ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವಂತ ಜನರ ಶ್ವಾಸಕೋಶದಲ್ಲಿ ಪ್ಲಾಸ್ಟಿಕ್ ಪತ್ತೆ: ಅಧ್ಯಯನ

|
Google Oneindia Kannada News

ಹುಲ್ (ಇಂಗ್ಲೆಂಡ್) ಏಪ್ರಿಲ್ 7: ವಿಜ್ಞಾನಿಗಳು ಮೊದಲ ಬಾರಿಗೆ ಜೀವಂತ ಜನರ ಶ್ವಾಸಕೋಶದಲ್ಲಿ ಸಿಲುಕಿರುವ ಮೈಕ್ರೋಪ್ಲಾಸ್ಟಿಕ್‌ಗಳನ್ನು ಪತ್ತೆ ಹಚ್ಚಿದ್ದಾರೆ. ಈ ಮೈಕ್ರೋಪ್ಲಾಸ್ಟಿಕ್‌ ಸಣ್ಣ ತುಂಡುಗಳು ನಾವು ಉಸಿರಾಡುವ ಗಾಳಿಯ ಮೂಲಕ ನಮ್ಮ ದೇಹವನ್ನು ಸೇರಿಕೊಳ್ಳುತ್ತದೆ ಎಂದು ಅದ್ಯಾಯನವೊಂದು ಕಂಡುಹಿಡಿದಿದೆ. ಇದರಿಂದ ಉಸಿರಾಟದ ವ್ಯವಸ್ಥೆಯ ಮೇಲೆ ಅಪಾಯಕಾರಿ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಅಧ್ಯಯನ ಹೇಳಿದೆ.

ಶ್ವಾಸಕೋಶದಲ್ಲಿ ಪತ್ತೆಯಾದ ಮೈಕ್ರೋಪ್ಲಾಸ್ಟಿಕ್‌ಗಳು ಐದು ಮಿಲಿಮೀಟರ್‌ಗಳಿಗಿಂತ ಕಡಿಮೆ ಉದ್ದವಿರುವ ಸಣ್ಣ ಪ್ಲಾಸ್ಟಿಕ್ ತುಣುಕುಗಳಾಗಿವೆ. ಇವು ಸಾಗರಗಳು, ಪರ್ವತಗಳು ಮತ್ತು ಗಾಳಿಯಲ್ಲಿ ಹರಡಿರುವುದು ಕಂಡುಬಂದಿದೆ. ಇವುಗಳು ದೊಡ್ಡ ಪ್ಲಾಸ್ಟಿಕ್ ಅವಶೇಷಗಳಿಂದ ಉತ್ಪತ್ತಿಯಾಗಿ ಸಣ್ಣ ಮತ್ತು ಸಣ್ಣ ತುಂಡುಗಳಾಗಿ ಗಾಳಿಯಲ್ಲಿ, ಗಾಳಿಯ ಮೂಲಕ ನೀರಿನಲ್ಲಿ ಸೇರಿಕೊಳ್ಳುತ್ತವೆ. ಈ ಸಣ್ಣ ಕಣಗಳು ಸುಲಭವಾಗಿ ನೀರಿನ ಶೋಧನೆ ವ್ಯವಸ್ಥೆಗಳ ಮೂಲಕ ಹಾದುಹೋಗುತ್ತವೆ. ಇವು ಮನುಷ್ಯರಿಗೆ ಮಾತ್ರವಲ್ಲದೆ ಸಮುದ್ರದಲ್ಲೂ ಸೇರಿಕೊಳ್ಳುವುದರಿಂದ ಜಲಚರಗಳಿಗೂ ಅಪಾಯವನ್ನುಂಟುಮಾಡುತ್ತವೆ ಎಂದು ಅಧ್ಯಯನ ಹೇಳಿದೆ.

ಹಲ್ ಯಾರ್ಕ್ ಮೆಡಿಕಲ್ ಸ್ಕೂಲ್ ಮತ್ತು ಹಲ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ತಂಡವು ಪರೀಕ್ಷಿಸಿದ 13 ಶ್ವಾಸಕೋಶದ ಅಂಗಾಂಶ ಮಾದರಿಗಳಲ್ಲಿ 11 ರಲ್ಲಿ 39 ಮೈಕ್ರೋಪ್ಲಾಸ್ಟಿಕ್‌ಗಳನ್ನು ಕಂಡುಹಿಡಿದಿದೆ. ಈ ಪ್ರಯೋಗಗಳನ್ನು ಹಿಂದಿನ ಯಾವುದೇ ಪ್ರಯೋಗಾಲಯಲ್ಲಿ ಕಂಡುಹಿಡಿಯಲಾಗಿಲ್ಲ. ಹೀಗಾಗಿ ಈ ಅಧ್ಯಯನವನ್ನು ಜರ್ನಲ್ ಸೈನ್ಸ್ ಆಫ್ ದಿ ಟೋಟಲ್ ಎನ್ವಿರಾನ್‌ಮೆಂಟ್‌ನಿಂದ ಪ್ರಕಟಣೆಗಾಗಿ ಸ್ವೀಕರಿಸಲಾಗಿದೆ.

