ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

8,00,000 ವರ್ಷಗಳ ಹಿಂದಿನ ಉಲ್ಕಾಶಿಲೆಯ ಕುಳಿ ಪತ್ತೆ

|
Google Oneindia Kannada News

ವಾಷಿಂಗ್ಟನ್, ಜನವರಿ 13: ಸುಮಾರು 7,90,000 ವರ್ಷಗಳ ಹಿಂದೆ ಬೃಹತ್ ಆಕಾಶಕಾಯವೊಂದು ಭೂಮಿಗೆ ಜೋರಾಗಿ ಅಪ್ಪಳಿಸಿತ್ತು. 1.2 ಮೈಲು ಮೀಟರ್ ಅಗಲವಾಗಿದ್ದ ಈ ಉಲ್ಕಾ ಶಿಲೆ ಅಪ್ಪಳಿಸಿದ ರಭಸಕ್ಕೆ ಭೂಮಿಯ ಶೇ 10ರಷ್ಟು ಮೇಲ್ಮೈಯುದ್ದಕ್ಕೂ ಶಿಲೆಯ ಅವಶೇಷಗಳು ಚೆಲ್ಲಾಪಿಲ್ಲಿಯಾಗಿ ಹರಡಿತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಗಾಜಿನ ಹನಿಗಳ ರೂಪದಲ್ಲಿರುವ ಗಾಜಿನ ಗೋಲಿ ಎಂದು ಕರೆಯಲಾಗುವ ಈ ಪುರಾತನ ಉಲ್ಕಾ ಶಿಲೆಯ ಅವಶೇಷಗಳನ್ನು ಏಷ್ಯಾ, ಆಸ್ಟ್ರೇಲಿಯಾ ಮತ್ತು ಅಂಟಾರ್ಟಿಕಾದಲ್ಲಿ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಆದರೆ ಇದುವರೆಗೂ ವಿಜ್ಞಾನಿಗಳಿಗೆ ಆ ಉಲ್ಕಾ ಶಿಲೆ ಯಾವ ಭಾಗದಲ್ಲಿ ಅಪ್ಪಳಿಸಿತ್ತು ಎನ್ನುವುದನ್ನು ಪತ್ತೆಹಚ್ಚುವುದು ಸಾಧ್ಯವಾಗಿಲ್ಲ. ಈ ಹುಡುಕಾಟ ಆರಂಭಿಸಿ ಒಂದು ಶತಮಾನವೇ ಉರುಳಿದೆ.

ಭೂಮಿ ಗಾತ್ರದ ಮತ್ತೊಂದು ಜಗತ್ತು ಕಂಡುಹಿಡಿದ ನಾಸಾಭೂಮಿ ಗಾತ್ರದ ಮತ್ತೊಂದು ಜಗತ್ತು ಕಂಡುಹಿಡಿದ ನಾಸಾ

ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ನಿಯತಕಾಲಿಕೆಯಲ್ಲಿ ಪ್ರಕಟಗೊಂಡಿರುವ ಹೊಸ ಲೇಖನವೊಂದರ ಪ್ರಕಾರ, ವಿಜ್ಞಾನಿಗಳು ಆಗ್ನೇಯ ಏಷ್ಯಾದ ಲಾವೋಸ್ ದೇಶದಲ್ಲಿನ ಅಗ್ನಿಪರ್ವತಗಳ ವಿಶಾಲ ಭೂಮಿಯಲ್ಲಿ ಈ ಭಾರಿ ಗಾತ್ರದ ಕಲ್ಲು ಅಪ್ಪಳಿಸಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಮೂರು ಖಂಡಗಳವರೆಗೂ ಅವಶೇಷಗಳನ್ನು ಹಾರಿಸಿದ್ದ ಈ ಉಲ್ಕಾಶಿಲೆ ಅಪ್ಪಳಿಸಿದ ಕುಳಿಯನ್ನು ವಿಜ್ಞಾನಿಗಳು ಕೊನೆಗೂ ಪತ್ತೆಹಚ್ಚಿದ್ದಾರೆ.

ಹಲವು ವರ್ಷಗಳ ಪ್ರಯತ್ನ

ಹಲವು ವರ್ಷಗಳ ಪ್ರಯತ್ನ

ಶಿಲೆ ಅಪ್ಪಳಿಸಿರಬಹುದಾದ ಸ್ಥಳವನ್ನು ಪತ್ತೆಹಚ್ಚಲು ಹಲವು ವರ್ಷಗಳಿಂದ ಅನೇಕ ಪ್ರಯತ್ನಗಳು ನಡೆದಿವೆ. ಉತ್ತರ ಕಾಂಬೋಡಿಯಾದಿಂದ ಕೇಂದ್ರ ಲಾವೋಸ್‌ ಮತ್ತು ದಕ್ಷಿಣ ಚೀನಾದವರೆಗೆ, ಪೂರ್ವ ಥಾಯ್ಲೆಂಡ್‌ನಿಂದ ವಿಯೆಟ್ನಾಂನ ಕಡಲ ತೀರದವರೆಗಿನ ಸ್ಥಳಗಳಲ್ಲಿ ಈ ಘಟನೆ ನಡೆದಿರಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಲೇ ಇವೆ ಎಂದು ಅಧ್ಯಯನದ ನೇತೃತ್ವ ವಹಿಸಿರುವ ಕೆರ್ರಿ ಸೀಹ್ ಹೇಳಿದ್ದಾರೆ.

