗಳನ್ನು ವಿನಿಯೋಗಿಸಲು ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಸಂಸ್ಥೆಗೆ ಆದೇಶ ನೀಡಿದ್ದಾರೆ. ಅಂತಹ ಲಸಿಕೆಯ ಅಭಿವೃದ್ಧಿ ಪ್ರಕ್ರಿಯೆಗೆ ದೀರ್ಘ ಸಮಯಾವಕಾಶ ಬೇಕಿದೆ. ಯಾಕಂದ್ರೆ, ಪ್ರಾಣಿಗಳ ಮೇಲೆ ನಡೆಯುವ ಪ್ರಾಯೋಗಿಕ ಪರೀಕ್ಷೆಗಳು ಮತ್ತು ಕ್ಲಿನಿಕಲ್ ಪ್ರಯೋಗಗಳಲ್ಲಿ ಲಸಿಕೆ ಪರಿಣಾಮಕಾರಿ ಫಲಿತಾಂಶ ನೀಡಬೇಕಿದೆ.

ಲಸಿಕೆ ಅಭಿವೃದ್ಧಿ ಪ್ರಕ್ರಿಯೆ ಚುರುಕಾಗಲಿದೆ

ಲಸಿಕೆ ಅಭಿವೃದ್ಧಿ ಪ್ರಕ್ರಿಯೆ ಚುರುಕಾಗಲಿದೆ

ಕೊರೊನಾ ವೈರಸ್ ನಿಂದಾಗಿ ಇಡೀ ವಿಶ್ವದಲ್ಲಿ ಆತಂಕ ಹೆಚ್ಚಾಗಿರುವ ಕಾರಣ, ಲಸಿಕೆ ಅಭಿವೃದ್ಧಿ ಪ್ರಕ್ರಿಯೆ ಚುರುಕಾಗಲಿದೆ. ಲಸಿಕೆ ಅಭಿವೃದ್ಧಿಗಾಗಿ ಜಪಾನ್, ಇಟಲಿ ಮತ್ತು ಇತರ ದೇಶಗಳಿಂದ ಐದು ವೈರಸ್ ಮಾದರಿಗಳನ್ನು ಈಗಾಗಲೇ ಇಸ್ರೇಲ್ ಗೆ ತರಲಾಗಿದೆ. ಅಂದಿನಿಂದ ಲಸಿಕೆ ಅಭಿವೃದ್ಧಿಪಡಿಸಲು ಪ್ರಮುಖ ತಜ್ಞರು ಕಾರ್ಯ ಆರಂಭಿಸಿದ್ದಾರೆ. ಲಸಿಕೆ ಸಿದ್ಧಪಡಿಸಲು ಕೆಲವು ತಿಂಗಳುಗಳಿಂದ ಹಿಡಿದು ಒಂದುವರೆ ವರ್ಷದವರೆಗೂ ಸಮಯ ಬೇಕಾಗಬಹುದು.

ಕ್ರಿನಿಕಲ್ ಪ್ರಯೋಗ ಅವಶ್ಯ

ಕ್ರಿನಿಕಲ್ ಪ್ರಯೋಗ ಅವಶ್ಯ

ಈಗಾಗಲೇ ಸಂಭವನೀಯ ಕೊರೊನಾ ವೈರಸ್ ಲಸಿಕೆಯ ಅಭಿವೃದ್ಧಿ ಪೂರ್ಣಗೊಂಡಿದೆ ಎಂದು ಬಾಸ್ಟನ್ ನ Moderna,Inc ಸಂಸ್ಥೆ ಘೋಷಿಸಿದೆ. ಸದ್ಯ ಆ ಲಸಿಕೆಯನ್ನು ಯು.ಎಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಲರ್ಜಿ ಅಂಡ್ ಇನ್ಫೆಕ್ಷಿಯೆಸ್ ಡಿಸೀಸ್ ಗೆ ಕಳುಹಿಸಲಾಗಿದೆ. ಏಪ್ರಿಲ್ ನಿಂದ ಆ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ನಡೆಯಲಿದೆ. ಇಸ್ರೇಲ್ ನಲ್ಲಿ ಅಭಿವೃದ್ಧಿಪಡಿಸುವ ಲಸಿಕೆಯ ಬಳಕೆಗೆ ಅನುಮೋದನೆ ಪಡೆಯುವ ಮೊದಲು ಇದೇ ರೀತಿಯ ಕ್ಲಿನಿಕಲ್ ಪ್ರಯೋಗದ ಅವಶ್ಯಕತೆ ಇದೆ ಎಂದು ಇಸ್ರೇಲ್ ದಿನಪತ್ರಿಕೆ Ha'aretz ವರದಿ ಮಾಡಿದೆ.

English summary
Scientists in Isreal likely to announce Coronavirus vaccine says report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X