Scientists Discover Microplastic Stuck Deep Inside Lungs of Living People

"ಮೈಕ್ರೋಪ್ಲಾಸ್ಟಿಕ್‌ಗಳು ಈ ಹಿಂದೆ ಮಾನವ ಶವಗಳ ಶವಪರೀಕ್ಷೆಯ ಮಾದರಿಗಳಲ್ಲಿ ಕಂಡುಬಂದಿವೆ. ಇದು ಜೀವಂತ ಜನರ ಶ್ವಾಸಕೋಶದಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳನ್ನು ತೋರಿಸುವ ಮೊದಲ ದೃಢವಾದ ಅಧ್ಯಯನವಾಗಿದೆ. ಶ್ವಾಸಕೋಶದ ವಾಯುಮಾರ್ಗಗಳು ತುಂಬಾ ಕಿರಿದಾಗಿರುವುದರಿಂದ ಮೈಕ್ರೋಪ್ಲಾಸ್ಟಿಕ್‌ಗಳು ಅಲ್ಲಿಗೆ ಹೋಗಬಹುದೆಂದು ಹೇಳಲಾಗುತ್ತಿದೆ" ಎಂದು ಹಲ್ ಯಾರ್ಕ್ ಮೆಡಿಕಲ್ ಸ್ಕೂಲ್‌ನ ಹಿರಿಯ ಉಪನ್ಯಾಸಕ ಮತ್ತು ಪತ್ರಿಕೆಯ ಪ್ರಮುಖ ಲೇಖಕ ಡಾ. ಲಾರಾ ಸಡೋಫ್ಸ್ಕಿ ಹೇಳಿದ್ದಾರೆ.

Scientists Discover Microplastic Stuck Deep Inside Lungs of Living People

ಆರಂಭದಲ್ಲಿ ಈ ಸಣ್ಣ ಪ್ಲಾಸ್ಟಿಕ್ ಕಣಗಳು ಶವಗಳಲ್ಲಿ ಕಂಡುಬಂದವು. ಇದರಿಂದ ಜೀವಂತವಾಗಿರುವ ರೋಗಿಗಳ ಮೇಲೆ ನಡೆಸಿದ ಶಸ್ತ್ರಚಿಕಿತ್ಸಾ ವಿಧಾನಗಳಿಂದ ಸಂಗ್ರಹಿಸಿದ ಜೀವಂತ ಶ್ವಾಸಕೋಶದ ಅಂಗಾಂಶಗಳ ಮೇಲೆ ಅಧ್ಯಯನವನ್ನು ನಡೆಸಲಾಯಿತು.

Scientists Discover Microplastic Stuck Deep Inside Lungs of Living People

ವಿಜ್ಞಾನಿಗಳು 12 ವಿವಿಧ ರೀತಿಯ ಮೈಕ್ರೋಪ್ಲಾಸ್ಟಿಕ್‌ಗಳನ್ನು ಕಂಡುಹಿಡಿದಿದ್ದಾರೆ. ಅವುಗಳಲ್ಲಿ ಸಾಮಾನ್ಯವಾಗಿ ಪ್ಯಾಕೇಜಿಂಗ್ ಪೇಪರ್ ಚೂರು, ಪ್ಲಾಸ್ಟಿಕ್ ಬಾಟಲಿಗಳ ಚೂರುಗಳು, ಬಟ್ಟೆ, ಹಗ್ಗ/ದಾರ ಮತ್ತು ಅನೇಕ ಉತ್ಪಾದನಾ ಪ್ರಕ್ರಿಯೆಗಳಲ್ಲಿ ಬಳಸುವ ವಸ್ತುಗಳಾಗಿವೆ. ಸ್ತ್ರೀಯರಿಗೆ ಹೋಲಿಸಿದರೆ ಪುರುಷ ರೋಗಿಗಳಲ್ಲಿ ಗಣನೀಯವಾಗಿ ಹೆಚ್ಚಿನ ಪ್ರಮಾಣದ ಮೈಕ್ರೋಪ್ಲಾಸ್ಟಿಕ್‌ಗಳು ಕಂಡುಬಂದಿವೆ ಎಂದು ತಂಡವು ಹೇಳಿದೆ.

"ನಾವು ಶ್ವಾಸಕೋಶದ ಕೆಳಗಿನ ಭಾಗಗಳಲ್ಲಿ ಅತ್ಯಧಿಕ ಸಂಖ್ಯೆಯ ಕಣಗಳನ್ನು ಕಂಡುಹಿಡಿಯಲು ನಿರೀಕ್ಷಿಸಿರಲಿಲ್ಲ. ಶ್ವಾಸಕೋಶದ ಕೆಳಗಿನ ಭಾಗಗಳಲ್ಲಿ ವಾಯುಮಾರ್ಗಗಳು ಚಿಕ್ಕದಾಗಿರುವುದರಿಂದ ಇದು ಆಶ್ಚರ್ಯಕರವಾಗಿದೆ ಮತ್ತು ನಾವು ಆ ಭಾಗದಲ್ಲಿ ಸಣ್ಣ ಕಣಗಳನ್ನು ಪತ್ತೆ ಹಚ್ಚಿದ್ದೇವೆ" ಎಂದು ಡಾ. ಲಾರಾ ಹೇಳಿದರು.

ಶ್ವಾಸಕೋಶದ ಮೇಲ್ಭಾಗದಲ್ಲಿ 11 ಮೈಕ್ರೋಪ್ಲಾಸ್ಟಿಕ್‌ಗಳು, ಮಧ್ಯ ಭಾಗದಲ್ಲಿ ಏಳು ಮತ್ತು ಶ್ವಾಸಕೋಶದ ಕೆಳಭಾಗದಲ್ಲಿ 21 ಮೈಕ್ರೋಪ್ಲಾಸ್ಟಿಕ್‌ಗಳು ಇರುವುದು ಅಧ್ಯಯನ ಬಹಿರಂಗಪಡಿಸಿದೆ. ಜೊತೆಗೆ ಇದು ಅನಿರೀಕ್ಷಿತ ಸಂಶೋಧನೆಯಾಗಿದೆ ಎಂದು ಹೇಳಿದ್ದಾರೆ.

English summary
Scientists have for the first time discovered microplastics stuck in the lungs of living people in a major study indicating that we are inhaling these dangerous substances without even knowing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X