ಈ ಉಲ್ಕಾ ಶಿಲೆಯು ರಭಸದಿಂದ ಹೊಡೆದು ಸುಮಾರು 300 ಅಡಿಯವರೆಗೆ ಭೂಮಿಯ ಆಳಕ್ಕೆ ಹೊಕ್ಕಿದೆ. ಹೀಗಾಗಿ ಅದನ್ನು ಇದುವರೆಗೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎನ್ನುವುದು ತಂಡ ಅಭಿಪ್ರಾಯ.

ಅಪ್ಪಳಿಸಿದ ಶಿಲೆ

ಅಪ್ಪಳಿಸಿದ ಶಿಲೆ

ಬೃಹತ್ ಶಿಲೆಯು ಭೂಮಿಗೆ ಅಪ್ಪಳಿಸಿದಾಗ ಅದ ಅತಿ ಬಿಸಿಯಾದ ಕಲ್ಲಿನ ತುಂಡುಗಳು ಕರಗಿ ಆಕಾಶಕ್ಕೆ ಚಿಮ್ಮಿದ್ದವು. ಆ ವೇಗಕ್ಕೆ ಶಿಲೆಗಳ ಅವಶೇಷ ಅನೇಕ ದೇಶಗಳ ನಡುವೆ ಹಂಚಿ ಹೋಗಿತ್ತು. ಈ ದ್ರವ ರೂಪದ ಕಲ್ಲುಗಳು ಬಳಿಕ ಗಾಜಿನ ಗೋಲಿಗಳ ಸ್ವರೂಪ ಪಡೆದುಕೊಂಡವು. ಸಿಕ್ಕಿರುವ ಗಾಜು ಗೋಲಿಗಳನ್ನು ಪರಿಶೀಲನೆ ಮಾಡಿದಾಗ ಅವುಗಳನ್ನು ಸೃಷ್ಟಿಸಿದ ಉಲ್ಕಾ ಶಿಲೆಯನ್ನು ಪತ್ತೆಹಚ್ಚಲು ವಿಜ್ಞಾನಿಗಳಿಗೆ ಸಾಧ್ಯವಾಗುತ್ತದೆ.

ದಕ್ಷಿಣ ಲಾವೋಸ್‌ನಲ್ಲಿ ಸಿಕ್ಕ ಶಿಲಾ ಕುಳಿ

ದಕ್ಷಿಣ ಲಾವೋಸ್‌ನಲ್ಲಿ ಸಿಕ್ಕ ಶಿಲಾ ಕುಳಿ

ಈ ಕಲ್ಲುಗಳನ್ನು ಹುಡುಕುತ್ತಾ ಹೊರಟ ಸಂಶೋಧಕರಿಗೆ ಕಾಂಬೋಡಿಯಾ, ಕೇಂದ್ರ ಲಾವೋಸ್ ಮತ್ತು ದಕ್ಷಿಣ ಚೀನಾಗಳಲ್ಲಿನ ಸ್ಥಳಗಳಲ್ಲಿ ಪತ್ತೆಯಾದವು. ಆದರೆ ಅಲ್ಲಿ ಸಿಕ್ಕ ಮೂರೂ ಉಲ್ಕಾ ಶಿಲೆಗಳು ಅದು ಅಪ್ಪಳಿಸಿದ ಸ್ಥಳಕ್ಕಿಂತಲೂ ಹತ್ತಾರು ಮಿಲಿಯನ್ ವರ್ಷಗಳಷ್ಟು ಹಳೆಯವು. ಕೊನೆಗೆ ದಕ್ಷಿಣ ಲಾವೋಸ್‌ನ ಬೋಲವೆನ್ ಪ್ಲೇಟೂ ಎಂಬ ಪ್ರದೇಶದಲ್ಲಿ ತಾವು ಹುಡುಕುತ್ತಿದ್ದ 51,000-7,80000 ವರ್ಷದಷ್ಟು ಹಳೆಯ ಲಾವಾ ಹರಿವಿಕೆಯ ಶಿಲೆಗಳು ಪತ್ತೆಯಾಗಿವೆ.

1 ಸಾವಿರ ಅಡಿ ಆಳದವರೆಗೆ ಲಾವಾ

1 ಸಾವಿರ ಅಡಿ ಆಳದವರೆಗೆ ಲಾವಾ

2,300 ಚದರ ಮೈಲು ವಿಸ್ತೀರ್ಣದ ಪ್ರಸ್ಥಭೂಮಿಯಲ್ಲಿ 1 ಸಾವಿರ ಅಡಿ ಆಳದವರೆಗೆ ಲಾವಾ ಪದರ ಹಾಸಿಕೊಂಡಿದೆ. ಇಷ್ಟು ದಪ್ಪನೆಯ ಲಾವಾ ಚಾಚಿರುವುದನ್ನು ಗಮನಿಸಿದಾಗ ಉಲ್ಕಾ ಶಿಲೆ ಅಪ್ಪಳಿಸಿದ ಸ್ಥಳ ಇದೇ ಇರಬೇಕು ಎಂದು ವಿಜ್ಞಾನಿಗಳು ಊಹಿಸಿದ್ದಾರೆ. ಈ ಲಾವಾ ಹಾಸನ್ನು ಅಗೆದರೆ ತಮ್ಮ ಊಹೆಗೆ ಸೂಕ್ತವಾದ ಪುರಾವೆ ಸಿಗಲಿದೆ ಎಂದು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿ ಹೇಳುತ್ತದೆ.

English summary
Scientists have finally found the crater of 800,000 old site of meteorite crashes in earth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X